ದೇಶ

ಮುಂಬೈ ಕಮಲಾ ಮಿಲ್ಸ್ ಅಗ್ನಿ ದುರಂತ: ಪಬ್ ಮಾಲೀಕನ ಬಂಧನ

ಮುಂಬೈನ ಕಮಲಾ ಮಿಲ್ಸ್ ಕಾಪೌಂಡ್ ನ ಪಬ್ ನಲ್ಲಿ ನಡೆದ ಅಗ್ನಿ ದುರಂತ ಪ್ರಕರಣಕ್ಕೆ ಸಂಬಂಧಿಸಿದಂತೆ ಮೋಜೋಸ್ ಬಿಸ್ಟ್ರೋ ಪಬ್ ಮಾಲೀಕ....

ಮುಂಬೈ ಕಮಲಾ ಮಿಲ್ಸ್ ಅಗ್ನಿ ದುರಂತ: ಪಬ್ ಮಾಲೀಕನ ಬಂಧನ
ಮುಂಬೈ ಕಮಲಾ ಮಿಲ್ಸ್ ಅಗ್ನಿ ದುರಂತ
Published On :
ಮುಂಬೈ: ಮುಂಬೈನ ಕಮಲಾ ಮಿಲ್ಸ್ ಕಾಪೌಂಡ್ ನ ಪಬ್ ನಲ್ಲಿ ನಡೆದ ಅಗ್ನಿ ದುರಂತ ಪ್ರಕರಣಕ್ಕೆ ಸಂಬಂಧಿಸಿದಂತೆ ಮೋಜೋಸ್ ಬಿಸ್ಟ್ರೋ ಪಬ್ ಮಾಲೀಕ ಹಾಗೂ ನಿವೃತ್ತ ಐಪಿಎಸ್ ಅಧಿಕಾರಿ ಪುತ್ರ ಯುಗ್ ಪಾಠಕ್ ಅವರನ್ನು ಶನಿವಾರ ಪೊಲೀಸರು ಬಂಧಿಸಿದ್ದಾರೆ.
ಅಗ್ನಿ ಅವಘಡದ ನಂತರ ತಲೆಮರೆಸಿಕೊಂಡಿದ್ದ ನಿವೃತ್ತ ಪೊಲೀಸ್ ಮಹಾ ನಿರ್ದೇಶಕ ಹಾಗೂ ಪುಣೆ ಪೊಲೀಸ್ ಆಯುಕ್ತ ಕೆಕೆ ಪಾಠಕ್ ಅವರ ಪುತ್ರ ಯುಗ್ ಪಾಠಕ್ ಅವರನ್ನು ಎನ್ ಎಂ ಜೋಶಿ ಮಾರ್ಗ ಪೊಲೀಸ್ ಠಾಣೆಯ ಪೊಲೀಸರು ಇಂದು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. 
ಕಳೆದ ಡಿಸೆಂಬರ್ 29ರಂದು 14 ಮಂದಿಯ ಸಾವಿಗೆ ಕಾರಣವಾದ ಮುಂಬೈನ ಕಮಲಾ ಮಿಲ್ಸ್ ಕಾಪೌಂಡ್ ನಲ್ಲಿರುವ ರೂಫ್ ಟಾಪ್ ಪಬ್ ನ ಮಾಲೀಕನ ಬಂಧನಕ್ಕೆ ಬಲೆ ಬೀಸಿದ್ದ ಪೊಲೀಸರು ಯುಗ್ ಪಾಠಕ್ ಅವರ ಭಾವಚಿತ್ರಗಳಿರುವ ಪೋಸ್ಟರ್ ಗಳನ್ನು ನಗರದಲ್ಲಿ ಅಂಟಿಸಿದ್ದರು. 
ನಿನ್ನೆಯಷ್ಟೇ ಅಗ್ನಿ ದುರಂತ ಪ್ರಕರಣದ ತನಿಖಾಧಿಕಾರಿಗಳು ಮುಂಬೈ ಮಹಾನಗರ ಪಾಲಿಕೆ ಆಯುಕ್ತರಿಗೆ ಅಗ್ನಿ ದುರಂತದ ವರದಿ ನೀಡಿದ್ದರು. ವರದಿಯಲ್ಲಿ ಅಗ್ನಿ ದುರಂತಕ್ಕೆ ರೂಫ್ ಟಾಪ್ ಪಬ್ ಗಳಲ್ಲಿ ಅಕ್ರಮವಾಗಿ  ಮಾರಾಟ ಮಾಡುತ್ತಿದ್ದ ಹುಕ್ಕಾಗಳು ಕಾರಣವಾಗಿರಬಹುದು ಎಂದು ಅಧಿಕಾರಿಗಳು ಶಂಕೆ ವ್ಯಕ್ತಪಡಿಸಿದ್ದಾರೆ. ಅಂತೆಯೇ ಅಗ್ನಿ ದುರಂತಕ್ಕೆ ಒಳಪಟ್ಟ ರೂಫ್ ಟಾಪ್ ಪಬ್ ಗಳಾದ ಮೋಜೋಸ್ ಬಿಸ್ಟ್ರೋ ಮತ್ತು 1 ಅಬೋವ್ ಪಬ್  ಗಳೆರಡೂ ಪಾಲಿಕೆ ನಿಯಮವನ್ನು ಗಾಳಿಗೆ ತೂರಿ ಅಕ್ರಮವಾಗಿ ಅನುಮತಿ ಇಲ್ಲದೇ ಹುಕ್ಕಾ ಬಾರ್ ಗಳನ್ನು ನಡೆಸುತ್ತಿದ್ದವು. ಆದರೆ ಈ ಬಗ್ಗೆ ಯಾವುದೇ ರೀತಿಯ ಸುರಕ್ಷತಾ ಮುಂಜಾಗ್ರತಾ ಕ್ರಮಗಳನ್ನು ಕೈಗೊಂಡಿರಲಿಲ್ಲ ಎಂದು  ಅಧಿಕಾರಿಗಳು ವರದಿಯಲ್ಲಿ ಉಲ್ಲೇಖ ಮಾಡಿದ್ದಾರೆ ಎಂದು ತಿಳಿದುಬಂದಿದೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.