ದೆಹಲಿ: ಪೋಷಕರ ಮೇಲಿನ ದ್ವೇಷಕ್ಕೆ ಏಳು ವರ್ಷದ ಬಾಲಕನ ಹತ್ಯೆ ಮಾಡಿದ ಸಂಬಂಧಿ
ಪೋಷಕರ ಮೇಲಿನ ದ್ವೇಷಕ್ಕೆ ಅವರ ಏಳು ವರ್ಷದ ಮಗನನ್ನು ಹತ್ಯೆ ಮಾಡಿದ ಆರೋಪದ ಮೇಲೆ 27 ವರ್ಷದ ವ್ಯಕ್ತಿಯನ್ನು ಬಂಧಿಸಲಾಗಿದೆ...

Published On :
ನವದೆಹಲಿ: ಪೋಷಕರ ಮೇಲಿನ ದ್ವೇಷಕ್ಕೆ ಅವರ ಏಳು ವರ್ಷದ ಮಗನನ್ನು ಹತ್ಯೆ ಮಾಡಿದ ಆರೋಪದ ಮೇಲೆ 27 ವರ್ಷದ ವ್ಯಕ್ತಿಯನ್ನು ಬಂಧಿಸಲಾಗಿದೆ ಎಂದು ಮಂಗಳವಾರ ಪೊಲೀಸರು ತಿಳಿಸಿದ್ದಾರೆ.
7 ವರ್ಷದ ಬಾಲಕನನ್ನು ಹತ್ಯೆ ಮಾಡಿದ ಅವದೀಶ್ ನನ್ನು ಸೋಮವಾರ ರಾತ್ರಿ ಬಂಧಿಸಲಾಗಿದ್ದು, ಆರೋಪಿ ಬಾಲಕನ ಕುಟಂಬಕ್ಕೆ ಪರಿಚಿತನಾಗಿದ್ದು, ದೂರದ ಸಂಬಂಧಿ ಎಂದು ಪೊಲೀಸರು ತಿಳಿಸಿದ್ದಾರೆ.
ಕೊಲೆಯಾದ ಬಾಲಕ ಆಶಿಶ್ ಪಶ್ಚಿಮ ದೆಹಲಿಯ ಸ್ವರೂಪ್ ನಗರ ನಿವಾಸಿಯಾಗಿದ್ದು, ಆತನ ನಿವಾಸದ ಬಳಿಯೇ ಆರೋಪಿ ಅವದೀಶ್ ಸಹ ವಾಸಿಸುತ್ತಿದ್ದ.
ಆಶಿಶ್ ಪೋಷಕರು ತಾನು ಇಲ್ಲದ ವೇಳೆ ತನ್ನನ್ನು ನಿಂದಿಸುತ್ತಿದ್ದರು ಮತ್ತು ತಾನು ಅವರ ಮನೆಗೆ ಹೋಗುವುದನ್ನು ಅವರು ಇಷ್ಟಪಡುತ್ತಿರಲಿಲ್ಲ ಎಂದು ಆರೋಪಿ ಅವದೀಶ್ ಪೊಲೀಸರಿಗೆ ಹೇಳಿರುವುದಾಗಿ ಪೊಲೀಸ್ ಉಪ ಆಯುಕ್ತ ಅಸ್ಲಾಮ್ ಖಾನ್ ಅವರು ಸುದ್ದಿ ಸಂಸ್ಥೆಗೆ ತಿಳಿಸಿದ್ದಾರೆ.
ಅವದೀಶ್ ಆಶಿಶ್ ನನ್ನು ಹತ್ಯೆ ಮಾಡಿ, ಮೃತದೇಹವನ್ನು ಕಬೋರ್ಡ್ ನಲ್ಲಿಟ್ಟಿದ್ದ. ರಸ್ತೆಯಲ್ಲಿ ಸಿಸಿಟಿವಿ ಇರುವುದರಿಂದ ಮೃತದೇಹವನ್ನು ಹೊರ ಸಾಗಿಸುವ ಯತ್ನ ಮಾಡಿಲ್ಲ ಎಂದು ಪೊಲೀಸರು ಹೇಳಿದ್ದಾರೆ.
ಮೃತದೇಹವನ್ನು ವಶಕ್ಕೆ ಪಡೆದಿದ್ದು, ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗಿದೆ ಎಂದು ಖಾನ್ ತಿಳಿಸಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


