ದೇಶ

ಕಾಕಿನಾಡ ಬಂದರಿನಲ್ಲಿ ಎರಡು ಕ್ರೇನ್ ಗಳ ಕುಸಿತ, ಓರ್ವ ಸಾವು, 10 ಮಂದಿಗೆ ಗಾಯ

ನೆರೆಯ ಆಂಧ್ರಪ್ರದೇಶದ ಕಾಕಿನಾಡ ಬಂದರಿನಲ್ಲಿ ದುರಸ್ಥಿ ಮಾಡಲಾಗುತ್ತಿದ್ದ ಎರಡು ಬೃಹತ್ ಗಾತ್ರದ ಕ್ರೇನ್ ಗಳು ಕುಸಿದ ಪರಿಣಾಮ ಓರ್ವ ಮೃತಪಟ್ಟಿದ್ದು, ಮತ್ತಿಬ್ಬರು ಗಾಯಗೊಂಡಿದ್ದಾರೆ. ಇನ್ನೂ ಹಲವು ಮಂದಿ ಅವಶೇಷಗಳಡಿಯಲ್ಲಿ ಸಿಲುಕಿರುವ ಸಾಧ್ಯತೆ ಇದೆ.

ಕಾಕಿನಾಡ  ಬಂದರಿನಲ್ಲಿ ಎರಡು ಕ್ರೇನ್ ಗಳ ಕುಸಿತ,  ಓರ್ವ ಸಾವು, 10 ಮಂದಿಗೆ ಗಾಯ
ಕುಸಿತಗೊಂಡಿರುವ ಕ್ರೇನ್ ಗಳು
Published On :

ಕಾಕಿನಾಡ: ನೆರೆಯ ಆಂಧ್ರಪ್ರದೇಶದ  ಕಾಕಿನಾಡ ಬಂದರಿನಲ್ಲಿ  ದುರಸ್ಥಿ ಮಾಡಲಾಗುತ್ತಿದ್ದ ಎರಡು ಬೃಹತ್ ಗಾತ್ರದ ಕ್ರೇನ್ ಗಳು  ಕುಸಿದ ಪರಿಣಾಮ ಓರ್ವ ಮೃತಪಟ್ಟಿದ್ದು, ಮತ್ತಿಬ್ಬರು ಗಾಯಗೊಂಡಿದ್ದಾರೆ. ಇನ್ನೂ ಹಲವು ಮಂದಿ ಅವಶೇಷಗಳಡಿಯಲ್ಲಿ ಸಿಲುಕಿರುವ ಸಾಧ್ಯತೆ ಇದೆ.

 ಬೆಳಗ್ಗೆ 10-30ರಲ್ಲಿ ಈ ದುರ್ಘಟನೆ ನಡೆದಿದೆ. ಬಂದರಿನಲ್ಲಿ ಹಡಗುಗಳಿಂದ ಸರಕು ಮತ್ತು ಸಾಮಾಗ್ರಿಗಳನ್ನು ಇಳಿಸುವ , ತುಂಬುವ ಕೆಲಸದಲ್ಲಿ ಕೆಲಸಗಾರರು ನಿರತರಾಗಿದ್ದಾಗ ಇದಕ್ಕಾಗಿ ಬಳಸುತ್ತಿದ್ದ ಬೃಹತ್ ಗಾತ್ರದ ಕ್ರೇನ್ ಗಳು ಹಠಾತ್ತನೇ ಕುಸಿದಿವೆ.

ಕೂಡಲೇ ಸ್ಥಳಕ್ಕೆ ಧಾವಿಸಿದ  ಅಗ್ನಿ ಮತ್ತು ಸುರಕ್ಷತಾ ವಿಭಾಗದ ಸಿಬ್ಬಂದಿ ಹಾಗೂ ಪೊಲೀಸರು ರಕ್ಷಣಾ ಕಾರ್ಯಾಚರಣೆ ನಡೆಸಿದ್ದಾರೆ. ಮೃತನನ್ನು ಪಶ್ಚಿಮ ಗೋದಾವರಿ ಜಿಲ್ಲೆಯ ಕೊವೂರು ಗ್ರಾಮದ ವಿಟೈಪಲ್ಲಿ  ಲಕ್ಷ್ಮಣ್ ಕುಮಾರ್ (35 ) ಎಂದು ಗುರುತಿಸಲಾಗಿದೆ.

ಗಾಯಾಳುಗಳನ್ನು ಸಮೀಪದ ಆಸ್ಪತ್ರಗೆ ದಾಖಲಿಸಲಾಗಿದೆ. ಗಾಯಾಳುಗಳ ಪೈಕಿ ಮತ್ತೊಬ್ಬ ವ್ಯಕ್ತಿಯ ಆರೋಗ್ಯ ಪರಿಸ್ಥಿತಿ ಗಂಭೀರವಾಗಿದೆ ಎಂದು ತಿಳಿದುಬಂದಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.