ದೇಶ

ಎ ಎಪಿ ಶಾಸಕರು ನನ್ನ ತಲೆಗೆ ಹೊಡೆದಿದ್ದಾರೆ: ದೆಹಲಿ ಮುಖ್ಯ ಕಾರ್ಯದರ್ಶಿ ಅಂಶು ಪ್ರಕಾಶ್

ಎ ಎಪಿ ಶಾಸಕರು ತನ್ನ ಮೇಲೆ ಹಲ್ಲೆ ನಡೆಸಿದ್ದಾರೆ ಎಂದು ಆರೋಪಿಸಿದ್ದ ದೆಹಲಿಯ ಮುಖ್ಯ ಕಾರ್ಯದರ್ಶಿ ಅಂಶು ಪ್ರಕಾಶ್ ಅವರ ಮೇಲೆ ನಡೆದ ಹಲ್ಲೆಯ ಎಲ್ಲ ವಿವರಗಳನ್ನು ಬರೆದಿರುವ ಪತ್ರವನ್ನು...

ಎ ಎಪಿ ಶಾಸಕರು ನನ್ನ ತಲೆಗೆ ಹೊಡೆದಿದ್ದಾರೆ: ದೆಹಲಿ ಮುಖ್ಯ ಕಾರ್ಯದರ್ಶಿ ಅಂಶು ಪ್ರಕಾಶ್
ಅಂಶು ಪ್ರಕಾಶ್
Published On :
ನವದೆಹಲಿ: ಎಎಪಿ ಶಾಸಕರು ತನ್ನ ಮೇಲೆ ಹಲ್ಲೆ ನಡೆಸಿದ್ದಾರೆ ಎಂದು ಆರೋಪಿಸಿದ್ದ ದೆಹಲಿಯ ಮುಖ್ಯ ಕಾರ್ಯದರ್ಶಿ ಅಂಶು ಪ್ರಕಾಶ್  ಅವರ ಮೇಲೆ ನಡೆದ ಹಲ್ಲೆಯ ಎಲ್ಲ ವಿವರಗಳನ್ನು ಬರೆದಿರುವ ಪತ್ರವನ್ನು ದೆಹಲಿ ಉತ್ತರ ವಿಭಾಗದ ಡಿಸಿಪಿಗೆ ಕಳಿಸಿದ್ದಾರೆ. 
ಸೋಮವಾರ ರಾತ್ರಿ ವೇಳೆ ದೆಹಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ಅವರ ನಿವಾಸದಲ್ಲಿ ಎಎಪಿ ಶಾಸಕರಿಂಡ ಹಲ್ಲೆಗೊಳಗಾಗಿದ್ದೆ ಎಂದು ಪತ್ರದಲ್ಲಿ ಪ್ರಕಾಶ್ ವಿವರಿಸಿದ್ದಾರೆ.  ಹಲ್ಲೆಗೊಳಗಾದ ಸಮಯದಲ್ಲಿ ಕೇಜ್ರಿವಾಲ್ ಅವರ ನಿವಾಸವನ್ನು ತೊರೆದು ನನ್ನ ಕಾರಿನಲ್ಲಿ ಮನೆಗೆ ತೆರಳುವುದಕ್ಕೂ ನನಗೆ ಕಷ್ಟವಾಗಿತ್ತು ಎಂದು ಪ್ರಕಾಶ್ ತಮ್ಮ ಪತ್ರದಲ್ಲಿ ವಿವರಿಸಿದ್ದಾರೆ.
ಇದೇ ವೇಳೆ ಮುಖ್ಯ ಕಾರ್ಯದರ್ಶಿ ಅವರ ಆರೋಪ ಆಧಾರರಹಿತವಾಗಿದೆ ಎಂದಿರುವ  ಮುಖ್ಯಮಂತ್ರಿ ಕಛೇರಿಯು ಪ್ರಕಾಶ್ ಅವರ ಆರೋಪವನ್ನು ನಿರಾಕರಿಸಿದೆ.
ಅಂಶು ಪ್ರಕಾಶ್ ಬರೆದ ಪತ್ರದ ಪ್ರಮುಖ ಅಂಶಗಳು ಹೀಗಿದೆ-
ನಿನ್ನೆ ಅಂದರೆ ಅಂದರೆ 19.2.2018 ರಂದು ಮುಖ್ಯಮಂತ್ರಿ ಆಪ್ತ ಸಲಹೆಗಾರರಿಂದ 8.45 ಕ್ಕೆ ನನಗೆ ದೂರವಣಿ ಕರೆ ಬಂದಿದೆ. ಮುಖ್ಯಮಂತ್ರಿ ಮತ್ತು ಉಪ ಮುಖ್ಯಮಂತ್ರಿಯೊಂದಿಗೆ ಚರ್ಚಿಸಲು ನಾನು ಮಧ್ಯರಾತ್ರಿ 12.00 ಗಂಟೆಗೆ ಸಿಎಂ ನಿವಾಸವನ್ನು ತಲುಪಬೇಕೆಂದು ತಿಳಿಸಲಗಿತ್ತು. ದೆಹಲಿ ಸರ್ಕಾರ ಮೂರು ವರ್ಷಗಳನ್ನು ಪೂರ್ಣ ಗೊಳಿಸಿದ ಹಿನ್ನೆಲೆಯಲ್ಲಿ ಟಿವಿ ಜಾಹೀರಾತು ಬಿಡುಗಡೆಗಾಗಿ ಚರ್ಚಿಸಲು ಸಭೆ ಸೇರಬೇಕೆಂದು ಹೇಳಲಾಗಿತ್ತು. ನಾನು ಸಭೆ ಬೆಳಿಗ್ಗೆ 20.02.2018 ರಂದು ಸಭೆ ನಡೆಯಬಹುದೆಂದು ಸೂಚಿಸಿದೆ. ಆದರೆ ರಾತ್ರಿಯೇ ಸಭೆಗೆ ಹಾಜರಾಗಬೇಕೆಂದು ನನಗೆ ಪುನಃ ಕರೆ ಮಾಡಿ ತಿಳಿಸಿದ್ದರು.
