ಡಿ.29ರ ಬಳಿಕ ಟಿವಿ ಚಾನಲ್ ಪ್ರಸಾರ ಬಂದ್ ಆಗಲ್ಲ, ಟ್ರಾಯ್ ಸ್ಪಷ್ಟನೆ
ಹೊಸ ಕೇಬಲ್ ನೀತಿಯ ಜಾರಿಯ ಕಾರಣ ಡಿಸೆಂಬರ್ 29ರ ಬಳಿಕ ಟಿವಿ ಚಾನಲ್ ಪ್ರಸಾರದಲ್ಲಿ ವ್ಯತ್ಯಯವಾಗಲಿದೆ ಎಂಬ ಊಹಾಪೋಹಗಳಿಗೆ ಭಾರತೀಯ ಟೆಲಿಕಾಂ ನಿಯಂತ್ರಣಾ....

Published On :
ನವದೆಹಲಿ: ಹೊಸ ಕೇಬಲ್ ನೀತಿಯ ಜಾರಿಯ ಕಾರಣ ಡಿಸೆಂಬರ್ 29ರ ಬಳಿಕ ಟಿವಿ ಚಾನಲ್ ಪ್ರಸಾರದಲ್ಲಿ ವ್ಯತ್ಯಯವಾಗಲಿದೆ ಎಂಬ ಊಹಾಪೋಹಗಳಿಗೆ ಭಾರತೀಯ ಟೆಲಿಕಾಂ ನಿಯಂತ್ರಣಾ ಸಂಸ್ಥೆ (ಟ್ರಾಯ್) ತೆರೆ ಎಳೆದಿದೆ.
ಡಿಸೆಂಬರ್ 29ರ ನಂತರವೂ ಕೇಬಲ್ ಟಿವಿ ಚಾನಲ್ ಗಳ ಪ್ರಸಾರದಲ್ಲಿ ಯಾವುದೇ ಬದಲಾವಣೆ ಆಗುವುದಿಲ್ಲ ಎಂದಿರುವ ಟ್ರಾಯ್ ಈ ಕುರಿತಂತೆ ಟ್ವೀಟ್ ಮಾಡಿ ಸ್ಪಷ್ಟನೆ ನೀಡಿದೆ. "ಈ ವರ್ಷಾಂತ್ಯದ ಬಳಿಕವೂ ಟಿವಿ ಪ್ರಸಾರದಲ್ಲಿ ಯಾವ ವ್ಯತ್ಯಯವಾಗುವುದಿಲ್ಲ, ಹೊಸ ವ್ಯವಸ್ಥೆಗೆ ಹೊಂದಿಕೊಳ್ಳಲು ಗ್ರಾಹಕರಿಗೆ ಸಮಯಾವಕಾಶ ಹಾಗೂ ಸೂಕ್ತ ಮಾಹಿತಿಯನ್ನು ನೀಡಲಾಗುತ್ತದೆ ಎಂದು ಟ್ರಾಯ್ ಹೇಳಿದೆ.
"ಡಿ.29ರ ಬಳಿಕ ಟಿವಿ ಚಾನಲ್ ಗಳು ಕಣ್ಮರೆಯಾಗಲಿದೆ ಎನ್ನುವುದಾಗಿ ಹಾವಾರು ಮಾದ್ಯಮಗಳಲ್ಲಿ ವರದಿ ಪ್ರಸಾರವಾಗುತ್ತಿದ್ದು ಇದು ಸುಳ್ಳು, ಹೊಸ ನೀತಿಯಿಂದಾಗಿ ಟಿವಿ ಸೇವೆಯಲ್ಲಿ ಯಾವ ಬದಲಾವಣೆ ಆಗುವುದಿಲ್ಲ.ಯಾವುದೇ ಚಾನಲ್ ಗಳು ರದ್ದಾಗುಉವುದಿಲ್ಲ ಎಂದು ನಾವು ಈ ಮೂಲಕ ಸ್ಪಷ್ಟಪಡಿಸುತ್ತೇವೆ" ಟ್ವೀಟ್ ನಲ್ಲಿ ಹೇಳಲಾಗಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


