ಏರ್ ಇಂಡಿಯಾದಲ್ಲಿ ಪ್ರಧಾನಿ ಮೋದಿ ವಿದೇಶ ಪ್ರಯಾಣದ ಬಿಲ್ ವಿವರ ಬಹಿರಂಗಪಡಿಸಿ: ಸಿಐಸಿ
ಪ್ರಧಾನಿ ನರೇಂದ್ರಮೋದಿ ವಿದೇಶ ಪ್ರಯಾಣದ ಬಿಲ್ ವಿವರ ಬಹಿರಂಗಪಡಿಸುವಂತೆ ಕೇಂದ್ರ ಮಾಹಿತಿ ಆಯೋಗ , ವಿದೇಶಾಂಗ ಸಚಿವಾಲಯಕ್ಕೆ ಆದೇಶಿಸಿದೆ.

ನವದೆಹಲಿ: ಪ್ರಧಾನಿ ನರೇಂದ್ರಮೋದಿ 2013ರಿಂದ 2017ರವರೆಗೂ ಏರ್ ಇಂಡಿಯಾದಲ್ಲಿ ಕೈಗೊಂಡಿದ್ದ ವಿದೇಶ ಪ್ರಯಾಣದ ಬಿಲ್ ವಿವರ ಬಹಿರಂಗಪಡಿಸುವಂತೆ ಕೇಂದ್ರ ಮಾಹಿತಿ ಆಯೋಗ , ವಿದೇಶಾಂಗ ಸಚಿವಾಲಯಕ್ಕೆ ಆದೇಶಿಸಿದೆ.
ಪ್ರಧಾನಮಂತ್ರಿಯವರ ವಿದೇಶದ ಪ್ರವಾಸ ಸಂಬಂಧ ಬಿಲ್ ವಿವಾದ ಸಂಬಂಧ ವಿದೇಶಾಂಗ ವ್ಯವಹಾರ ಸಚಿವಾಲಯದ ವಾದವನ್ನು ಕೇಂದ್ರ ಮಾಹಿತಿ ಆಯುಕ್ತ ಆರ್. ಕೆ. ಮಥೂರ್ ತಿರಸ್ಕರಿಸಿದ್ದಾರೆ.
ನಿವೃತ್ತ ಕಮಾಂಡರ್ ಲೋಕೇಶ್ ಬಾತ್ರ , ಪ್ರಧಾನಿ ನರೇಂದ್ರಮೋದಿ 2013-14 ಮತ್ತು 2016-17ರ ಅವಧಿಯ ಮಧ್ಯೆ ಕೈಗೊಂಡಿದ್ದ ವಿದೇಶದ ಪ್ರವಾಸದ ಬಿಲ್ ವಿವರ ಮತ್ತಿತರ ಮಾಹಿತಿ ಒದಗಿಸುವಂತೆ ಕೇಳಿದ್ದರು.
ಈ ಸಂಬಂಧ ವಿದೇಶಾಂಗ ಸಚಿವಾಲಯ ಅಪೂರ್ಣ ಮಾಹಿತಿ ಒದಗಿಸಿದ ಹಿನ್ನೆಲೆಯಲ್ಲಿ ಕೇಂದ್ರ ಮಾಹಿತಿ ಆಯೋಗಕ್ಕೆ ಆರ್ ಟಿ ಐ ಯಡಿ ಅರ್ಜಿ ಸಲ್ಲಿಸಿದ್ದರು.
ಸಾರ್ವಜನಿಕರಿಗೆ ಮಾಹಿತಿ ನೀಡಲು ಈ ವಿವರ ಪಡೆಯುತ್ತಿದ್ದು,ಇದನ್ನು ನೀಡುವಲ್ಲಿ ವಿಳಂಬವಾಗಿದೆ ಎಂದು ವಿಚಾರಣೆ ವೇಳೆ ಲೋಕೇಶ್ ಬಾತ್ರ ಹೇಳಿದ್ದರು.
ಎರಡು ಕಡೆ ವಾದ ಆಲಿಸಿದ ಮಥೂರ್, ವಿದೇಶಾಂಗ ವ್ಯವಹಾರ ಸಚಿವಾಲಯದ ವಾದ ತಿರಸ್ಕರಿಸಿ, ವಿಳಂಬವಾಗಿರುವ ಪಾವತಿಗೆ ಬಿಲ್ ,
ಇನ್ ವಾಯ್ಸ್ ಸಂಗ್ರಹ ಅಗತ್ಯವಾಗಿದೆ. ಇವುಗಳ ಸಂಗ್ರಹದ ನಂತರ ಪಾವತಿಸಬೇಕು ಎಂದು ಹೇಳಿದ್ದಾರೆ
ಇದು ಆಯೋಗದ ನಿರ್ಧಾರ ವಾಗಿದ್ದು,ವಿದೇಶಾಂಗ ವ್ಯವಹಾರಗಳ ಸಚಿವಾಲಯ ಪ್ರತಿಕ್ರಿಯಿಸುವಂತೆ ಸೂಚಿಸಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


