ದೇಶ

ಬ್ಯಾಂಕ್ ವಂಚನೆ ಪ್ರಕರಣ ಸಂಬಂಧ ಭಾರತದಲ್ಲಿ ತನಿಖೆ, ಅತ್ತ ನ್ಯೂಯಾರ್ಕ್ ನಲ್ಲಿ ನೀರವ್ ಮೋದಿ ವಿಶ್ರಾಂತಿ!

ಭಾರತದಲ್ಲಿ ತನಿಖೆ ಆರಂಭವಾಗಿರುವಂತೆಯೇ ಪ್ರಕರಣದ ಪ್ರಮುಖ ಆರೋಪಿಯಾಗಿರುವ ಚಿನ್ನಾಭರಣ ವ್ಯಾಪಾರಿ ಉದ್ಯಮಿ ನೀರವ್ ಮೋದಿ ನ್ಯೂಯಾರ್ಕ್ ಲಕ್ಸುರಿ ಹೊಟೆಲ್ ನಲ್ಲಿ ವಿಶ್ರಾಂತಿ ಪಡೆಯುತ್ತಿದ್ದಾರಂತೆ.

ಬ್ಯಾಂಕ್ ವಂಚನೆ ಪ್ರಕರಣ ಸಂಬಂಧ ಭಾರತದಲ್ಲಿ ತನಿಖೆ, ಅತ್ತ ನ್ಯೂಯಾರ್ಕ್ ನಲ್ಲಿ ನೀರವ್ ಮೋದಿ ವಿಶ್ರಾಂತಿ!
ಸಂಗ್ರಹ ಚಿತ್ರ
Published On :
ನವದೆಹಲಿ: ಪಂಜಾಬ್ ನ್ಯಾಷನಲ್ ಬ್ಯಾಂಕ್ ಗೆ ಸಾವಿರಾರು ಕೋಟಿ ರೂ. ವಂಚನೆ ಮಾಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಇತ್ತ ಭಾರತದಲ್ಲಿ ತನಿಖೆ ಆರಂಭವಾಗಿರುವಂತೆಯೇ ಪ್ರಕರಣದ ಪ್ರಮುಖ ಆರೋಪಿಯಾಗಿರುವ  ಚಿನ್ನಾಭರಣ ವ್ಯಾಪಾರಿ ಉದ್ಯಮಿ ನೀರವ್ ಮೋದಿ ನ್ಯೂಯಾರ್ಕ್ ಲಕ್ಸುರಿ ಹೊಟೆಲ್ ನಲ್ಲಿ ವಿಶ್ರಾಂತಿ ಪಡೆಯುತ್ತಿದ್ದಾರಂತೆ.
ಸಾವಿರಾರು ಕೋಟಿ ರು.ಗಳ ವಂಚನೆ ಪ್ರಕರಣಕ್ಕೆ ಸಂಬಂಧಿಸಿದಂತೆ ಭಾರತದಲ್ಲಿ ಸಿಬಿಐ ಮತ್ತು ಜಾರಿ ನಿರ್ದೇಶನಾಲಯದ ಅಧಿಕಾರಿಗಳು ನೀರವ್ ಮೋದಿ ವಿರುದ್ಧ ತನಿಖೆ ನಡೆಸುತ್ತಿದ್ದು, ಪ್ರಸ್ತುತ ತನಿಖೆ ಚುರುಕುಗೊಳಿಸಿರುವ  ಅಧಿಕಾರಿಗಳು ನೀರವ್ ಮೋದಿ ಉಳಿದುಕೊಂಡಿರುವ ನ್ಯೂಯಾರ್ಕ್ ಲಕ್ಸುರಿ ಹೊಟೆಲ್ ಅನ್ನು ಕಂಡು ಹಡಿದಿದ್ದಾರೆ. ಎನ್ ಡಿಟಿವಿ ವರದಿ ಮಾಡಿರುವಂತೆ ನ್ಯೂಯಾರ್ಕ್ ನ ಮ್ಯಾನ್ ಹಟ್ಟನ್ ನಲ್ಲಿರುವ ಜೆಡಬ್ಲ್ಯೂ ಮ್ಯಾರಿಯಟ್ ನ  ಎಸ್ಸೆಕ್ಸ್ ಹೌಸ್ ನಲ್ಲಿ ನೀರವ್ ಮೋದಿ ವಿಶ್ರಾಂತಿ ಪಡೆಯುತ್ತಿದ್ದಾರ ಎನ್ನಲಾಗಿದೆ. ಈ ಹೊಟೆಲ್ ನೀರವ್ ಮೋದಿ ಅವರ ಲಕ್ಸ್ ಮ್ಯಾಡಿಸನ್ ಅವೆನ್ಯೂ ಜ್ಯುವೆಲರಿ ಮಾಲ್ ಕೂಗಳತೆ ದೂರದಲ್ಲಿದೆ ಎಂದು ತಿಳಿದುಬಂದಿದೆ.
