ಭಾರತೀಯ ಕಾನೂನು ಉಲ್ಲಂಘಿಸುವ ವಿದೇಶಿ ಪತ್ರಕರ್ತರಿಗೆ ಶಿಕ್ಷೆ - ಗೃಹ ವ್ಯವಹಾರಗಳ ಸಚಿವಾಲಯ
ಭಾರತೀಯ ಕಾನೂನುಗಳನ್ನು ಉಲ್ಲಂಘಿಸುವ ವಿದೇಶಿ ಪತ್ರಕರ್ತರನ್ನು ಶಿಕ್ಷೆಗೆ ಗುರಿಪಡಿಸಲಾಗುವುದು ಎಂದು ಗೃಹ ವ್ಯವಹಾರಗಳ ಸಚಿವಾಲಯ ಸೂಚನೆ ನೀಡಿದೆ.

Published On :
ನವದೆಹಲಿ: ಭಾರತೀಯ ಕಾನೂನುಗಳನ್ನು ಉಲ್ಲಂಘಿಸುವ ವಿದೇಶಿ ಪತ್ರಕರ್ತರನ್ನು ಶಿಕ್ಷೆಗೆ ಗುರಿಪಡಿಸಲಾಗುವುದು ಎಂದು ಗೃಹ ವ್ಯವಹಾರಗಳ ಸಚಿವಾಲಯ ಸೂಚನೆ ನೀಡಿದೆ.
ವೀಸಾ ಕಾನೂನು ಉಲ್ಲಂಘಿಸಿ ಭಾರತದೊಳಗೆ ಪ್ರವೇಶ ಆರೋಪವನ್ನು ರಾಯಟರ್ಸ್ ಪತ್ರಕರ್ತ ನಿರಾಕರಿಸಿದ ನಂತರ ಗೃಹ ವ್ಯವಹಾರಗಳ ಸಚಿವಾಲಯ ಈ ರೀತಿಯ ಹೇಳಿಕೆ ನೀಡಿದೆ.
2018ರ ಪುಲ್ಟಿಜರ್ ಪ್ರಶಸ್ತಿ ವಿಜೇತ , ಇರಾನ್ ಪ್ರಜೆ ಮ್ಯಾಕ್ ನಾಟನ್ ಜಮ್ಮು ಮತ್ತು ಕಾಶ್ಮೀರದ ನಿಷೇಧಿತ ಪ್ರದೇಶವನ್ನು ಅನುಮತಿ ಪಡೆಯದೇ ಪ್ರವೇಶಿಸಿರುವ ಆರೋಪ ಎದುರಿಸುತ್ತಿದ್ದಾರೆ. ಅವರು ಅನೇಕ ಪ್ರಶಸ್ತಿಗಳನ್ನು ಪಡೆದಿರಬಹುದು , ಆದರೆ, ಅವುಗಳು ಭಾರತೀಯ ಕಾನೂನು ಉಲ್ಲಂಘಿಸುವ ಪರವಾನಗಿ ಅಲ್ಲ ಎಂದು ಅವರು ತೀಕ್ಷ್ಣ ಪ್ರತಿಕ್ರಿಯೆ ನೀಡಿದ್ದಾರೆ.
ಭಾರತೀಯ ಕಾನೂನು ಮತ್ತು ನೀತಿಗಳ ಬಗ್ಗೆ ವಿದೇಶಿ ಪತ್ರಕರ್ತರಿಗೆ ಗೃಹ ಸಚಿವಾಲಯದಿಂದ ನಿರಂತರವಾಗಿ ಮಾಹಿತಿ ನೀಡಲಾಗುತ್ತದೆ. ಯಾರೇ ವಿದೇಶಿಯರಾಗಿರಲೀ ಕಡ್ಡಾಯವಾಗಿ ಅನುಮತಿ ಪಡೆಯಲೇಬೇಕು, ಒಂದು ವೇಳೆ ಕಾನೂನು ಮತ್ತು ನೀತಿ ಉಲ್ಲಂಘಿಸಿದ್ದರೆ ಅಗತ್ಯ ಕ್ರಮ ಕೈಗೊಳ್ಳಬೇಕಾಗುತ್ತದೆ ಎಂದು ಅವರು ಎಚ್ಚರಿಕೆ ನೀಡಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
New Delhiforeign journalistsವಿದೇಶಿ ಪತ್ರಕರ್ತರುHome affairs ministryಗೃಹ ವ್ಯವಹಾರಗಳ ಸಚಿವಾಲಯViolating Indian laws ನವ ದೆಹಲಿಭಾರತೀಯ ಕಾನೂನು ಉಲ್ಲಂಘನೆ
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


