6 ಒಡಂಬಡಿಕೆಗಳಿಗೆ ಸಹಿ ಹಾಕಿದ ಭಾರತ, ಪ್ಯಾಲೆಸ್ತೀನ್
40 ದಶಲಕ್ಷ ಡಾಲರ್ ಮೊತ್ತದ 6 ಒಡಂಬಡಿಕೆಗಳಿಗೆ ಭಾರತ ಮತ್ತು ಪ್ಯಾಲೆಸ್ತೀನ್ ಶನಿವಾರ ಸಹಿ ....

Published On :
ಅಬು ದಾಬಿ(ಯುನೈಟೆಡ್ ಅರಬ್ ಎಮಿರೇಟ್ಸ್): 40 ದಶಲಕ್ಷ ಡಾಲರ್ ಮೊತ್ತದ 6 ಒಡಂಬಡಿಕೆಗಳಿಗೆ ಭಾರತ ಮತ್ತು ಪ್ಯಾಲೆಸ್ತೀನ್ ಶನಿವಾರ ಸಹಿ ಹಾಕಿದೆ.
ಭಾರತ ಮತ್ತು ಪ್ಯಾಲೆಸ್ತೀನ್ ಮಧ್ಯೆ 40 ದಶಲಕ್ಷ ಡಾಲರ್ ಮೊತ್ತದ 6 ಒಪ್ಪಂದಗಳಿಗೆ ಸಹಿ ಹಾಕಲಾಗಿದೆ. ಇದನ್ನು ಪ್ಯಾಲೆ ಸ್ತೀನ್ ಅಧ್ಯಕ್ಷ ಮಹಮೊದ್ ಅಬ್ಬಾಸ್ ಮತ್ತು ಅವರ ತಂಡ ಸ್ವಾಗತಿಸಿದೆ ಎಂದು ಅಬುದಾಬಿಯಲ್ಲಿ ವಿದೇಶಾಂಗ ಕಾರ್ಯದರ್ಶಿ ವಿಜಯ್ ಗೋಖಲೆ ತಿಳಿಸಿದ್ದಾರೆ.
ಭಾರತ ಕೈಗೊಳ್ಳುತ್ತಿರುವ ಹೊಸ ಯೋಜನೆಗಳನ್ನು ಘೋಷಣೆಗೆ ಕೂಡ ಸಂದರ್ಭವನ್ನು ವಿದೇಶಾಂಗ ಸಚಿವರು ಬಳಸಿಕೊಂಡರು.
ಈಗ ನಡೆಯುತ್ತಿರುವ ಯೋಜನೆಗಳಿಗೆ ಪ್ಯಾಲೆಸ್ತೀನ್ ಅಧ್ಯಕ್ಷರು ಭಾರತವನ್ನು ಅಭಿನಂದಿಸಿದರು. ಈ ಸಂದರ್ಭದಲ್ಲಿ ಹೊಸ ಎರಡು ಯೋಜನೆಗಳನ್ನು ಗಮನಕ್ಕೆ ತರಲು ಬಯಸುತ್ತೇನೆ. ಭಾರತ ಪ್ಯಾಲೆಸ್ತೀನ್ ನಲ್ಲಿ 100 ಬೆಡ್ ಗಳ ಅತ್ಯಾಧುನಿಕ ವಿಶೇಷ ಆಸ್ಪತ್ರೆಯನ್ನು ನಿರ್ಮಿಸಲಿದೆ. ಅಲ್ಲದೆ ಭಾರತ, ಪ್ಯಾಲೆಸ್ತೀನ್ ನಲ್ಲಿ ಮಹಿಳಾ ಸಶಕ್ತೀಕರಣ ಕೇಂದ್ರವನ್ನು ನಿರ್ಮಿಸಲಿದ್ದು, ಅಲ್ಲಿ ಪ್ಯಾಲೆಸ್ತೀನ್ ನ ವಿವಿಧ ಭಾಗಗಳ ಮಹಿಳೆಯರು ಬಂದು ಕೌಶಲ್ಯಗಳನ್ನು ಕಲಿಯಬಹುದು ಎಂದು ವಿಜಯ್ ಗೋಖಲೆ ತಿಳಿಸಿದರು.
ಪ್ಯಾಲೆಸ್ತೀನ್ ನಲ್ಲಿ ಶಾಲೆಗಳ ನವೀಕರಣ ಕಾರ್ಯ ಪ್ರಗತಿಯಲ್ಲಿದ್ದು ರಾಷ್ಟ್ರೀಯ ಮುದ್ರಣ ಮಾಧ್ಯಮಕ್ಕೆ ಯಂತ್ರಗಳ ಪೂರೈಕೆಯನ್ನು ಕೂಡ ಭಾರತ ಮಾಡುತ್ತದೆ ಎಂದು ಗೋಖಲೆ ತಿಳಿಸಿದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


