ದೇಶ

ರುಸ್ತುಂ 2 ಡ್ರೋಣ್ ಪ್ರಯೋಗಾರ್ಥ ಪರೀಕ್ಷೆ ಯಶಸ್ವಿ; ಪಾಕ್-ಚೀನಾಗೆ ನಡುಕ

ರಕ್ಷಣಾ ಸಂಶೋಧನೆ ಮತ್ತು ಅಭಿವೃದ್ಧಿ ಸಂಸ್ಥೆ(ಡಿಆರ್‌ಡಿಒ) ಮಾನವ ರಹಿತ ಯುದ್ಧ ವಿಮಾನ ರುಸ್ತುಂ-2 ಪ್ರಯೋಗಾರ್ಥ ಪರೀಕ್ಷೆ ಯಶಸ್ವಿಯಾಗಿದೆ...

ರುಸ್ತುಂ 2 ಡ್ರೋಣ್ ಪ್ರಯೋಗಾರ್ಥ ಪರೀಕ್ಷೆ ಯಶಸ್ವಿ; ಪಾಕ್-ಚೀನಾಗೆ ನಡುಕ
ರುಸ್ತುಂ2
Published On :
ಚಿತ್ರದುರ್ಗ: ರಕ್ಷಣಾ ಸಂಶೋಧನೆ ಮತ್ತು ಅಭಿವೃದ್ಧಿ ಸಂಸ್ಥೆ(ಡಿಆರ್‌ಡಿಒ) ಮಾನವ ರಹಿತ ಯುದ್ಧ ವಿಮಾನ ರುಸ್ತುಂ-2 ಡ್ರೋಣ್ ಪ್ರಯೋಗಾರ್ಥ ಪರೀಕ್ಷೆ ಯಶಸ್ವಿಯಾಗಿದೆ. 
ಮೇಕ್ ಇನ್ ಇಂಡಿಯಾ ಭಾಗವಾಗಿ ಡ್ರೋನ್ ರೀತಿಯ ಯುದ್ಧ ವಿಮಾನವನ್ನು ತಯಾರಿಸಲಾಗಿತ್ತು. ಈ ಡ್ರೋಣ್ ಶಕ್ತಿಶಾಲಿ ಎಂಜಿನ್ ಹೊಂದಿದ್ದು 24 ಗಂಟೆ ಹಾರಾಟ ನಡೆಸಬಲ್ಲ, ಕಣ್ಗಾವಲು ಇಡುವ, ಯುದ್ಧ ಸಾಮಗ್ರಿಗಳನ್ನು ಕೊಂಡೊಯ್ಯಲು ಶಕ್ತವಾಗಿದೆ. 
2009ರ ನವೆಂಬರ್ 16ರಂದು ರುಸ್ತುಂ-1 ಪ್ರಯೋಗ ಯಶಸ್ವಿಯಾಗಿತ್ತು. ಏಳು ವರ್ಷ ನಂತರ ಸ್ವದೇಶಿ ನಿರ್ಮಿತ ರಕ್ಷಣಾ ವಿಮಾನಗಳ ಯಶಸ್ಸು ಹೊಸ ಭರವಸೆ ಮೂಡಿಸಿದೆ. 
ಇಂದು ನಡೆದ ಪ್ರಯೋಗಾರ್ಥ ಪರೀಕ್ಷೆಗೆ ಡಿಆರ್‌ಡಿಒ ಮುಖ್ಯಸ್ಥ ಕ್ರಿಸ್ಟರ್, ಡೈರಕ್ಟರ್ ಜನರಲ್ ಸಿಪಿ ರಾಮನಾರಾಯಣನ್, ಜೆ ಮಂಜುಳಾ ಘಟನೆಗೆ ಸಾಕ್ಷಿಯಾಗಿದ್ದರು. ಎಂದು ಡಿಆರ್‌ಡಿಒ ಪ್ರಕಟಣೆ ತಿಳಿಸಿದೆ. 

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.