ದೇಶ

ಅಸ್ಸಾಂ ನಲ್ಲಿ ಮೈಕ್ರೋಲೈಟ್ ವಿಮಾನ ಪತನ: ಐಎಎಫ್ ನ ಇಬ್ಬರು ವಿಂಗ್ ಕಮಾಂಡರ್ ಗಳ ಸಾವು

ಅಸ್ಸಾಂ ನ ಮಜುಲಿಯಲ್ಲಿ ಮೈಕ್ರೋಲೈಟ್ ವಿಮಾನ ಪತನಗೊಂಡಿದ್ದು ವಾಯುಪಡೆಯ ಇಬ್ಬರು ವಿಂಗ್ ಕಮಾಂಡರ್ ಗಳು ಸಾವನ್ನಪ್ಪಿದ್ದಾರೆ.

ಅಸ್ಸಾಂ ನಲ್ಲಿ ಮೈಕ್ರೋಲೈಟ್ ವಿಮಾನ ಪತನ: ಐಎಎಫ್ ನ ಇಬ್ಬರು ವಿಂಗ್ ಕಮಾಂಡರ್ ಗಳ ಸಾವು
ಸಂಗ್ರಹ ಚಿತ್ರ
Published On :
ನವದೆಹಲಿ: ಅಸ್ಸಾಂ ನ ಮಜುಲಿಯಲ್ಲಿ ಮೈಕ್ರೋಲೈಟ್ ವಿಮಾನ ಪತನಗೊಂಡಿದ್ದು ವಾಯುಪಡೆಯ ಇಬ್ಬರು ವಿಂಗ್ ಕಮಾಂಡರ್ ಗಳು ಸಾವನ್ನಪ್ಪಿದ್ದಾರೆ. 
ಮೃತ ಪೈಲಟ್ ಗಳಾದ ಜೈ ಪೌಲ್ ಜೇಮ್ಸ್ ಹಾಗೂ ಡಿ ವ್ಯಾಟ್ಸ್ ವಿಂಗ್ ಕಮಾಂಡರ್-ರ್ಯಾಂಕ್ ಅಧಿಕಾರಿಗಳಾಗಿದ್ದರು ಎಂದು ರಕ್ಷಣಾ ವಕ್ತಾರರಾದ ಲೆಫ್ಟಿನೆಂಟ್ ಕರ್ನಲ್ ಹರ್ಷವರ್ಧನ್ ಪಾಂಡೆ ಹೇಳಿದ್ದಾರೆ. ಮಧ್ಯಾಹ್ನ ಈ ಘಟಾನೆ ನಡೆದಿದ್ದು, ಜೋರ್ಹತ್ ವಿಮಾನ ನಿಲ್ದಾಣದಿಂದ ಟೇಕ್ ಆಫ್ ಆದ ನಂತರ 20 ಕಿಮೀ ದೂರ ಪ್ರಯಾಣಿಸುವ ವೇಳೆಗೆ ಪತನಗೊಂಡಿದೆ ಎಂದು ರಕ್ಷಣಾ ಇಲಾಖೆ ಹೇಳಿದೆ. 
ತಾಂತ್ರಿಕ ದೋಷ ಕಾಣಿಸಿಕೊಳ್ಳುತ್ತದ್ದಂತೆಯೇ ಪೈಲಟ್ ಗಳು ತುರ್ತು ಭೂಸ್ಪರ್ಷಕ್ಕೆ ಯತ್ನಿಸಿದ್ದಾರೆ ಆದರೆ ಅದು ಯಶಸ್ವಿಯಾಗಿಲ್ಲ. ಘಟನೆ ಕುರಿತು ತನಿಖೆಗೆ ಆದೇಶಿಸಲಾಗಿದೆ. 

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.