ದೇಶ

ಶ್ರೀಲಂಕಾ ನೌಕಾದಳದಿಂದ ಇಬ್ಬರು ಭಾರತೀಯರ ಬಂಧನ, ಒಂದು ಕೋಟಿ ಮೌಲ್ಯದ ಹೆರಾಯಿನ್ ವಶ

ಮಾದಕ ದ್ರವ್ಯ ಹೆರಾಯಿನ್ ನ ಅಕ್ರಮ ಸಾಗಾಟದಲ್ಲಿ ತೊಡಗಿದ್ದ ಇಬ್ಬರು ಭಾರತೀಯರನ್ನು ಶ್ರೀಲಂಕಾ ನೌಕಾಪಡೆ ಬಂಧಿಸಿದೆ.

ಶ್ರೀಲಂಕಾ ನೌಕಾದಳದಿಂದ ಇಬ್ಬರು ಭಾರತೀಯರ ಬಂಧನ, ಒಂದು ಕೋಟಿ ಮೌಲ್ಯದ ಹೆರಾಯಿನ್ ವಶ
ಶ್ರೀಲಂಕಾ ನೌಕಾದಳದಿಂದ ಇಬ್ಬರು ಭಾರತೀಯರ ಬಂಧನ, ಒಂದು ಕೋಟಿ ಮೌಲ್ಯದ ಹೆರಾಯಿನ್ ವಶ
Published On :
ರಾಮೇಶ್ವರಂ: ಮಾದಕ ದ್ರವ್ಯ ಹೆರಾಯಿನ್ ನ ಅಕ್ರಮ ಸಾಗಾಟದಲ್ಲಿ ತೊಡಗಿದ್ದ ಇಬ್ಬರು ಭಾರತೀಯರನ್ನು ಶ್ರೀಲಂಕಾ ನೌಕಾಪಡೆ ಬಂಧಿಸಿದೆ. ಬಂಧಿತ ಆರೋಪಿಗಳು ಒಂದು ಕೋಟಿ ಮೌಲ್ಯದ 425 ಗ್ರಾಂ ಹೆರಾಯಿನ್ ಸಾಗಾಟ ನಡೆಸಿದ್ದರು.
ಶ್ರೀಲಂಕಾ ನೌಕಾ ಸಿಬ್ಬಂದಿಗಳ ತಂಡವು ಧನುಷ್ಕೋಡಿಯ ಮನ್ನಾರ್ ವಲಯದ ತಮ್ಮ ವ್ಯಾಪ್ತಿಯ ಸಮುದ್ರದಲ್ಲಿ ಕಳೆದ ರಾತ್ರಿ ಕಾರ್ಯಾಚರಣೆ ನಡೆಸಿದ್ದು 425 ಗ್ರಾಂ ಹೆರಾಯಿನ್ ಮತ್ತು ತಂಬಾಕು ಉತ್ಪನ್ನಗಳನ್ನು (ಬೀಡಿ) ವಶಪಡಿಸಿಕೊಂಡಿದೆ ಎಂದು ಗುಪ್ತಚರ ಇಲಾಖೆಯ ಮೂಲಗಳು ತಿಳಿಸಿವೆ.
ವಶಕ್ಕೆ ಪಡೆದ ಇಬ್ಬರು ಆರೋಪಿಗಳನ್ನು ತಲೈಮನ್ನಾರ್ ಗೆ ಕರೆದೊಯ್ಯಲಾಗಿದ್ದು  ಅವರೊಡನೆ ಅವರು ಬಳಸುತ್ತಿದ್ದ ದೋಣಿಯನ್ನೂ ಅಧಿಕಾರಿಗಳು ವಶಪಡಿಸಿಕೊಂಡಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.