ದೇಶ

ಜಮ್ಮು-ಕಾಶ್ಮೀರ ದಾಳಿ: ಮುಸ್ಲಿಮರ ಸಾವಿನ ಬಗ್ಗೆ ಮೌನವೇಕೆ- ಒವೈಸಿ

ಜಮ್ಮು-ಕಾಶ್ಮೀರದಲ್ಲಿ ನಡೆದಿರುವ ದಾಳಿಯಲ್ಲಿ ಐವರು ಕಾಶ್ಮೀರಿ ಮುಸ್ಲಿಮರು ಮೃತಪಟ್ಟಿರುವುದರ ಬಗ್ಗೆ ಮಾತನಾಡಿರುವ ಎಂಐಎಂ ಪಕ್ಷದ ಸಂಸದ ಅಸಾವುದ್ದೀನ್ ಒವೈಸಿ ಮುಸ್ಲಿಮರ ದೇಶಪ್ರೇಮವನ್ನು

ಜಮ್ಮು-ಕಾಶ್ಮೀರ ದಾಳಿ: ಮುಸ್ಲಿಮರ ಸಾವಿನ ಬಗ್ಗೆ ಮೌನವೇಕೆ- ಒವೈಸಿ
ಓವೈಸಿ
Published On :

ನವದೆಹಲಿ: ಜಮ್ಮು-ಕಾಶ್ಮೀರದಲ್ಲಿ ನಡೆದಿರುವ ದಾಳಿಯಲ್ಲಿ ಐವರು ಕಾಶ್ಮೀರಿ ಮುಸ್ಲಿಮರು ಮೃತಪಟ್ಟಿರುವುದರ ಬಗ್ಗೆ ಮಾತನಾಡಿರುವ ಎಂಐಎಂ ಪಕ್ಷದ ಸಂಸದ ಅಸಾದುದ್ದೀನ್ ಒವೈಸಿ ಮುಸ್ಲಿಮರ ದೇಶಪ್ರೇಮವನ್ನು ಪ್ರಶ್ನಿಸುವವರ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.

ಮುಸ್ಲಿಮರ ದೇಶಪ್ರೇಮವನ್ನು ಪ್ರಶ್ನಿಸುವವರು ಜಮ್ಮು-ಕಾಶ್ಮೀರದಲ್ಲಿ ನಡೆದಿರುವ ದಾಳಿಯಲ್ಲಿ ಮುಸ್ಲಿಮರು ಮೃತಪಟ್ಟಿರುವ ಬಗ್ಗೆ ಏಕೆ ಮಾತನಾಡುವುದಿಲ್ಲ ಎಂದು ಪ್ರಶ್ನಿಸಿದ್ದಾರೆ.  ಪ್ರತಿ ರಾತ್ರಿ 9 ಕ್ಕೆ ಟಿವಿಗಳಲ್ಲಿ ಮುಸ್ಲಿಮರ ದೇಶಪ್ರೇಮವನ್ನು ಪ್ರಶ್ನಿಸಲಾಗುತ್ತದೆ, ಕಾಶ್ಮೀರಿಗಳ ಬಗ್ಗೆಯೂ ಪ್ರಶ್ನೆ ಕೇಳಲಾಗುತ್ತದೆ. ಜಮ್ಮು-ಕಾಶ್ಮೀರದಲ್ಲಿ ನಡೆದಿರುವ ದಾಳಿಯಲ್ಲಿ ಮೃತಪಟ್ಟಿರುವ 7 ಜನರ ಪೈಕಿ 5 ಜನರು ಮುಸ್ಲಿಮರು ಓರ್ವ ಗರ್ಭಿಣಿ ಸಹ ಮೃತಪಟ್ಟಿದ್ದಾರೆ. ಈಗ ಈ ಸಾವುಗಳ ಬಗ್ಗೆ ಎಲ್ಲರದ್ದೂ ಮೌನ, ಈ ವಿಷಯದ ಬಗ್ಗೆ ಯಾಕೆ ಎಲ್ಲರದ್ದೂ ಮೌನ ಎಂದು ಒವೈಸಿ ಪ್ರಶ್ನಿಸಿದ್ದಾರೆ.

ಜಮ್ಮು-ಕಾಶ್ಮೀರದ ಘಟನೆ ಮುಸ್ಲಿಮರ ದೇಶಪ್ರೇಮ ಹಾಗೂ ಮುಸ್ಲಿಮರನ್ನು ಪಾಕಿಸ್ತಾನಿಗಳು ಎನ್ನುವವರು ಪಾಠ ಕಲಿಯಬೇಕಿದೆ ಎಂದು ಹೇಳಿದ್ದಾರೆ. ಭಯೋತ್ಪಾದಕರು ಮುಸ್ಲಿಮರನ್ನೂ ಉಳಿಸುತ್ತಿಲ್ಲ, ಎಲ್ಲರನ್ನೂ ಭಾರತೀಯರೆಂದೇ ಪರಿಗಣಿಸುತ್ತಾರೆ, ಆದರೆ ನಮ್ಮ ದೇಶದವರು ಮುಸ್ಲಿಮರ ಬದ್ಧತೆಯನ್ನು ಪ್ರಶ್ನಿಸುತ್ತಾರೆ ಎಂದು ಒವೈಸಿ ಹೇಳಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.