ದೇಶ

ದೇಶದ ವಿರುದ್ಧ ಯಾರೇ ಶಸ್ತ್ರಾಸ್ತ್ರ ಹಿಡಿದರೂ, ಅವರ ಹೆಡೆ ಮುರಿ ಕಟ್ಟುತ್ತೇವೆ: ಲೆ.ಜನರಲ್ ಡಿ ಅನ್ಬು

ಕಾರಣ ಏನೇ ಇರಲಿ..ದೇಶದ ವಿರುದ್ಧ ಯಾರೇ ಶಸ್ತ್ರಾಸ್ತ್ರ ಹಿಡಿದರೂ ಅವರು ದೇಶದ ಶತೃಗಳಾಗಿದ್ದು, ಅವರು ಭಯೋತ್ಪಾದಕರು. ಖಂಡಿತ ನಾವು ಅವರ ಹೆಡೆಮುರಿ ಕಟ್ಟುತ್ತೇವೆ ಎಂದು ಭಾರತೀಯ ಸೇನೆಯ ಉತ್ತರ ಭಾಗದ ಮುಖ್ಯಸ್ಥ ಲೆಫ್ಟಿನೆಂಟ್ ಜನರಲ್ ಡಿ ಅನ್ಹು ಹೇಳಿದ್ದಾರೆ.

