ರಾಮ ರಾಮಾ....! ಹನುಮಂತ ಅಷ್ಟೇ ಅಲ್ಲ, ರಾಮನ ಇಡೀ ದರ್ಬಾರ್ ನ ಜಾತಿ ಪಟ್ಟಿ ಮಾಡಿದ ಭೂಪ!
ಸಂಸದ ಹರಿ ಓಂ ಸರದಿ. ಆದರೆ ಈ ಬಾರಿ ಹನುಮಂತನ ಜೊತೆಗೆ ರಾಮನ ಇಡೀ ದರ್ಬಾರ್ ನ ಜಾತಿಯನ್ನೇ ಪಟ್ಟಿ ಮಾಡಿದ್ದಾರೆ!

Published On :
ಲಖನೌ: ಹನುಮಂತನ ಜಾತಿಯ ಕುರಿತು ನಡೆಯುತ್ತಿರುವ ಚರ್ಚೆಗಳು ಸಧ್ಯಕ್ಕೆ ಕೊನೆಯಾಗುವ ಲಕ್ಷಣಗಳು ಕಾಣುತ್ತಿಲ್ಲ. ಉತ್ತರ ಪ್ರದೇಶದ ಸಿಎಂ ಯೋಗಿ ಆದಿತ್ಯನಾಥ್ ಅವರು ನೀಡಿದ್ದ ಹೇಳಿಕೆಗೆ ಪ್ರತಿಕ್ರಿಯೆಗಳು ಇನ್ನೂ ಬರುತ್ತಲೇ ಇದೆ. ಇದೀಗ ಅವರದ್ದೇ ಪಕ್ಷದ ಸಂಸದ ಹರಿ ಓಂ ಸರದಿ. ಆದರೆ ಈ ಬಾರಿ ಹನುಮಂತನ ಜೊತೆಗೆ ರಾಮನ ಇಡೀ ದರ್ಬಾರ್ ನ ಜಾತಿಯನ್ನೇ ಪಟ್ಟಿ ಮಾಡಿದ್ದಾರೆ!
ಉತ್ತರ ಪ್ರದೇಶದ ಅಂಬೇಡ್ಕರ್ ನಗರ ಕ್ಷೇತ್ರದ ಸಂಸದರಾಗಿರುವ ಬಿಜೆಪಿ ನಾಯಕ ಹರಿ ಓಂ ಪಾಂಡೇ, ತನಗೆ ರಾಮಾಯಣದಲ್ಲಿ ಬರುವ ಎಲ್ಲಾ ಪಾತ್ರಗಳ ಜಾತಿಯೂ ಗೊತ್ತು ಅಂತ ಹೇಳಿದ್ದಾರೆ. ಹರಿಓಂ ಪಾಂಡೇ ಹೇಳುವ ಪ್ರಕಾರ ಹನುಮಂತ ಬ್ರಾಹ್ಮಣನಂತೆ, ವಾನರ ರಾಜ ಸುಗ್ರೀವ ಕುರ್ಮಿ ಜಾತಿಯವನಾಗಿದ್ದರೆ ಆತನ ಸಹೋದರ ವಾಲಿ ಮಾತ್ರ ಯಾದವನಂತೆ.
ಇನ್ನು ಹರಿಓಂ ಹೇಳುವ ಜಟಾಯು ಕಥೆ ಕೇಳಿದರೆ ನಿಜಕ್ಕೂ ಅಚ್ಚರಿಯಾಗುತ್ತೆ. ನೀವೆಲ್ಲಾ ಜಟಾಯು ಎಂಬುದು ಒಂದು ಪಕ್ಷಿ ಅಂತ ಅಂದ್ಕೊಂಡ್ರೆ ಅದು ಶುದ್ಧ ತಪ್ಪು, ಹರಿ ಓಂ ಪಾಂಡೆ ಪ್ರಕಾರ ಜಟಾಯು ಪಕ್ಷಿ ಅಲ್ಲ. ಜಟಾಯು ಮುಸ್ಲಿಂ ಅಂತೆ. ಇನ್ನು ರಾಮ ಸೇತು ನಿರ್ಮಾಣ ಮಾಡುವುದಕ್ಕೆ ಸಹಾಯ ಮಾಡಿದ ವಾನರ ಸೇನೆಯಲ್ಲಿದ್ದ ನಳ-ನೀಲರು ವಿಶ್ವಕರ್ಮ ಸಮುದಾಯದವರು.
ಇಷ್ಟೆಲ್ಲಾ ಮಾಹಿತಿಯೂ ತನ್ನದೇ ಸಂಶೋಧನೆ ಎಂದು ಹೇಳಿಕೊಂಡಿರುವ ಹರಿ ಓಂ ಪಾಂಡೆ, ಇದನ್ನು ವಿಶ್ವದ ಮುಂದೆ ಸಾಬೀತುಪಾಡಿಸುವುದಕ್ಕೂ ಸಿದ್ಧರಿದ್ದಾರಂತೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


