ಒಡಿಶಾ: ಗರ್ಭೀಣಿ ಮಹಿಳೆಯ ಜೀವ ಉಳಿಸಿದ ವಿಕಲಚೇತನ ಯುವಕ
ಸಮಾಜ ಸೇವೆ ಮಾಡಲು ಅಂಗ ವೈಕಲ್ಯ ಅಡ್ಡಿಯಾಗುವುದಿಲ್ಲ ಎಂಬುದನ್ನು ಒಡಿಶಾದ ಯುವಕ ದೇವಾನಂದ್ ಲ್ಯಾಮ್ತಾ ಅವರು ಸಾಬೀತು ಮಾಡಿದ್ದಾರೆ.

Published On :
ನಬರಂಗಪುರ್: ಸಮಾಜ ಸೇವೆ ಮಾಡಲು ಅಂಗ ವೈಕಲ್ಯ ಅಡ್ಡಿಯಾಗುವುದಿಲ್ಲ ಎಂಬುದನ್ನು ಒಡಿಶಾದ ಯುವಕ ದೇವಾನಂದ್ ಲ್ಯಾಮ್ತಾ ಅವರು ಸಾಬೀತು ಮಾಡಿದ್ದಾರೆ.
ನಬರಂಗಪುರ್ ಜಿಲ್ಲೆಯ ಸದಾರ್ ಬ್ಲಾಕ್ ನ ಹತಿಬೇಡ ಗ್ರಾಮದ ನಿವಾಸಿಯಾಗಿರುವ ದೇವಾನಂದ್ ಕಳೆದ ಮಂಗಳವಾರ ತುರ್ತು ಪರಿಸ್ಥಿತಿಯಲ್ಲಿ ಗರ್ಭೀಣಿ ಮಹಿಳೆಯೊಬ್ಬರಿಗೆ ರಕ್ತದಾನ ಮಾಡುವ ಮೂಲಕ ಅಮೂಲ್ಯ ಜೀವ ಉಳಿಸಿದ್ದಾರೆ.
ವರದಿಗಳ ಪ್ರಕಾರ, ಜಿಲ್ಲೆಯ ಸಕಾರ್ಗುಡ ಗ್ರಾಮದ ಗರ್ಭೀಣಿ ಮಹಿಳೆ ಫುಲ್ಲಾ ಭೋಟ್ರಾ ಎರಡು ದಿನಗಳ ಹಿಂದೆ ಹೇರಿಗೆ ನೋವು ಕಾಣಿಸಿಕೊಂಡ ನಂತರ ಜಿಲ್ಲಾ ಸರ್ಕಾರಿ ಆಸ್ಪತ್ರೆಗೆ ದಾಖಲಾಗಿದ್ದರು. ಆದರೆ ಹೇರಿಗೆ ಸಮಯದಲ್ಲಿ ಮಹಿಳೆ ರಕ್ತಹೀನತೆಯಿಂದ ಬಳಲುತ್ತಿರುವುದರಿಂದ ವೈದ್ಯರು ಬಿ ಪಾಸಿಟಿವ್ ರಕ್ತ ತರುವಂತೆ ಮಹಿಳೆಯ ಪತಿ ಜಾಧವ್ ಭೋಟ್ರಾಗೆ ತಿಳಿಸಿದ್ದಾರೆ.
ಬ್ಲಡ್ ಬ್ಯಾಂಕ್ ನಲ್ಲಿ ಬಿ ಪಾಸಿಟಿವ್ ರಕ್ತ ಲಭ್ಯವಾಗಿಲ್ಲ. ಹೀಗಾಗಿ ಜಾಧವ್ ಆಸ್ಪತ್ರೆಯಲ್ಲಿರುವ ಎಲ್ಲಾ ಸಿಬ್ಬಂದಿಗೂ ತನ್ನ ಪತ್ನಿಗೆ ರಕ್ತದಾನ ಮಾಡುವಂತೆ ಕೇಳಿಕೊಂಡಿದ್ದೇನೆ. ಆದರೆ ಯಾರೂ ಮುಂದೆಬರದಿದ್ದಾಗ ಆಸ್ಪತ್ರೆಯ ಸೆಕ್ಯೂರಿಟಿ ಗಾರ್ಡ್ ನಿಂದ ಮಾಹಿತಿ ತಿಳಿದ 28 ವರ್ಷದ ದಿವ್ಯಾಂಗ ಯುವಕ ದೇವಾನಂದ್ ಅವರು ಕೂಡಲೇ ಆಸ್ಪತ್ರೆಗೆ ಆಗಮಿಸಿ ರಕ್ತದಾನ ಮಾಡಿದ್ದಾರೆ.
ಒಂದು ಸಣ್ಣ ಅಂಗಡಿ ಇಟ್ಟುಕೊಂಡಿರುವ ದೇವಾನಂದ್ ಈ ಹಿಂದೆಯೂ ಹಲವು ಬಾರಿ ತುರ್ತು ಸಂದರ್ಭಗಳಲ್ಲಿ ರಕ್ತದಾನ ಮಾಡಿದ್ದಾರೆ ಎಂದು ಸ್ಥಳೀಯರು ತಿಳಿಸಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


