ಭಾರತದ ಸದಾ 'ಮಂದಸ್ಮಿತ' ಬಡ ಜನರ ಬಗ್ಗೆ ಟ್ರಂಪ್ ಜೂನಿಯರ್ ಮೆಚ್ಚುಗೆ!
ತಮ್ಮ ಕಷ್ಟದ ಪರಿಸ್ಥಿತಿಯಲ್ಲಿ ಕೂಡ ಭಾರತದ ಬಡ ಜನರು ತಮ್ಮ ಮುಖದಲ್ಲಿ ನಗು ....

ನವದೆಹಲಿ: ತಮ್ಮ ಕಷ್ಟದ ಪರಿಸ್ಥಿತಿಯಲ್ಲಿ ಕೂಡ ಭಾರತದ ಬಡ ಜನರು ತಮ್ಮ ಮುಖದಲ್ಲಿ ನಗು ಇರಿಸಿಕೊಳ್ಳುತ್ತಾರೆ ಎಂದು ಅಮೆರಿಕಾ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಪುತ್ರ ಡೊನಾಲ್ಡ್ ಟ್ರಂಪ್ ಜ್ಯೂನಿಯರ್ ಶ್ಲಾಘಿಸಿದ್ದಾರೆ.
ಒಂದು ವಾರದ ಭಾರತ ಪ್ರವಾಸದಲ್ಲಿರುವ ಅವರು ಭಾರತದ ಜನರಲ್ಲಿರುವ ಉತ್ಸಾಹ ಬೇರೆ ದೇಶಗಳ ಜನರಿಗೆ ಹೋಲಿಸಿದರೆ ಭಿನ್ನವಾಗಿದೆ ಮತ್ತು ವಿಶಿಷ್ಟವಾಗಿದೆ. ಇಲ್ಲಿ ಕಡುಬಡವರು ಕೂಡ ನೆಲೆಸಿದ್ದಾರೆ. ಆದರೆ ಅವರ ಮುಖದಲ್ಲಿ ನಗು ಮಾತ್ರ ಎಂದಿಗೂ ಮಾಸುವುದಿಲ್ಲ ಎಂದು ಭಾರತದ ಪ್ರಮುಖ ಸುದ್ದಿ ವಾಹಿನಿಯೊಂದಕ್ಕೆ ಪ್ರತಿಕ್ರಿಯೆ ನೀಡಿದ್ದಾರೆ.
ವಿಶ್ವದಲ್ಲಿ ಅನೇಕ ಯಶಸ್ವಿ ಉದ್ಯಮಿಗಳಿದ್ದಾರೆ ನಿಜ, ಆದರೆ ಅವರಲ್ಲಿ ಕೆಲವು ಮಂದಿ ಬಹಳ ದುಃಖವನ್ನು ಹೊಂದಿರುತ್ತಾರೆ ಎಂದರು.
ಟ್ರಂಪ್ ಜ್ಯೂನಿಯರ್ ತಮ್ಮ ಕುಟುಂಬದ ವಹಿವಾಟಗಳಲ್ಲಿ ಒಂದಾದ ರಿಯಲ್ ಎಸ್ಟೇಟ್ ಉದ್ಯಮವನ್ನು ಮತ್ತು ದುಬಾರಿ ಟ್ರಂಪ್ ಟವರ್ ಪ್ರಾಜೆಕ್ಟ್ ನ್ನು 4 ನಗರಗಳಲ್ಲಿ ವಿಸ್ತರಿಸಲು ಮುಂದಾಗಿದ್ದಾರೆ. ನಿನ್ನೆ ಅವರು ದೆಹಲಿಯಲ್ಲಿ ಒಬೆರಾಯ್ ಹೊಟೇಲ್ ನ ರಿಯಲ್ ಎಸ್ಟೇಟ್ ಡೆವೆಲಪರ್ ಗಳನ್ನು ಭೇಟಿ ಮಾಡಿದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