ಅದರಂತೆ ನಾನು ಮಧ್ಯರಾತ್ರಿಯ ವೇಳೆ ಸಿಎಂ ನಿವಾಸವನ್ನು ತಲುಪಿದ್ದೆ. ಅಲ್ಲಿ ಮುಖ್ಯಮಂತ್ರಿ, ಉಪಮುಖ್ಯಮಂತ್ರಿ ಹಾಗೂ ಸುಮಾರು ಹನ್ನೊಂದು ಶಾಸಕರು ಉಪಸ್ಥಿತರಿದ್ದರು. ನಾಣು ಹೋದ ಸ್ವಲ್ಪದರಲ್ಲೇ ಶಾಸಕರು ನಾವು ಕುಳಿತ ಕೊಠಡಿಯ ಬಾಗಿಲನ್ನು ಭದ್ರಪಡಿಸಿದ್ದರು. ಬಳಿಕ ಮುಖ್ಯಮಂತ್ರಿಗಳು ತಮ್ಮ ಸರ್ಕಾರದ ಪ್ರಚಾರ ಜಾಹೀರಾತನ್ನು ಬಿಡುಗಡೆಗೊಳಿಸಲು ವಿಳಂಬವೇಕೆ ಎಂದು ವಿವರಿಸಲು ಹೇಳಿದರು. ಆಗ ನಾನು ಜಾಹೀರಾತು ಸುಪ್ರೀಂ ಕೋರ್ಟ್ ಮಾರ್ಗದರ್ಶಿ ಸೂತ್ರಗಳಿಗೆ ಬದ್ದವಾಗಿರಬೇಕು. ನಾವು ಅಧಿಕಾರಿಗಳು ಈ ಕಾನೂನು ಚೌಕಟ್ಟಿನಲ್ಲಿ ಬಂಧಿಯಾಗಿದ್ದೇವೆ ಎಂದೆನು. 
ಆಗ ಅಲ್ಲಿದ್ದ ಕೆಲ ಶಾಸಕರು ನನ್ನ ಮೇಲೆ ವ್ಯಥಾ ನಿಂದನೆಗೆ ತೊಡಗಿದರು. ನನಗೆ ನನ್ನ ಹುದ್ದೆ ಹಾಗೂ ಜೀವದ ಬಗೆಗೆ ಬೆದರಿಕೆ ಹಾಕಿದರು. ನಾನು ಜಾಹೀರಾತಿಗೆ ಅನುಮತಿ ನೀಡದಿದ್ದರೆ ರಾತ್ರಿಯೆಲ್ಲಾ ಇದೇ ಕೋಣೆಯಲ್ಲಿರಬೇಕಾಗುವುದು ಎಂಡರು. ಅಷ್ಟರಲ್ಲಿ ನನ್ನ ಎಡಭಾಗದಲ್ಲಿ ಕುಳಿತಿದ್ದ ಅಮಾನತುಲ್ಲಾ ಖಾನ್ ನನ್ನ ತಲೆ ಭಾಗದ ಮೇಲೆ ಹೊಡೆದರು. ಒಂದು ಬಾರಿಯಲ್ಲ ಹಲವು ಬಾರಿ ನನ್ನ ತಲೆ, ಮುಖದ ಮೇಲೆ ಹೊಡೆದು ಹಲ್ಲೆ ನಡೆಸಿದರು. ನನ್ನ ಕನ್ನಡಕ ಕಳಚಿ ಕೆಳಗೆ ಬಿದ್ದಿತ್ತು. ನನಗೆ ಆಘಾತವಾಗಿತ್ತು. ನಾನು ಯಾವುದೇ ಪ್ರಚೋದನೆ. ನೀಡದಿದ್ದರೂ ನನ್ನ ಮೇಲೆ ಹಲ್ಲೆ ನಡೆಯಿತು. ನಾನು ಅವರಿಂo ತಪ್ಪಿಸಿಕೊಂಡು ನನ್ನ ಕಾರನ್ನೇರಿ ಮನೆಗೆ ಬರಲು ಸಾಕಷ್ಟು ತೊಂದರೆಯಾಗಿತ್ತು. ನಾನು ಹಲ್ಲೆಗೊಳಗಾಗುತ್ತಿದ್ದ ವೇಳೆ ಕೊಠಡಿಯಲ್ಲಿದ್ದ ಯಾವ ವ್ಯಕ್ತಿಯೂ ನನ್ನನ್ನು ಬಿಡಿಸುವ ಪ್ರಯತ್ನಕ್ಕೆ ತೊಡಗಲಿಲ್ಲ.
ಕರ್ತವ್ಯದಿಂದ ಚ್ಯುತಿಯಾಗುವಂತೆ ಮಾಡಲು ನನ್ನ ಮೇಲೆ ಸಾಕಷ್ಟು ಒತ್ತಡ ಹೇರಲಾಗುತ್ತಿದೆ. ನಾನು ಹಲ್ಲೆ ನಡೆಸಿದವರ ಮೇಲೆ ಕಾನೂನು ಪ್ರಕಾರವಾಗಿ ಕ್ರಮ ತೆಗೆದುಕೊಳ್ಳಬೇಕೆಂದು ಕೋರುತ್ತೇನೆ. 

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.