ದೇಶ

ಮಹದಾಯಿ ನೀರು ಹಂಚಿಕೆ ಬಗ್ಗೆ ನ್ಯಾಯಾಧೀಕರಣ ತೀರ್ಮಾನಿಸುತ್ತದೆ: ಗೋವಾ ಸಿಎಂ ಮತ್ತೆ ಕ್ಯಾತೆ

ಮಾನವೀಯತೆ ನೆಲೆಯಲ್ಲಿ ಮಹದಾಯಿ ನದಿ ನೀರನ್ನು ಕುಡಿಯುವ ಉದ್ದೇಶಕ್ಕೆ ಕರ್ನಾಟಕಕ್ಕೆ ...

ಮಹದಾಯಿ ನೀರು ಹಂಚಿಕೆ ಬಗ್ಗೆ ನ್ಯಾಯಾಧೀಕರಣ ತೀರ್ಮಾನಿಸುತ್ತದೆ: ಗೋವಾ ಸಿಎಂ ಮತ್ತೆ ಕ್ಯಾತೆ
ಗೋವಾ ಮುಖ್ಯಮಂತ್ರಿ ಮನೋಹರ್ ಪರ್ರಿಕರ್
Published On :
ಪಣಜಿ: ಮಾನವೀಯತೆ ನೆಲೆಯಲ್ಲಿ ಮಹದಾಯಿ ನದಿ ನೀರನ್ನು ಕುಡಿಯುವ ಉದ್ದೇಶಕ್ಕೆ ಕರ್ನಾಟಕಕ್ಕೆ  ಹಂಚಿಕೆ ಮಾಡುವುದಾಗಿ ಮಾತುಕತೆ ನಡೆಸಿದ ಎರಡು ತಿಂಗಳ ನಂತರ ಇದೀಗ ಮತ್ತೊಮ್ಮೆ ಗೋವಾ ಸರ್ಕಾರ ತನ್ನ ಮಾತನ್ನು ಮುರಿದಿದೆ.
ನಿನ್ನೆ ಪ್ರತಿಕ್ರಿಯೆ ನೀಡಿರುವ ಗೋವಾ ಮುಖ್ಯಮಂತ್ರಿ ಮನೋಹರ್ ಪರ್ರಿಕರ್, ಕೇಂದ್ರ ಸರ್ಕಾರ  ನೇಮಿಸಿರುವ ಅಂತರಾಜ್ಯ ನೀರು ವಿವಾದ ನ್ಯಾಯಾಧೀಕರಣವೇ ಮಹದಾಯಿ ನೀರು ಹಂಚಿಕೆ ಕುರಿತು ನಿರ್ಧರಿಸಲಿದೆ ಎಂದು ಹೇಳಿದ್ದಾರೆ. 
ರಾಜ್ಯ ಸಚಿವಾಲಯದಲ್ಲಿ ನಿನ್ನೆ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಶೈಕ್ಷಣಿಕ ಹಿತಾಸಕ್ತಿ ಕುರಿತು ಚರ್ಚೆ ನಡೆಸಲಾಯಿತು ಎಂದು ಹೇಳಿದರು.
ಶೈಕ್ಷಣಿಕ ಹಿತಾಸಕ್ತಿ ವಿಷಯಗಳ ಕುರಿತು ಮಾತ್ರ ಚರ್ಚೆ ನಡೆಸಿದವು. ಮಹದಾಯಿ ನದಿ ನೀರು ಹಂಚಿಕೆ ಕೇಸಿನ ಬಗ್ಗೆ ನಾವು ನ್ಯಾಯಾಧೀಕರಣದಲ್ಲಿ ಹೋರಾಟ ನಡೆಸುತ್ತೇವೆ. ಎಲ್ಲಾ ವಿಷಯಗಳ ಬಗ್ಗೆ ನಿಮಗೇಕೆ ಉತ್ತರ ಬೇಕು? ನ್ಯಾಯಾಧೀಕರಣ ತೀರ್ಮಾನ ಮಾಡುವುದಾದರೆ ಮಾಡಲಿ ಎಂದು ಸುದ್ದಿಗಾರರ ಮೇಲೆ ಪರ್ರಿಕರ್ ಹರಿಹಾಯ್ದರು.
ಮಹದಾಯಿ ನದಿಗೆ ಅಡ್ಡಲಾಗಿ ಕಟ್ಟಲಾಗಿರುವ ಕಳಸಾ-ಬಂಡೂರಿ ಅಣೆಕಟ್ಟು ಯೋಜನೆ ಕುರಿತು ಗೋವಾ, ಕರ್ನಾಟಕ ಮತ್ತು ಮಹಾರಾಷ್ಟ್ರಗಳ ನಡುವೆ ವಿವಾದವಿದ್ದು ಮಹದಾಯಿ ತಳಭಾಗದಿಂದ ನೀರನ್ನು ಮಲಪ್ರಭಾ ನದಿಗೆ ಹರಿಸಲು ಕರ್ನಾಟಕ ಉದ್ದೇಶವನ್ನು ಹೊಂದಿದೆ.
ಮಾಂಡೊವಿ ನದಿ ಎಂದು ಕರೆಯಲ್ಪಡುವ ಮಹದಾಯಿ ನದಿ ಕರ್ನಾಟಕದಲ್ಲಿ ಹುಟ್ಟಿ ಗೋವಾದ ಪಣಜಿ ಮತ್ತು ಮಹಾರಾಷ್ಟ್ರ ಮೂಲಕವಾಗಿ ಹರಿದು ಅರೇಬಿಯನ್ ಸಮುದ್ರ ಸೇರುತ್ತದೆ. ಕರ್ನಾಟಕದಲ್ಲಿ ಇದರ ಹರಿವು 28.8 ಕಿಲೋ ಮೀಟರ್ ಹಾಗೂ ಗೋವಾದಲ್ಲಿ 50ಕಿಲೋ ಮೀಟರ್ ಇದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.