ದೇಶ

ಲಖನೌ: ಹೋಳಿ ಹಿನ್ನಲೆ ಶುಕ್ರವಾರದ ನಮಾಜ್ ಸಮಯವನ್ನು ಬದಲಿಸಿದ ಮುಸ್ಲಿಂ ಧರ್ಮಗುರು!

ಮಾರ್ಚ್ 2ರಂದು ದೇಶಾದ್ಯಂತ ಹೋಳಿ ಸಂಭ್ರಮಾಚರಣೆ ಹಿನ್ನೆಲೆಯಲ್ಲಿ ಯಾವುದೇ ಅಹಿತಕರ ಘಟನೆಗಳಿಗೆ ಅವಕಾಶ ಕೊಡದಂತೆ ಮುಂಜಾಗ್ರತ ಕ್ರಮವಾಗಿ ಮುಸ್ಲಿಂ...

ಲಖನೌ: ಹೋಳಿ ಹಿನ್ನಲೆ ಶುಕ್ರವಾರದ ನಮಾಜ್ ಸಮಯವನ್ನು ಬದಲಿಸಿದ ಮುಸ್ಲಿಂ ಧರ್ಮಗುರು!
ಹೋಳಿ
Published On :
ಲಖನೌ: ಮಾರ್ಚ್ 2ರಂದು ದೇಶಾದ್ಯಂತ ಹೋಳಿ ಸಂಭ್ರಮಾಚರಣೆ ಹಿನ್ನೆಲೆಯಲ್ಲಿ ಯಾವುದೇ ಅಹಿತಕರ ಘಟನೆಗಳಿಗೆ ಅವಕಾಶ ಕೊಡದಂತೆ ಮುಂಜಾಗ್ರತ ಕ್ರಮವಾಗಿ ಮುಸ್ಲಿಂ ಧರ್ಮಗಳು ಶುಕ್ರವಾರ ನಮಾಜ್ ಸಮಯವನ್ನು ಮುಂದೂಡಿದ್ದಾರೆ. 
ಉತ್ತರ ಪ್ರದೇಶದಲ್ಲಿ ಅಸಫಿ(ಬಾದಾ) ಇಮಾಂಬರಾದಲ್ಲಿ ನಡೆಯುವ ಶುಕ್ರವಾರದ ನಮಾಜ್ ಸಮಯವನ್ನು ಶಿಯಾ ಧರ್ಮ ಗುರುಗಳಾದ ಮೌಲಾನಾ ಕಲ್ಬೆ ಜವಾದ್ ಅವರು 1 ಗಂಟೆ ಕಾಲ ಮುಂದೂಡಿದ್ದಾರೆ. 
ಹೋಳಿ ಹಬ್ಬದಂದು ಮಧ್ಯಾಹ್ನದ ವೇಳೆ ರಂಗಿನೋಕುಳಿ ಆಡುವ ಹಿಂದೂ ಬಾಂಧವರಿಗೆ ತೊಂದರೆಯಾಗಬಾರದು ಎಂಬ ಉದ್ದೇಶದಿಂದ ಈ ನಿರ್ಧಾರ ತೆಗೆದುಕೊಳ್ಳಲಾಗಿದೆ ಎಂದು ಮೌಲಾನಾ ಕಲ್ಬೆ ಜವಾದ್ ಸ್ಪಷ್ಟಪಡಿಸಿದ್ದಾರೆ. 
ಐಸಾಬಾಗ್ ಈದ್ಗಾ ಮೈದಾನದಲ್ಲಿ 12.45ರ ಬದಲಿಗೆ 1.45ಕ್ಕೆ ಹಾಗೂ ಅಸಾಫಿ ಮಸೀದಿಯಲ್ಲಿ 12.22ರ ಬದಲಿಗೆ ಮಧ್ಯಾಹ್ನ 1 ಗಂಟೆಗೆ ಪ್ರಾರ್ಥನೆ ನಡೆಸಲಾಗುವುದು ಎಂದರು. 
ಸಾಮಾನ್ಯವಾಗಿ ಹೋಳಿ ಆಚರಿಸಲು ಮಧ್ಯಾಹ್ನ 12 ಗಂಟೆಯವರೆಗೂ ಅವಕಾಶವಿರುತ್ತದೆ. ಆದರೆ, ನಿಗದಿತ ಸಮಯ ಮೀರುವುದು ಸರ್ವೇ ಸಾಮಾನ್ಯ. ಉಭಯ ಸಮುದಾಯಗಳ ನಡುವಿನ ಕೋಮು ಸಾಮರಸ್ಯ ಕಾಯ್ದುಕೊಳ್ಳುವ ನಿಟ್ಟಿನಲ್ಲಿ ನಮಾಜ್ ಸಮಯದಲ್ಲಿ ಬದಲಾವಣೆ ಮಾಡಲಾಗಿದೆ ಎಂದು ಮೌಲಾನಾ ತಿಳಿಸಿದ್ದಾರೆ. 

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.