ದೇಶದ ವಿರುದ್ಧ ಯಾರೇ ಶಸ್ತ್ರಾಸ್ತ್ರ ಹಿಡಿದರೂ, ಅವರ ಹೆಡೆ ಮುರಿ ಕಟ್ಟುತ್ತೇವೆ: ಲೆ.ಜನರಲ್ ಡಿ ಅನ್ಬು
ಭಾರತೀಯ ಸೇನೆಯ ಉತ್ತರ ಭಾಗದ ಮುಖ್ಯಸ್ಥ ಲೆಫ್ಟಿನೆಂಟ್ ಜನರಲ್ ಡಿ ಅನ್ಹು
Published On :
ಶ್ರೀನಗರ: ಕಾರಣ ಏನೇ ಇರಲಿ..ದೇಶದ ವಿರುದ್ಧ ಯಾರೇ ಶಸ್ತ್ರಾಸ್ತ್ರ ಹಿಡಿದರೂ ಅವರು ದೇಶದ ಶತೃಗಳಾಗಿದ್ದು, ಅವರು ಭಯೋತ್ಪಾದಕರು. ಖಂಡಿತ ನಾವು ಅವರ ಹೆಡೆಮುರಿ ಕಟ್ಟುತ್ತೇವೆ ಎಂದು ಭಾರತೀಯ ಸೇನೆಯ ಉತ್ತರ  ಭಾಗದ ಮುಖ್ಯಸ್ಥ ಲೆಫ್ಟಿನೆಂಟ್ ಜನರಲ್ ಡಿ ಅನ್ಹು ಹೇಳಿದ್ದಾರೆ.
ಕಾಶ್ಮೀರದಲ್ಲಿ ನಡೆದ ಸತತ ಉಗ್ರದಾಳಿ ಕೃತ್ಯಗಳಿಗೆ ಸಂಬಂಧಿಸಿದಂತೆ ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ  ಭಾರತೀಯ ಸೇನೆಯ ಉತ್ತರ ಭಾಗದ ಮುಖ್ಯಸ್ಥ ಲೆಫ್ಟಿನೆಂಟ್ ಜನರಲ್ ಡಿ ಅನ್ಹು ಅವರು, ಗಡಿಯಲ್ಲಿ ಉಗ್ರರಿಗೆ  ಅವಕಾಶ ಮಾಡಿಕೊಡದ ಹಿನ್ನಲೆಯಲ್ಲಿ ಉಗ್ರರು ಸೈನಿಕರನ್ನು ಗುರಿಯಾಗಿಸಿಕೊಂಡು ದಾಳಿ ನಡೆಸುತ್ತಿದ್ದಾರೆ. ಗಡಿಯಲ್ಲಿ ನುಸುಳಲಾಗದ ಉಗ್ರರು ನೇರ ಸೇನಾ ಕ್ಯಾಂಪ್ ಗಳ ಮೇಲೆ ದಾಳಿ ಮಾಡುತ್ತಿದ್ದು, ಇದು ಅವರ  ಅಸಹಾಯಕತೆಯನ್ನು ಪ್ರದರ್ಶಿಸುತ್ತದೆ. ಉಗ್ರರಿಗೆ ಇಲ್ಲಿನ ಸ್ಥಳೀಯರು ನೆರವು ನೀಡುತ್ತಿದ್ದು, ಕೇವಲ ಸ್ಥಳೀಯರು ಮಾತ್ರವಲ್ಲದೇ ಇಲ್ಲಿನ ಕೆಲ ಯುವಕರೂ ಕೂಡ ಉಗ್ರ ಸಂಘಟನೆಗಳಿಗೆ ಸೇರುತ್ತಿದ್ದಾರೆ. ಇದು ನಿಜಕ್ಕೂ ಆತಂಕಕಾರಿ  ಬೆಳವಣಿಗೆಯಾಗಿದೆ. ಇಂತಹ ಕ್ಲಿಷ್ಟ ಸಮಸ್ಯೆಗಳನ್ನು ತುರ್ತಾಗಿ ಬಗೆಹರಿಸಬೇಕಿದೆ ಎಂದು ಅನ್ಬು ಆತಂಕ ವ್ಯಕ್ತಪಡಿಸಿದರು.
ಸೇನೆಯಲ್ಲಿ ಯಾವುದೇ ರೀತಿಯ ಧರ್ಮಾಧರಿತ ಬೇಧವಿಲ್ಲ. ಇಲ್ಲಿ ಎಲ್ಲ ಸೈನಿಕರೂ ಭಾರತೀಯ ಸೈನಿಕರೆಂದು ಗುರುತಿಸ್ಪಡುತ್ತಾರೆಯೇ ಹೊರತು ಅವರ ಜಾತಿ, ಧರ್ಮಗಳಿಂದಲ್ಲ, ನಮ್ಮ ಆಲೋಚನೆಗಳು ವಿಶಾಲವಾಗಿದ್ದರೆ  ಮಾತ್ರ ನಾವು ವಿಶಾಲವಾಗಿ ಸಾಧನೆ ಮಾಡಲು ಸಾಧ್ಯವಾಗುತ್ತದೆ. ಈ ನಿಟ್ಟಿನಲ್ಲಿ ಕಣಿವೆ ರಾಜ್ಯದ ಯುವಕರನ್ನು ಪ್ರೋತ್ಸಾಹಿಸಿ ಅವರು ಉಗ್ರತ್ವ ತೊರೆದು ವಾಪಸ್ ಬರುವಂತೆ ಮಾಡಬೇಕು. ಪ್ರಮುಖವಾಗಿ ಯುವಕರು ಉಗ್ರ  ಸಂಘಟನೆಗಳನ್ನು ಸೇರುತ್ತಿದ್ದು, ಇದು ಕಾಶ್ಮೀರ ಸಮಸ್ಯೆ ಬಿಗಡಾಯಿಸುವಂತೆ ಮಾಡಿದೆ. ಈ ಪೈಕಿ ಸಾಮಾಜಿಕ ಜಾಲತಾಣಗಳ ಪಾತ್ರ ಕೂಡ ಪ್ರಮುಖವಾಗಿದ್ದು, ಇಲ್ಲಿ ಪ್ರಸಾರವಾಗುವ ಸಣ್ಣ ಪುಟ್ಟ ವಿಚಾರಗಳೂ ಕೂಡ ಯುವಕರನ್ನು  ಉಗ್ರವಾದದತ್ತ ತೆರಳುವಂತೆ ಪ್ರಚೋದನೆ ನೀಡುತ್ತದೆ. ಈ ಬಗ್ಗೆ ಗಂಭೀರ ಚಿಂತನೆ ಮಾಡಬೇಕಿದೆ ಎಂದು ಅನ್ಹು ಹೇಳಿದರು.
ಅಂತೆಯೇ ಉಗ್ರ ಸಂಘಟನೆಗಳ ವಿರುದ್ಧ ಕಿಡಿಕಾರಿದ ಡಿ ಅನ್ಬು ಅವರು, ಜೆಇಎಂ, ಹೆಚ್ ಎಂ, ಎಲ್ ಇಟಿ ಉಗ್ರ ಸಂಘಟನೆಗಳಲ್ಲಿ ಯಾವುದೇ ವ್ಯತ್ಯಾಸವಿಲ್ಲ. ಹೆಸರುಗದಳು ಬೇರೆಯಾದರೂ ಕೆಲಸ ಮಾತ್ರ ಒಂದೇ. ಯಾರೇ ಆಗಲಿ,  ಕಾರಣ ಏನೇ ಇರಲಿ ದೇಶದ ವಿರುದ್ಧ ಶಸ್ತ್ರಾಸ್ತ್ರ ಹಿಡಿದರೆ ಅವರು ಉಗ್ರವಾದಿಗಳು ಮತ್ತು ದೇಶದ ಶತ್ರುಗಳು. ಶತ್ರುಗಳ ಹೆಡೆಮುರಿ ಕಟ್ಟುವುದು ನಮ್ಮ ಕರ್ತವ್ಯ ಎಂದು ಅನ್ಬು ಖಾರವಾಗಿ ಹೇಳಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.