ಕಾವೇರಿ ತೀರ್ಪು: ಬೆಂಗಳೂರು ಕುಡಿಯುವ ನೀರಿಗೆ ಹೆಚ್ಚುವರಿ 4.75 ಟಿಎಂಸಿ ನೀರು
ಶುಕ್ರವಾರ ಪ್ರಕಟವಾದ ಕಾವೇರಿ ತೀರ್ಪಿನಲ್ಲಿ ಈ ಹಿಂದೆ ಕರ್ನಾಟಕ ಮಂಡಿಸಿದ್ದ ಬೆಂಗಳೂರಿನ ಕುಡಿಯುವ ನೀರಿನ ಬೇಡಿಕೆಗೆ ಸುಪ್ರೀಂ ಕೋರ್ಟ್ ಮನ್ನಣಿ ನೀಡಿದ್ದು, ಬೆಂಗಳೂರು ಕುಡಿಯುವ ನೀರಿಗೆ ಹೆಚ್ಚುವರಿ 4.75 ಟಿಎಂಸಿ ನೀರು ಹಂಚಿಕೆ ಮಾಡಿದೆ.

Published On :
ನವದೆಹಲಿ: ಶುಕ್ರವಾರ ಪ್ರಕಟವಾದ ಕಾವೇರಿ ತೀರ್ಪಿನಲ್ಲಿ ಈ ಹಿಂದೆ ಕರ್ನಾಟಕ ಮಂಡಿಸಿದ್ದ ಬೆಂಗಳೂರಿನ ಕುಡಿಯುವ ನೀರಿನ ಬೇಡಿಕೆಗೆ ಸುಪ್ರೀಂ ಕೋರ್ಟ್ ಮನ್ನಣಿ ನೀಡಿದ್ದು, ಬೆಂಗಳೂರು ಕುಡಿಯುವ ನೀರಿಗೆ ಹೆಚ್ಚುವರಿ 4.75 ಟಿಎಂಸಿ ನೀರು ಹಂಚಿಕೆ ಮಾಡಿದೆ.
ಇಂದು ತಾನು ಪ್ರಕಟಿಸಿದ ಕಾವೇರಿ ತೀರ್ಪಿನಲ್ಲಿ ಕಣಿವೆಯ ನೀರಿನ ಆಚೆಗೂ ಕುಡಿಯುವ ನೀರಿನ ಉದ್ದೇಶಕ್ಕಾಗಿ ನೀರನ್ನು ಪಡೆಯಬಹುದು ಎಂದು ಆದೇಶಿಸಿರುವ ಸುಪ್ರೀಂ ಕೋರ್ಟ್, ಈ ಮೂಲಕ ಬೆಂಗಳೂರಿಗೆ ಕುಡಿಯುವ ನೀರು ಬಳಕೆಗಾಗಿ 4.75 ಟಿಎಂಸಿ ನೀರು ಬಳಸಿಕೊಳ್ಳಲು ಅವಕಾಶ ನೀಡಿದೆ.
ಕಾವೇರಿ ಕಣಿವೆಯಲ್ಲಿ ವಾರ್ಷಿಕ ಲಭ್ಯವಿರುವ ಒಟ್ಟು 740 ಟಿಎಂಸಿ ಅಡಿ ನೀರಿನಲ್ಲಿ ಕರ್ನಾಟಕಕ್ಕೆ 270 ಟಿಎಂಸಿ ಅಡಿ ನೀರನ್ನು ಹಂಚಿಕೆ ಮಾಡಿದ್ದ ನ್ಯಾಯಮಂಡಳಿ. ಪ್ರತಿ ವರ್ಷ 192 ಟಿಎಂಸಿ ಅಡಿ ನೀರನ್ನು ತಮಿಳುನಾಡಿಗೆ ಹರಿಸುವಂತೆ ಸೂಚಿಸಿತ್ತು. ಈ ಪ್ರಮಾಣವನ್ನು 102 ಟಿಎಂಸಿ ಅಡಿಗೆ ಇಳಿಸುವಂತೆ ಕರ್ನಾಟಕ ಬೇಡಿಕೆ ಸಲ್ಲಿಸಿತ್ತು. ಕೊರತೆ ವರತೆಯ ಸೂತ್ರದ ಬಗ್ಗೆ ಯಾವುದೇ ಪ್ರಕಟಣೆ ಮಾಡಿಲ್ಲ. ಈ ಬಗ್ಗೆ ವಿವರವಾದ ತೀರ್ಪಿನಲ್ಲಿ ಪ್ರಸ್ತಾಪಿಸಿರುವ ಸಾಧ್ಯತೆ ಇದೆ.
ಇನ್ನು ಇಂದು ಪ್ರಕಟವಾಗಿರುವ ಕಾವೇರಿ ತೀರ್ಪು ಮುಂದಿನ ಮಹದಾಯಿ ವಿವಾದಕ್ಕೂ ಪುಷ್ಠಿ ನೀಡಿದಂತಾಗಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
supreme courtಸುಪ್ರೀಂಕೋರ್ಟ್Siddaramaiahಸಿದ್ದರಾಮಯ್ಯKarnatakaಕರ್ನಾಟಕಕಾವೇರಿ ವಿವಾದCauvery disputeCauvery Verdictಕಾವೇರಿ ತೀರ್ಪು
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


