ದೇಶ

ಪಶ್ಚಿಮ ಬಂಗಾಳ: ಬಾಂಗ್ಲಾ ಗಡಿಯ ಮೂಲಕ ಭಾರತಕ್ಕೆ ನುಸುಳಿದ್ದ ಉತ್ತರ ಕೊರಿಯಾ ಪ್ರಜೆ ಬಂಧನ

ಪಶ್ಚಿಮ ಬಂಗಾಳದ ಉತ್ತರ 24 ಪರಗಣ ಜಿಲ್ಲೆಯ ಭಾರತ-ಬಾಂಗ್ಲಾದೇಶ ಅಂತಾರಾಷ್ಟ್ರೀಯ ಗಡಿಯ ಮೂಲಕ ಅಕ್ರಮವಾಗಿ ಭಾರತಕ್ಕೆ ನುಸುಳಿದ್ದ ಉತ್ತರ ಕೊರಿಯಾದ.......

ಪಶ್ಚಿಮ ಬಂಗಾಳ: ಬಾಂಗ್ಲಾ ಗಡಿಯ ಮೂಲಕ ಭಾರತಕ್ಕೆ ನುಸುಳಿದ್ದ ಉತ್ತರ ಕೊರಿಯಾ ಪ್ರಜೆ ಬಂಧನ
ಪಶ್ಚಿಮ ಬಂಗಾಳ: ಬಾಂಗ್ಲಾ ಗಡಿಯ ಮೂಲಕ ಭಾರತಕ್ಕೆ ನುಸುಳಿದ್ದ ಉತ್ತರ ಕೊರಿಯಾ ಪ್ರಜೆ ಬಂಧನ
Published On :
ಕೋಲ್ಕತ್ತಾ: ಪಶ್ಚಿಮ ಬಂಗಾಳದ ಉತ್ತರ 24 ಪರಗಣ ಜಿಲ್ಲೆಯ ಭಾರತ-ಬಾಂಗ್ಲಾದೇಶ ಅಂತಾರಾಷ್ಟ್ರೀಯ ಗಡಿಯ ಮೂಲಕ ಅಕ್ರಮವಾಗಿ ಭಾರತಕ್ಕೆ ನುಸುಳಿದ್ದ ಉತ್ತರ ಕೊರಿಯಾದ ಪ್ರಜೆಯನ್ನು ಗಡಿ ಭದ್ರತಾ ಪಡೆ (ಬಿಎಸ್ಎಫ್) ಯೋಧರು ಬಂಧಿಸಿದ್ದಾರೆ.
ಜುಂಗ್ ಹೋ (30) ಎಂಬಾತ ಬಂಧಿತನಾಗಿದ್ದು ಉತ್ತರ ಕೊರಿಯಾದ ಪಾಸ್ ಪೋರ್ಟ್ ಹೊಂದಿದ್ದಾನೆ. ಆದರೆ ಭಾರತಕ್ಕೆ ಪ್ರವೇಶಿಸಲು ಯಾವುದೇ ಅಧಿಕೃತ ವೀಸಾ ಇರಲಿಲ್ಲ. ಪ್ರಾಥಮಿಕ ತನಿಖೆಯ ವೇಳೆ ತಿಳಿದುಬಂದಂತೆ ಕಳೆದೆರಡು ವರ್ಷಗಳಿಂದ ಬಾಂಗ್ಲಾದೇಶದಲ್ಲಿ ಗಣಿಗಾರಿಕೆ ಸಂಬಂಧ ಕೆಲಸದಲ್ಲಿ ತೊಡಗಿದ್ದ ಈತ ಭಾರತವನ್ನು ನೋಡಲು ಬಯಸಿದ್ದ. ಆದರೆ ಪ್ರವಾಸಿ ವೀಸಾ ಪಡೆಯುವುದು ಸಾಧ್ಯವಾಗಿರಲಿಲ್ಲ.. 
"ಕೋಲ್ಕತ್ತಾ ಮತ್ತು ಭಾರತದ ಇತರೆ ನಗರಗಳಿಗೆ ಭೇಟಿ ನೀಡಲು ಬಯಸಿದ್ದ ಆತ ಅದಕ್ಕಾಗಿ ಪ್ರವಾಸಿ ವೀಸಾವನ್ನು ಪಡೆಯುವಲ್ಲಿ ವಿಫಲನಾಗಿದ್ದ. ಹೀಗಾಗಿ ಭಾರತಕ್ಕೆ ಪ್ರವೇಶಿಸುವ ಅಕ್ರಮ ಮಾರ್ಗವನ್ನು ಅನುಸರಿಸಿದ್ದ. ಕಳೆದೆರಡು ವರ್ಷಗಳಿಂದ ಬಾಂಗ್ಲಾದೇಶದಲ್ಲಿದ್ದ ಈತ ಕೆಲ ಬಂಗಾಳಿ ಹಾಗೂ ಆಂಗ್ಲ ಪದಗಳನ್ನು ಕಲಿತಿದ್ದ" ಎಂದು ಬಿಎಸ್ ಎಫ್ ಅಧಿಕಾರಿಗಳು ಹೇಳಿದ್ದಾರೆ.
ಬಿಎಸ್ಎಫ್ ಅಧಿಕಾರಿಗಳು ಜುಂಗ್ ಹೋ ನನ್ನು ಸ್ವರೂಪ್ ನಗರ ಪೋಲಿಸ್ ಅಧಿಕಾರಿಗಳಿಗೆ ಹಸ್ತಾಂತರಿಸಿದ್ದಾರೆ. ಅಲ್ಲಿ ತನಿಖೆಯ ವೇಳೆ ಸುಲಭವಾಗಲೆಂದು ಭಾಷಾಂತರಕಾರರನ್ನು ನೇಮಕ ಮಾಡಲಾಗಿದೆ. ಆರೋಪಿಗೆ ಸ್ಥಳೀಯ ನ್ಯಾಯಾಲಯವು ನ್ಯಾಯಾಂಗ ಬಂಧನವನ್ನು ವಿಧಿಸಿದೆ. ಇದೇ ವೇಳೆ ಜುಂಗ್ ಹೋ ಪೋಲೀಸರೆದುರಿಗೆ ತನ್ನ ತಪ್ಪನ್ನು ಒಪ್ಪಿಕೊಂಡಿದ್ದಾನೆ ಎಂದು ಮೂಲಗಳು ಹೇಳಿದೆ. ಪ್ರಕರಣ ಸಂಬಂಧ ಪಶ್ಚಿಮ ಬಂಗಾಳ ಸರ್ಕಾರ ವಿದೇಶಾಂಗ ಸಚಿವಾಲಯವನ್ನು ಸಂಪರ್ಕಿಸಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.