ನಾವೂ ಕೂಡ ಭಾರತದ ಒಂದು ಅಂಗ, ಭಾರತದಿಂದ ನಮ್ಮನ್ನು ಬೇರ್ಪಡಿಸುವ ಶಕ್ತಿ ಈ ಭೂಮಿ ಮೇಲಿಲ್ಲ: ಫರೂಖ್ ಅಬ್ದುಲ್ಲಾ
ನಾವೂ ಕೂಡ ಭಾರತ ದೇಶದ ಒಂದು ಅಂಗವಾಗಿದ್ದು, ಭಾರತದಿಂದ ನಮ್ಮನ್ನು ಬೇರ್ಪಡಿಶುವ ಶಕ್ತಿ ಈ ಭೂಮಿ ಮೇಲೆ ಇನ್ನೂ ಹುಟ್ಟಿಲ್ಲ ಎಂದು ನ್ಯಾಷನಲ್ ಕಾನ್ಫರೆನ್ಸ್ ಪಕ್ಷದ ಮುಖ್ಯಸ್ಥ ಫರೂಖ್ ಅಬ್ದುಲ್ಲಾ ಹೇಳಿದ್ದಾರೆ.

Published On :
ಶ್ರೀನಗರ: ನಾವೂ ಕೂಡ ಭಾರತ ದೇಶದ ಒಂದು ಅಂಗವಾಗಿದ್ದು, ಭಾರತದಿಂದ ನಮ್ಮನ್ನು ಬೇರ್ಪಡಿಶುವ ಶಕ್ತಿ ಈ ಭೂಮಿ ಮೇಲೆ ಇನ್ನೂ ಹುಟ್ಟಿಲ್ಲ ಎಂದು ನ್ಯಾಷನಲ್ ಕಾನ್ಫರೆನ್ಸ್ ಪಕ್ಷದ ಮುಖ್ಯಸ್ಥ ಫರೂಖ್ ಅಬ್ದುಲ್ಲಾ ಹೇಳಿದ್ದಾರೆ.
ಜಮ್ಮು ಮತ್ತು ಕಾಶ್ಮೀರ ವಿಧಾನಸಭೆಯಲ್ಲಿ ನ್ಯಾಷನಲ್ ಕಾನ್ಫರೆನ್ಸ್ ಪಕ್ಷದ ಶಾಸಕ ಅಕ್ಬರ್ ಲೋನೆ ಪಾಕಿಸ್ತಾನ ಜಿಂದಾಬಾದ್ ಎಂಬ ಘೋಷಣೆ ಕೂಗಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಭಾನುವಾರ ಶ್ರೀನಗರದಲ್ಲಿ ಪ್ರತಿಕ್ರಿಯೆ ನೀಡಿದ ಫರೂಖ್ ಅಬ್ದುಲ್ಲಾ, ಶಾಸಕ ಅಕ್ಬರ್ ಲೋನೆ ಅವರ ಹೇಳಿಕೆ ಅವರ ವೈಯುಕ್ತಿಕ ಹೇಳಿಕೆಯಷ್ಟೇ. ಆ ಹೇಳಿಕೆಗೂ ಪಕ್ಷಕ್ಕೂ ಯಾವುದೇ ರೀತಿಯ ಸಂಬಂಧವಿಲ್ಲ. ಆ ಹೇಳಿಕೆ ಪಕ್ಷದ ಅಭಿಪ್ರಾಯವಲ್ಲ ಎಂದು ಹೇಳಿದ್ದಾರೆ.
ಅಂತೆಯೇ ನಾವು ಭಾರತದ ಅಂಗವಾಗಿದ್ದು, ಮುಂದೆಯೂ ಭಾರತೀಯರೆಂದು ಗುರುತಿಸಿಕೊಳ್ಳಲ್ಲಿದ್ದೇವೆ. ನಮ್ಮನ್ನು ಭಾರತದಿಂದ ಬೇರ್ಪಡಿಸುವ ಶಕ್ತಿ ಇನ್ನೂ ಈ ಭೂಮಿ ಮೇಲೆ ಇಲ್ಲ ಎಂದು ಫರೂಖ್ ಅಬ್ದುಲ್ಲಾ ಹೇಳಿದ್ದಾರೆ.
ಇತ್ತೀಚೆಗೆ ಜಮ್ಮು ಮತ್ತು ಕಾಶ್ಮೀರ ವಿಧಾನಸಭೆಯಲ್ಲಿ ಶಾಸಕ ಅಕ್ಬರ್ ಲೋನೆ ಪಾಕಿಸ್ತಾನ ಜಿಂದಾಬಾದ್ ಎಂದು ಘೋಷಣೆ ಕೂಗಿದ್ದರು. ಈ ವಿಚಾರ ವ್ಯಾಪಕ ಸುದ್ದಿಗೆ ಗ್ರಾಸವಾಗಿ ನ್ಯಾಷನಲ್ ಕಾನ್ಫರೆನ್ಸ್ ಪಕ್ಷದ ವಿರುದ್ಧ ವ್ಯಾಪಕ ಆಕ್ರೋಶ ವ್ಯಕ್ತವಾಗುತ್ತಿದೆ. ಅಂತೆಯೇ ಪಾಕ್ ಪರ ಘೋಷಣೆ ಕೂಗಿದ ಶಾಸಕನನ್ನು ಪಕ್ಷದಿಂದ ಉಚ್ಛಾಟನೆ ಮಾಡುವಂತೆ ಆಗ್ರಹಿಸಲಾಗುತ್ತಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
ಶ್ರೀನಗರSrinagarFarooq Abdullahಫಾರೂಖ್ ಅಬ್ದುಲ್ಲಾJammu And Kashmir AssemblyPakistan Zindabad Sloganಜಮ್ಮು ಮತ್ತು ಕಾಶ್ಮೀರ ವಿಧಾನಸಭೆಪಾಕಿಸ್ತಾನ ಜಿಂದಾಬಾದ್ ಘೋಷಣೆ
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


