ಸ್ಟ್ರಾದಿಂದ ಟೊಮೆಟೋ ಸಾಸ್ ಹೀರಿ ದಾಖಲೆ ಬರೆದ ಮುಂಬೈ ವ್ಯಕ್ತಿ
ಗಿನ್ನಿಸ್ ದಾಖಲೆ ಪುಸ್ತಕದಲ್ಲಿ ತಮ್ಮ ಹೆಸರನ್ನು ಸೇರಿಸಲು ಭಾರತೀಯರೂ ಕೂಡ ನಾನಾ ರೀತಿಯ ಪ್ರಯತ್ನಗಳನ್ನು ಮಾಡುತ್ತಿದ್ದು, ಮುಂಬೈ ಮೂಲದ ವ್ಯಕ್ತಿಯೊಬ್ಬರು ವಿಶೇಷ ಹಾಗೂ ವಿಶಿಷ್ಟ ದಾಖಲೆಯೊಂದನ್ನು ಮಾಡಿದ್ದಾರೆ...

Published On :
ನವದೆಹಲಿ: ಗಿನ್ನಿಸ್ ದಾಖಲೆ ಪುಸ್ತಕದಲ್ಲಿ ತಮ್ಮ ಹೆಸರನ್ನು ಸೇರಿಸಲು ಭಾರತೀಯರೂ ಕೂಡ ನಾನಾ ರೀತಿಯ ಪ್ರಯತ್ನಗಳನ್ನು ಮಾಡುತ್ತಿದ್ದು, ಮುಂಬೈ ಮೂಲದ ವ್ಯಕ್ತಿಯೊಬ್ಬರು ವಿಶೇಷ ಹಾಗೂ ವಿಶಿಷ್ಟ ದಾಖಲೆಯೊಂದನ್ನು ಮಾಡಿದ್ದಾರೆ.
ಮುಂಬೈ ನಿವಾಸಿಯಾಗಿರುವ ದಿನೇಶ್ ಶಿವನಾಥ ಉಪಾಧ್ಯಾಯ ಎಂಬುವವರು ಒಂದು ಸಂಪೂರ್ಣ ಬಾಟಲಿ ಟೊಮೆಟೋ ಸಾಸ್ ಅನ್ನು ಸ್ಟ್ರಾ ಮೂಲಕ 25.37 ಸೆಂಕಡ್ ಗಳಲ್ಲಿ ಹೀರಿ ದಾಖಲೆ ಬರೆದಿದ್ದಾರೆ.
ದಿನೇಶ್ ಅವರು ಸ್ಟ್ರಾ ಮೂಲಕ ಟೊಮೆಟೋ ಸಾಸ್ ಹೀರಿ ದಾಖಲೆ ಬರೆದಿರುವ ವಿಡಿಯೋವನ್ನು ಸ್ವತಃ ಗಿನ್ನೆಸ್ ಸಂಸ್ಥೆಯೇ ತನ್ನ ಯೂಟ್ಯೂಬ್ ಚಾನೆಲ್ ನಲ್ಲಿ ಅಪ್'ಲೋಡ್ ಮಾಡಿದೆ. ವಿಡಿಯೋದಲ್ಲಿ ದಿನೇಶ್ ಅವರು 500 ಗ್ರಾಮ್ ಟೊಮೆಟೋ ಸಾಸ್ ಅನ್ನು 25.37 ಸೆಕೆಂಡ್ ಗಳಲ್ಲಿ ಹೀರಿರುವುದು ಕಂಡು ಬಂದಿದೆ.
ಉಪಾಧ್ಯಾಯ್ ಅವರು ದಾಖಲೆ ಬರೆದಿರುವುದು ಇದು ಮೊದಲನೇನಲ್ಲ. ಈ ಹಿಂದೆ ಕೂಡ ಹಲವು ದಾಖಲೆಗಳನ್ನು ಬರೆದಿದ್ದಾರೆ. ಮೂರು ನಿಮಿಷಗಳಲ್ಲಿ ಅತೀ ಹೆಚ್ಚು ದ್ರಾಕ್ಷಿ ಸೇವನೆ, ಮೂರು ನಿಮಿಷದಲ್ಲಿ ಕಿತ್ತಳೆಹಣ್ಣಿನ ಸಿಪ್ಪೆ ತೆಗೆದು ಅತೀ ಹೆಚ್ಚು ಸೇವಿನೆ ಮಾಡಿ ದಾಖಲೆ ಬರೆದಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Mumbaiಮುಂಬೈworld recordವಿಶ್ವ ದಾಖಲೆTomato ketchupDinesh Shivnath Upadhyayaಟೊಮೆಟೋ ಸಾಸ್ದಿನೇಶ್ ಶಿವನಾಥ್ ಉಪಾಧ್ಯಾಯ
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


