ವೈಟ್ ಹೌಸ್ ಸಂವಹನ ಸಂಪರ್ಕ ನಿರ್ದೇಶಕಿ ಹೊಪ್ ಹಿಕ್ಸ್ ರಾಜಿನಾಮೆ!
ಅಚ್ಚರಿ ಬೆಳವಣಿಗೆಯಲ್ಲಿ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ಆಪ್ತೆ ಮತ್ತು ವೈಟ್ ಹೌಸ್ ನ ಸಂವಹನ ಸಂಪರ್ಕ ನಿರ್ದೇಶಕಿ ಹೊಪ್ ಹಿಕ್ಸ್ ರಾಜಿನಾಮೆ ನೀಡಲು ಮುಂದಾಗಿದ್ದಾರೆ.

Published On :
ವಾಷಿಂಗ್ಟನ್: ಅಚ್ಚರಿ ಬೆಳವಣಿಗೆಯಲ್ಲಿ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ಆಪ್ತೆ ಮತ್ತು ವೈಟ್ ಹೌಸ್ ನ ಸಂವಹನ ಸಂಪರ್ಕ ನಿರ್ದೇಶಕಿ ಹೊಪ್ ಹಿಕ್ಸ್ ರಾಜಿನಾಮೆ ನೀಡಲು ಮುಂದಾಗಿದ್ದಾರೆ.
ಅಧ್ಯಕ್ಷ ಟ್ರಂಪ್ ಆಡಳಿತದಲ್ಲಿ ಸುಧೀರ್ಘವಾಗಿ ಕಾರ್ಯ ನಿರ್ವಹಿಸಿದ ಅಧಿಕಾರಿಯಾಗಿದ್ದ ಹೊಪ್ ಹಿಕ್ಸ್ ತಮ್ಮ ಸ್ಥಾನಕ್ಕೆ ರಾಜಿನಾಮೆ ನೀಡುತ್ತಿದ್ದು, ಈ ಬಗ್ಗೆ ಸ್ವತ- ಅಮೆರಿಕ ಸರ್ಕಾರ ಸ್ಪಷ್ಟನೆ ನೀಡಿದೆ. ಹೊಪ್ ಹಿಕ್ಸ್ ಅವರಿಗೆ ಇದಕ್ಕಿಂತ ದೊಡ್ಡದಾದ ಆಫರ್ ಬಂದಿರಬಹುದು. ಹೀಗಾಗಿ ಅವರು ತಮ್ಮ ಸ್ಥಾನ ತೊರೆಯುತ್ತಿದ್ದಾರೆ ಎಂದು ಹೇಳಿದೆ. ಇನ್ನು ಹೊಪ್ ಹಿಕ್ಸ್ ಯಾವ ದಿನಾಂಕದಂದು ರಾಜಿನಾಮೆ ನೀಡುತ್ತಾರೆ ಎಂದು ತಿಳಿದಿಲ್ಲವಾದರೂ, ಇನ್ನು ಕೆಲವೇ ವಾರಗಳಲ್ಲಿ ಆಕೆ ರಾಜಿನಾಮೆ ನೀಡುತ್ತಾರೆ ಎಂದು ಹೇಳಲಾಗಿದೆ.
ತಮ್ಮ ಆಪ್ತೆ 29 ವರ್ಷದ ಹೊಪ್ ಹಿಕ್ಸ್ ರಾಜಿನಾಮೆ ಕುರಿತು ಮಾತನಾಡಿರುವ ಅಧ್ಯಕ್ಷ ಡೊನಾಲ್ಡ್ ಟ್ರಂಪ್, ಆಕೆ ನಿಜಕ್ಕೂ ಓರ್ವ ಒಳ್ಳೆಯ ಸಹೋದ್ಯೋಗಿಯಾಗಿದ್ದರು. ಅವರ ಕರ್ತವ್ಯ ನಿಷ್ಛೆ ನನಗೆ ಬಹಳ ಮೆಚ್ಚುಗೆಯಾಗುತ್ತಿತ್ತು. ಕಳೆದ ಮೂರು ವರ್ಷಗಳಲ್ಲಿ ವಿವಿಧ ಸರ್ಕಾರದ ವಿವಿಧ ಹುದ್ದೆಗಳಲ್ಲಿ ಅವರು ಸಲ್ಲಿಸಿದ ಸೇವೆ ಅಪಾರ. ಬಹುಶಃ ಇದಕ್ಕಿಂತಲೂ ಒಳ್ಳೆಯ ಉದ್ಯೋಗ ಆಕೆಯನ್ನು ಅರಸಿ ಬಂದಿರಬೇಕು. ಆದರೆ ಆಕೆಯೊಂದಿಗೆ ಮತ್ತೆ ಒಗ್ಗೂಡಿ ಕೆಲಸ ಮಾಡಲು ನಾನು ಬಯಸುತ್ತೇನೆ ಎಂದು ಟ್ರಂಪ್ ಹೇಳಿದ್ದಾರೆ.
ಇನ್ನು 2016ರಲ್ಲಿ ಅಮೆರಿಕ ಅಧ್ಯಕ್ಷೀಯ ಚುನಾವಣೆ ವೇಳೆ ರಷ್ಯಾ ಬೇಹುಗಾರಿಕೆ ಸಂಬಂಧ ವರದಿ ಬಿಡುಗಡೆಯಾದ ಬೆನ್ನಲ್ಲೇ ಹೊಪ್ ಹಿಕ್ಸ್ ರಾಜಿನಾಮೆ ನೀಡುತ್ತಿರುವುದು ಹಲವರಲ್ಲಿ ಶಂಕೆ ಮೂಡಿಸಿದೆ. 2017ರ ಜನವರಿಯಲ್ಲಿ ಟ್ರಂಪ್ ಅಮೆರಿಕ ಅಧ್ಯಕ್ಷರಾಗಿ ಆಯ್ಕೆಯಾಗಿದ್ದರು. ಇದಕ್ಕೂ ಮೊದಲು ಇದೇ ಹೊಪ್ ಹಿಕ್ಸ್ ಟ್ರಂಪ್ ಅವರ ಚುನಾವಣಾ ಪ್ರಚಾರದ ಮುಖ್ಯಸ್ಥರಾಗಿ ಕಾರ್ಯ ನಿರ್ವಹಿಸಿದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


