ಸರ್ಕಾರ ಕಾಯಿದೆ ತರುವವರೆಗೂ ಮಕ್ಕಳನ್ನು ಹೆರುತ್ತಲೇ ಇರು: ಪತ್ನಿಗೆ ಬಿಜೆಪಿ ಶಾಸಕನ ಆದೇಶ
ಜನಸಂಖ್ಯಾ ನಿಯಂತ್ರಣಕ್ಕೆ ಸರಕಾರ ಕಾನೂನು ರೂಪಿಸುವವರೆಗೂ ಮಕ್ಕಳನ್ನು ಹೆರುತ್ತಲೇ ಇರು ಎಂದು ಬಿಜೆಪಿ ಶಾಸಕರೊಬ್ಬರು ತಮ್ಮ ಪತ್ನಿಗೆ .,,,

Published On :
ಮುಜಾಫರ್ ನಗರ: ಜನಸಂಖ್ಯಾ ನಿಯಂತ್ರಣಕ್ಕೆ ಸರಕಾರ ಕಾನೂನು ರೂಪಿಸುವವರೆಗೂ ಮಕ್ಕಳನ್ನು ಹೆರುತ್ತಲೇ ಇರು ಎಂದು ಬಿಜೆಪಿ ಶಾಸಕರೊಬ್ಬರು ತಮ್ಮ ಪತ್ನಿಗೆ ಸೂಚಿಸಿದ್ದಾರಂತೆ.
ಮುಜಾಫರ್ ನಗರದಲ್ಲಿ ಸಾರ್ವಜನಿಕ ಸಭೆಯನೊಂದನ್ನು ಉದ್ದೇಶಿಸಿ ಮಾತನಾಡುತ್ತಿದ್ದ ಮುಜಾಫರ್ ನಗರದ ಬಿಜೆಪಿ ಶಾಸಕ ವಿಕ್ರಮ್ ಶೈನಿ , ನಮಗಿಬ್ಬರೇ ಮಕ್ಕಳು ಸಾಕು ಎನ್ನುತ್ತಾಳೆ ನನ್ನ ಪತ್ನಿ. ಆದರೆ ಜನಸಂಖ್ಯಾ ನಿಯಂತ್ರಣ ಕಾನೂನು ಅಸ್ತಿತ್ವಕ್ಕೆ ಬರುವವರೆಗೂ ಮಕ್ಕಳನ್ನು ಹಡೆಯುತ್ತಾ ಇರಲು ಹೇಳಿದ್ದೇನೆ ಎಂದರು.
ಜನಸಂಖ್ಯಾ ನಿಯಂತ್ರಣ ವಿಷಯದಲ್ಲಿ ನಡೆದ ಕಾರ್ಯಕ್ರಮವನ್ನುದ್ದೇಶಿಸಿ ಮಾತನಾಡುತ್ತಿದ್ದ ಸೈನಿ, ನಾವು ಇಬ್ಬರು- ಮಕ್ಕಳು ನಿಯಮವನ್ನು ಒಪ್ಪಿಕೊಂಡಿದ್ದೇವೆ. ಆದರೆ ಇತರರು ಅದನ್ನು ಒಪ್ಪಿಕೊಂಡಿಲ್ಲ. ಕಾನೂನು ಎಲ್ಲರಿಗೂ ಒಂದೇ ಆಗಿರಬೇಕು.
ಹಿಂದೂಗಳು ಮಕ್ಕಳಿಗೆ ಜನ್ಮ ನೀಡುವುದನ್ನು ನಿಲ್ಲಿಸಬಾರದು. ನಮಗೆ ಇಬ್ಬರು ಮಕ್ಕಳಾದ ಬಳಿಕ, ಸಾಕು ಅಂದಿದ್ದಳು ನನ್ನ ಮಡದಿ, ಆದರೆ ನಾನು ಹೇಳಿದೆ ನಾವು 4-5 ಮಕ್ಕಳನ್ನು ಪಡೆಯೋಣ ಎಂದರು.
ಸೈನಿ ವಿವಾದಾತ್ಮಕ ಹೇಳಿಕೆ ನೀಡುತ್ತಿರುವುದು ಇದೇ ಮೊದಲಲ್ಲ. ಈ ಹಿಂದೆ ಕ್ರಿಶ್ಚಿಯನ್ನರನ್ನು ಸಂಬೋಧಿಸಿ ವಾಗ್ದಾಳಿ ನಡೆಸಿದ್ದ ಅವರು, ಹೊಸವರ್ಷಾಚರಣೆ ಕ್ರೈಸ್ತರ ಹಬ್ಬ, ಈ ಆಚರಣೆಯಿಂದ ಹಿಂದೂಗಳು ದೂರವಿರಿ ಎಂದು ಮನವಿ ಮಾಡಿದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


