ದೇಶ

ಲುಕ್ ಈಸ್ಟ್ ನೀತಿ: ಭಾರತಕ್ಕೆ ಬರಲಿರುವ ವಿಯೆಟ್ನಾಮ್ ಅಧ್ಯಕ್ಷರು

ರಾಷ್ಟ್ರಪತಿ ರಾಮನಾಥ್ ಕೋವಿಂದ್ ಅವರ ಆಹ್ವಾನದ ಮೇರೆಗೆ ವಿಯೆಟ್ನಾಮ್ ಅಧ್ಯಕ್ಷ ಟ್ರಾನ್ ಡೈ ಕ್ವಾಂಗ್ ಭಾರತಕ್ಕೆ ಆಗಮಿಸುತ್ತಿದ್ದಾರೆ.

ಲುಕ್ ಈಸ್ಟ್ ನೀತಿ: ಭಾರತಕ್ಕೆ ಬರಲಿರುವ ವಿಯೆಟ್ನಾಮ್ ಅಧ್ಯಕ್ಷರು
ವಿಯೆಟ್ನಾಮ್ ಅಧ್ಯಕ್ಷರು
Published On :
ನವದೆಹಲಿ: ರಾಷ್ಟ್ರಪತಿ ರಾಮನಾಥ್ ಕೋವಿಂದ್ ಅವರ ಆಹ್ವಾನದ ಮೇರೆಗೆ ವಿಯೆಟ್ನಾಮ್ ಅಧ್ಯಕ್ಷ  ಟ್ರಾನ್ ಡೈ ಕ್ವಾಂಗ್ ಭಾರತಕ್ಕೆ ಆಗಮಿಸುತ್ತಿದ್ದಾರೆ. 
ಟ್ರಾನ್ ಡೈ ಕ್ವಾಂಗ್ ಅವರೊಂದಿಗೆ ವಿಯೆಟ್ನಾಮ್ ನ ಕಮ್ಯುನಿಸ್ಟ್ ಪಕ್ಷದ ನಾಯಕರೂ ಆಗಮಿಸಲಿದ್ದು, ಉದ್ಯಮಿಗಳ ನಿಯೋಗವೂ ಭಾರತಕ್ಕೆ ಭೇಟಿ ನೀಡಲಿದೆ ಎಂದು ವಿದೇಶಾಂಗ ಇಲಾಖೆ ಹೇಳಿದೆ. ಭಾರತ ಭೇಟಿಯಲ್ಲಿ ಕ್ವಾಂಗ್ ರಾಷ್ಟ್ರಪತಿ ರಾಮನಾಥ್ ಕೋವಿಂದ್ ಅವರನ್ನು ಭೇಟಿ ಮಾಡಾಲಿದ್ದು, ಭಾರತದ ಪ್ರಮುಖ ಉದ್ಯಮಿಗಳೊಂದಿಗೆ ಸಭೆ ನಡೆಸಲಿದ್ದಾರೆ. 
ವಿಯೆಟ್ನಾಮ್ ಅಧ್ಯಕ್ಷರ ಭೇಟಿಯಿಂದ ಭಾರತ-ವಿಯೆಟ್ನಾಮ್ ನಡುವಿನ ಸಮಗ್ರ ಕಾರ್ಯತಂತ್ರದ ಪಾಲುದಾರಿಕೆ ಮತ್ತಷ್ಟು ವೃದ್ಧಿಯಾಗಲಿದೆ ಎಂಬ ನಿರೀಕ್ಷೆ ಇದೆ. 

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.