ಶಾಸಕರೂ ಕೂಡ ಸಾಯುತ್ತಾರೆ: ರೈತರ ಸಾವು ಕುರಿತು ಮಧ್ಯಪ್ರದೇಶ ಸಚಿವ ಹೇಳಿಕೆ
ಶಾಸಕರೂ ಕೂಡ ಸಾಯುತ್ತಾರೆ, ಶಾಸಕರನೇರು ಅಮರರಲ್ಲ ಎಂದು ರೈತರ ಸಾವು ಕುರಿತು ಮಧ್ಯಪ್ರದೇಶ ಸಚಿವ ಅಸಂಬದ್ಧ ಹೇಳಿಕೆಯನ್ನು ನೀಡಿದ್ದಾರೆ...

Published On :
ಸಾಗರ್ (ಮಧ್ಯಪ್ರದೇಶ): ಶಾಸಕರೂ ಕೂಡ ಸಾಯುತ್ತಾರೆ, ಶಾಸಕರನೇರು ಅಮರರಲ್ಲ ಎಂದು ರೈತರ ಸಾವು ಕುರಿತು ಮಧ್ಯಪ್ರದೇಶ ಸಚಿವ ಹೇಳಿದ್ದಾರೆ.
ಸಾಲಮನ್ನಾ, ಬೆಲೆ ನಿಗದಿ ಸೇರಿದಂತೆ ವಿವಿಧ ಬೇಡಿಕೆಗಳನ್ನು ಆಗ್ರಹಿಸಿ ಮಧ್ಯಪ್ರದೇಶದಲ್ಲಿ ರೈತರು ಸುಧೀರ್ಘ ಪ್ರತಿಭಟನೆಗಳನ್ನು ನಡೆಸುತ್ತಿರುವ ಹಿನ್ನಲೆಯಲ್ಲಿ ಪ್ರತಿಕ್ರಿಯೆ ನೀಡಿರುವ ಮಧ್ಯಪ್ರದೇಶದ ಪಂಚಾಯತ್ ಮತ್ತು ಗ್ರಾಮೀಣಾಭಿವೃದ್ಧಿ ಸಚಿವ ಗೋಪಾಲ್ ಭಾರ್ಗವ ಅವರು, ಶಾಸಕರೂ ಕೂಡ ಸಾಯುತ್ತಾರೆ, ನಷ್ಟ ಎದುರಾದರೆ ಉದ್ಯಮಿಗಳೂ ಸಾವನ್ನಪ್ಪುತ್ತಾರೆ, ಪರೀಕ್ಷೆಯಲ್ಲಿ ಅನುತ್ತೀರ್ಣರಾದರೆ ವಿದ್ಯಾರ್ಥಿಗಳೂ ಕೂಡ ಸಾಯುತ್ತಾರೆ, ಕಳೆದ ನಾಲ್ಕು ವರ್ಷಗಳಲ್ಲಿ 10 ಶಾಸಕರು ಸಾವನ್ನಪ್ಪಿದ್ದಾರೆ, ಸಾವನ್ನು ಯಾರಿಂದಲಾದರೂ ತಡೆಯಲು ಸಾಧ್ಯವೇ? ಶಾಸಕರನು ಅಮರರೇ? ಎಂದು ಪ್ರಶ್ನಿಸಿದ್ದಾರೆ.
ಸಾವನ್ನಪ್ಪಿರುವ ರೈತರ ಬಗ್ಗೆ, ಬೆಳೆಗಳ ನಾಶ ಹಾಗೂ ಸಾಲ ತೀರಿಸಲು ಸಾಧ್ಯವಾಗದೆ ಸಂಕಷ್ಟ ಎದುರಿಸುತ್ತಿರುವ ನನಗೆ ಸಂಪೂರ್ಣ ಸಹಾನುಭೂತಿಯಿದೆ ಎಂದು ಇದೇ ವೇಳೆ ತಿಳಿಸಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