ನ್ಯೂಯಾರ್ಕ್ ನ ಮ್ಯಾನ್ ಹಟ್ಟನ್ ನಲ್ಲಿರುವ ಜೆಡಬ್ಲ್ಯೂ ಮ್ಯಾರಿಯಟ್ ನ ಎಸ್ಸೆಕ್ಸ್ ಹೌಸ್ ನ 36ನೇ ಫ್ಲೋರ್ ನಲ್ಲಿ ನೀರವ್ ಮೋದಿ ಮತ್ತು ಆತನ ಆಪ್ತರು ಮತ್ತು ಕೆಲ ವಾಣಿಜ್ಯೋಧ್ಯಮಿಗಳು ತಂಗಿದ್ದಾರೆ ಎನ್ನಲಾಗಿದೆ. ಇನ್ನು ಹೊಟೆಲ್  ಸಿಬ್ಹಂದಿಗಳು ತಿಳಿಸಿರುವಂತೆ ನೀರವ್ ಮೋದಿ ಮತ್ತು ಆತನ ಪತ್ನಿ ಹೊರಗೆ ತೆರಳಿದ್ದು, ಆತನ ಮಕ್ಕಳು ಮಾತ್ರ ಹೊಟೆಲ್ ನಲ್ಲಿದ್ದಾರೆ ಎಂಬ ಮಾಹಿತಿ ನೀಡಿದ್ದಾರೆ.
ಇನ್ನು ತನಿಖಾಧಿಕಾರಿಗಳು ತಿಳಿಸಿರುವಂತೆ ನೀರವ್ ಮೋದಿ ಕಳೆದ ಜನವರಿ 1 ರಂದು ದೇಶ ತೊರೆದಿದ್ದು, ವಿಮಾನ ನಿಲ್ದಾಣದಲ್ಲಿ ತನ್ನ ಪತ್ನಿ ಮತ್ತು ಇತರೆ ವಾಣಿಜ್ಯೋದ್ಯಮಿಗಳೊಂದಿಗೆ ತೆಗೆಸಿಕೊಂಡ ಫೋಟೋ ಅಧಿಕಾರಿಗಳಿಗೆ  ಲಭ್ಯವಾಗಿದೆ. ಅಲ್ಲದೆ ಈ ಹಿಂದೆ ಅಂದರೆ ಜನವರಿ 23ರಂದು ದಾವೋಸ್ ನಲ್ಲಿ ನೀರವ್ ಮೋದಿ ಪ್ರಧಾನಿ ಮೋದಿ ಅವರನ್ನು ಭೇಟಿ ಮಾಡಿದ್ದು, ಇದರ ಫೋಟೋಗಳೂ ಕೂಡ ಅಧಿಕಾರಿಗಳಿಗೆ ಲಭ್ಯವಾಗಿದೆ. ಈ ಎಲ್ಲ ಮಾಹಿತಿಗಳನ್ನು  ಗಮನಿಸುತ್ತಿದ್ದರೆ, ಪಂಜಾಬ್ ನ್ಯಾಷನಲ್ ಬ್ಯಾಂಕ್ ವಂಚನೆ ಪ್ರಕರಣ ಭಾರತದಲ್ಲಿ ಮಾತ್ರ ಸದ್ದು ಮಾಡುತ್ತಿದ್ದು, ಅಮೆರಿಕದಲ್ಲಿ ಯಾವುದೇ ರೀತಿಯ ಪರಿಣಾಮ ಬೀರುತ್ತಿಲ್ಲ. ಪ್ರಮುಖವಾದಿ ಪ್ರಕರಣದ ಪ್ರಮುಖ ಆರೋಪಿ ನೀರವ್  ಮೋದಿ ಮೇಲೆ ಯಾವುದೇ ರೀತಿಯ ಪರಿಣಾಮವಾಗಿಲ್ಲ ಎನ್ನಲಾಗಿದೆ. 

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.