ದೇಶ

ಕಾನ್ಪುರ: ಲಂಚದ ಆರೋಪ, ಜಿಎಸ್‌ಟಿ ಕಮಿಷನರ್ ಮತ್ತು ಎಂಟು ಮಂದಿ ಸಿಬಿಐ ವಶ

ಲಂಚದ ಆರೋಪದ ಮೇಲೆ ಕರ್ತವ್ಯ ನಿರತ ಸರಕು ಮತ್ತು ಸೇವಾ ತೆರಿಗೆ ಆಯುಕ್ತ (ಜಿಎಸ್‌ಟಿ) ಸನ್ಸಾರ್ ಚಾಂದ್ ಹಾಗೂ ಎಂಟು ಮಂದಿಯನ್ನು ಸಿಬಿಐ ವಶಕ್ಕೆ......

ಕಾನ್ಪುರ: ಲಂಚದ ಆರೋಪ, ಜಿಎಸ್‌ಟಿ ಕಮಿಷನರ್ ಮತ್ತು ಎಂಟು ಮಂದಿ ಸಿಬಿಐ ವಶ
ಕಾನ್ಪುರ: ಲಂಚದ ಆರೋಪ, ಜಿಎಸ್‌ಟಿ ಕಮಿಷನರ್ ಮತ್ತು ಎಂಟು ಮಂದಿ ಸಿಬಿಐ ವಶ
Published On :
ನವದೆಹಲಿ: ಲಂಚದ ಆರೋಪದ ಮೇಲೆ ಕರ್ತವ್ಯ ನಿರತ ಸರಕು ಮತ್ತು ಸೇವಾ ತೆರಿಗೆ ಆಯುಕ್ತ (ಜಿಎಸ್‌ಟಿ) ಸನ್ಸಾರ್ ಚಾಂದ್ ಹಾಗೂ ಎಂಟು ಮಂದಿಯನ್ನು ಸಿಬಿಐ ವಶಕ್ಕೆ ಪಡೆದಿರುವ ಘಟನೆ ಉತ್ತರ ಪ್ರದೇಶದ ಕಾನ್ಪುರದಲ್ಲಿ ನಡೆದಿದೆ.
ಸನ್ಸಾರ್ ಚಾಂದ್ ಹಾಗೂ ಅವರ ಕೆಳಗೆ ಕೆಲಸ ಮಾಡುತ್ತಿದ್ದ ಮೂವರು ಸಿಬ್ಬಂದಿ ಹಾಗೂ ಇನ್ನೂ ಐದು ಜನರನ್ನು ಸಿಬಿಐ ಬಂಧಿಸಿದೆ. 1986ರ ಬ್ಯಾಚ್ ಐಆರ್ ಎಸ್ ಅಧಿಕಾರಿಯಾಗಿದ್ದ ಸನ್ಸಾರ್ ಚಾಂದ್ ಕಾನ್ಪುರದಲ್ಲಿ ಕಮಿಷನರ್ ಆಗಿ ಕಾರ್ಯನಿರ್ವಹಿಸುತ್ತಿದ್ದರು ಎಂದು ಮೂಲಗಳು ಹೇಳಿದೆ.
ಕಮಿಷನರ್ ತಾನು ಮಾಸಿಕ ಹಾಗೂ ವಾರದ ಅವಧಿಗೊಮ್ಮೆ ಉದ್ಯಮಿಗಳಿಂದ ಲಂಚ ಸ್ವೀಕರಿಸುತ್ತಿದ್ದರೆಂದು ಆರೋಪಿಸಲಾಗಿದ್ದು ಕಳೆದ ರಾತ್ರಿ ಇವರನ್ನು ಬಂಧಿಸುವ ವೇಳೆಯಲ್ಲಿ ಸುಮಾರು 1.5 ಲಕ್ಷ ರೂ. ಸಿಕ್ಕಿದೆ. ಹಾಗೆಯೇ ಅಧಿಕಾರಿಗಳಿಗೆ ಲಂಚ ನೀಡಿದ್ದ ವ್ಯಕ್ತಿಯನ್ನೂ ವಶಕ್ಕೆ ತೆಗೆದುಕೊಳ್ಳಲಾಗಿದೆ ಎಂದು ಮೂಲಗಳು ಹೇಳಿದೆ.
ಇನ್ನೊಂದು ಮೂಲದ ಪ್ರಕಾರ ಕಮಿಷನರ್ ಪತ್ನಿಯ ವಿರುದ್ಧ ಸಹ ಎಫ್ ಐ ಆರ್ ದಾಖಲಿಸಲಾಗಿದೆ ಆದರೆ ಅವರನ್ನು ಬಂಧಿಸಿಲ್ಲ ಎಂದು ತಿಳಿದುಬಂದಿದೆ

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.