ಕೆನಡಾ ಪ್ರಧಾನಿ ಬಳಿ ಖಾಲಿಸ್ತಾನ್ ವಿಷಯ ಪ್ರಸ್ತಾಪಿಸಿದ ಪಂಜಾಬ್ ಸಿಎಂ
ಭಾರತ ಪ್ರವಾಸದಲ್ಲಿರುವ ಕೆನಡಾ ಪ್ರಧಾನಿ ಜಸ್ಟಿನ್ ಟ್ರುಡ್ಯೂ ಅವರನ್ನುಪಂಜಾಬ್ ಮುಖ್ಯಮಂತ್ರಿ ಅಮರಿಂದರ್ ಸಿಂಗ್ ಅವರು ಬುಧವಾರ ಭೇಟಿ ಮಾಡಿದ್ದು,

Published On :
ಚಂಡೀಗಢ: ಭಾರತ ಪ್ರವಾಸದಲ್ಲಿರುವ ಕೆನಡಾ ಪ್ರಧಾನಿ ಜಸ್ಟಿನ್ ಟ್ರುಡ್ಯೂ ಅವರನ್ನುಪಂಜಾಬ್ ಮುಖ್ಯಮಂತ್ರಿ ಅಮರಿಂದರ್ ಸಿಂಗ್ ಅವರು ಬುಧವಾರ ಭೇಟಿ ಮಾಡಿದ್ದು, ಖಾಲಿಸ್ತಾನ ವಿವಾದ ಪ್ರಸ್ತಾಸಿದ್ದಾರೆ.
ಇಂದು ಸಿಎಂ ಅಮರಿಂದ್ ಸಿಂಗ್ ಅವರು ಗೃಹ ಸಚಿವ ಹರಿಜೀತ್ ಸಿಂಗ್ ಸಜ್ಜನ್ ಅವರೊಂದಿಗೆ ಕೆನಡಾ ಪ್ರಧಾನಿ ಭೇಟಿ ಮಾಡಿ, ಪಂಜಾಬ್ ನಲ್ಲಿ ಅಪರಾಧ ಕೃತ್ಯಗಳಲ್ಲಿ ಭಾಗಿಯಾಗಿರುವ ಕೆನಡಾ ಮೂಲದ ವ್ಯಕ್ತಿಗಳ ಪಟ್ಟಿಯನ್ನು ನೀಡಿದರು.
ಈ ವೇಳೆ ಟ್ರುಡ್ಯೂ ಅವರು ಭಾರತ ಸೇರಿದಂತೆ ಇತರೆ ಕಡೆಯೂ ಯಾವುದೇ ಪ್ರತ್ಯೇಕವಾದಿ ಚಳವಳಿಗೆ ಕೆನಡಾ ಬೆಂಬಲ ನೀಡುವುದಿಲ್ಲ ಎಂದು ಪಂಜಾಬ್ ಸಿಎಂಗೆ ಭರವಸೆ ನೀಡಿದ್ದಾರೆ.
ಕೆನಡಾ ಪ್ರಧಾನಿ ಮತ್ತು ಪಂಜಾಬ್ ಸಿಎಂ ಸಭೆಯ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಮುಖ್ಯಮಂತ್ರಿಗಳ ಮಾಧ್ಯಮ ಸಲಹೆಗಾರ ರವೀನ್ ತುಕ್ರಾಲ್ ಅವರು, ಟ್ರುಡ್ಯೂ ಅವರು ಕ್ಯೂಬೆಕ್ ಪ್ರತ್ಯೇಕವಾದಿಗಳ ಹೋರಾಟದ ಉದಾಹರಣೆ ನೀಡುತ್ತ, ನಾನು ನನ್ನ ಜೀವನದಲ್ಲಿ ಇಂತಹ ಹಲವು ಬೆದರಿಕೆಗಳನ್ನು ಎದುರಿಸಿದ್ದೇನೆ ಮತ್ತು ಹಿಂಸಾಚಾರದ ಅಪಾಯದ ಬಗ್ಗೆಯೂ ನನಗೆ ಅರಿವಿದೆ ಎಂದು ಹೇಳಿರುವುದಾಗಿ ತಿಳಿಸಿದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


