ಶ್ರೀದೇವಿ ಪಾರ್ಥಿವ ಶರೀರ ಸೋಮವಾರ ಭಾರತಕ್ಕೆ ಆಗಮನ, ದುಬೈನಲ್ಲಿ ಮರಣೋತ್ತರ ಪರೀಕ್ಷೆ ಪೂರ್ಣ
ನಟಿ ಶ್ರೀದೇವಿ ಪಾರ್ಥಿವ ಶರೀರ ನಾಳೆ (ಸೋಮವಾರ) ಭಾರತಕ್ಕೆ ಕರೆತರಲಾಗುತ್ತದೆ ಎಂದು ಶ್ರೀದೇವಿ ಕುಟುಂಬಿಕರು ಹೇಳಿಕೆಯಲ್ಲಿ ತಿಳಿಸಿದ್ದಾರೆ.

Published On :
ಮುಂಬೈ: ನಟಿ ಶ್ರೀದೇವಿ ಪಾರ್ಥಿವ ಶರೀರ ನಾಳೆ (ಸೋಮವಾರ) ಭಾರತಕ್ಕೆ ಕರೆತರಲಾಗುತ್ತದೆ ಎಂದು ಶ್ರೀದೇವಿ ಕುಟುಂಬಿಕರು ಹೇಳಿಕೆಯಲ್ಲಿ ತಿಳಿಸಿದ್ದಾರೆ.
ತಮ್ಮ ಕುಟುಂಬದವರ ವಿವಾಹ ಸಮಾರಂಭದಲ್ಲಿ ಪಾಲ್ಗೊಳ್ಳಲು ದುಬೈ ಗೆ ತೆರಳಿದ್ದ ಶ್ರೀದೇವಿ ಶನಿವಾರ ರಾತ್ರಿ ಹೃದಯಾಘಾತದಿಂದಾಗಿ ಮೃತಪಟ್ಟಿದ್ದರು.
"ಬೋನಿ ಕಪೂರ್, ಜಾಹ್ನವಿ, ಖುಷಿ ಹಾಗೂ ಸಂಪೂರ್ಣ ಕಪೂರ್ ಕುಟುಂಬ, ಅಯ್ಯಪ್ಪನ್ ಹಾಗೂ ಮಾರ್ವಾ ಕುಟುಂಬವು ಶ್ರೀದೇವಿ ಕಪೂರ್ ಅವರ ಅಕಾಲಿಕ ನಿಧನದಿಂದ ಆಘಾತಕ್ಕೊಳಗಾಗಿದೆ" ಎಂದು ಕಪೂರ್ ಕುಟುಂಬದ ಪರವಾಗಿ ಯಶ್ ರಾಜ್ ಫಿಲಮ್ಸ್ ಬಿಡುಗಡೆಗೊಳಿಸಿದ ಹೇಳಿಕೆಯಲ್ಲಿ ತಿಳಿಸಿದೆ.
ಶ್ರೀದೇವಿ ಅವರ ಪಾರ್ಥಿವ ಶರೀರವು ನಾಳೆ (ಸೋಮವಾರ) ಭಾರತಕ್ಕೆ ಆಗಮಿಸಲಿದೆ,. ಸಂತಾಪ ವ್ಯಕ್ತಪಡಿಸಿದ, ಶ್ರೀದೇವಿ ಅವರ ಆತ್ಮಕ್ಕೆ ಶಾಂತಿ ಕೋರಿದ ಪ್ರತಿಯೊಬ್ಬರಿಗೆ ಧನ್ಯವಾದ ಎಂದು ಹೇಳಿಕೆಯಲ್ಲಿ ತಿಳಿಸಲಾಗಿದೆ.
ಶ್ರೀದೇವಿ ಅವರ ಕಳೇಬರವನ್ನು ಚಾರ್ಟರ್ಡ್ ವಿಮಾನದಲ್ಲಿ ಕರೆತರಲಾಗುತ್ತದೆ ಎನ್ನುವ ನಿರೀಕ್ಷೆ ಇದೆ. ಈ ಹಿಂದೆ ಯುಎಇ ಮಾದ್ಯಮಗಳ ವರದಿ ಸಹ ನಾಳೆ ಶ್ರೀದೇವಿ ದೇಹವು ಭಾರತಕ್ಕೆ ಆಗಮಿಸಲಿದೆ ಎಂದಿದ್ದವು.
ಶ್ರೀದೇವಿ ಪಾರ್ಥಿವ ಶರೀರದ ಶವಪರೀಕ್ಷೆಗಳು ಮುಕ್ತಾಯಗೊಂಡಿದೆ. ದುಬೈನ ಜನರಲ್ ಡಿಪಾರ್ಟ್‌ಮೆಂಟ್ ಆಫ್ ಫೋರೆನ್ಸಿಕ್ ನಲ್ಲಿ ಮರಣೋತ್ತರ ಪರೀಕ್ಷೆ ನಡೆಸಲಾಗಿದೆ. ಇದೀಗ ಮರಣೋತ್ತರ ಪರೀಕ್ಷಾ ವರದಿಗಾಗಿ ಕುಟುಂಬವು ಕಾಯುತ್ತಿದೆ ಎಂದು ಯುಎಇ ನ ಖಲೀಜ ಟೈಮ್ಸ್ ವರದಿ ಮಾಡಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


