ರಾಜಕಾರಣಿಯಾಗಿ ನನ್ನ ಪವರ್ ಏನೆಂಬುದು ನಿಮಗೆ ಗೊತ್ತಿಲ್ವಾ?: ಎಸ್ ಡಿಎಂಗೆ ಬಿಜೆಪಿ ಶಾಸಕನ ಆವಾಜ್!
ನಿಮಗೆ ನಾನು ಶಾಸಕ ಎಂದು ಗೊತ್ತಿಲ್ವಾ, ರಾಜಕಾರಣಿಯಾಗಿ ನನ್ನ ಪವರ್ ಏನು ಎಂಬುದು ಗೊತ್ತಿಲ್ವಾ? ನೀವು ಕೇವಲ ಓರ್ವ ಎಸ್‌ಡಿಎಂ.,..

Published On :
ಆಗ್ರಾ: ನಿಮಗೆ ನಾನು ಶಾಸಕ ಎಂದು ಗೊತ್ತಿಲ್ವಾ, ರಾಜಕಾರಣಿಯಾಗಿ ನನ್ನ ಪವರ್ ಏನು ಎಂಬುದು ಗೊತ್ತಿಲ್ವಾ? ನೀವು ಕೇವಲ ಓರ್ವ ಎಸ್‌ಡಿಎಂ (ಉಪ ವಿಭಾಗೀಯ ಮ್ಯಾಜಿಸ್ಟ್ರೇಟ್) ಎಂಬುದನ್ನು ನಾನು ನಿಮಗೆ ತೋರಿಸಿಕೊಡಬೇಕಾ ? ನೀವು ಒಬ್ಬ ಸರಕಾರಿ ಸೇವಕ ಎನ್ನುವುದು ಕೂಡ ನಿಮಗೆ ಗೊತ್ತಿಲ್ವಾ ಎಂದು ಬಿಜೆಪಿ ಶಾಸಕರೊಬ್ಬರು ಆವಾಜ್ ಹಾಕಿದ್ದಾರೆ.
ಫತೇಪುರ ಸಿಕ್ರಿಯ ಬಿಜೆಪಿ ಶಾಸಕ ಉದಯಭಾನ್ ಚೌಧರಿ ಉಪ ವಿಭಾಗೀಯ ಮ್ಯಾಜಿಸ್ಟ್ರೇಟ್ (ಎಸ್‌ಡಿಎಂ) ಗರೀಮಾ ಸಿಂಗ್ ಎಂಬ ಕರ್ತವ್ಯನಿಷ್ಠ ಮಹಿಳಾ ಅಧಿಕಾರಿಯ ವಿರುದ್ಧ ಗುಡುಗಿದ್ದು ರಾಜಕಾರಣಿಯ ದರ್ಪ ತೋರಿದ್ದಾರೆ.
ರೈತರ ಸಮಸ್ಯೆಯನ್ನು ಕೇಳಲು ಕ್ಷೇತ್ರಕ್ಕೆ ಹೋಗಿದ್ದ ಸಂದರ್ಭದಲ್ಲಿ ಬಿಜೆಪಿ ಶಾಸಕ ಉದಯಭಾನು ಚೌಧರಿ ಮಾತನಾಡಿರುವ ಈ ವಿಡಿಯೋ ವೈರಲ್ ಆಗಿದೆ,
ನೆರೆದಿದ್ದ ಜನರ ನಡುವಿನಿಂದ 'ಎಸ್‌ಡಿಎಂ ಜಿಂದಾಬಾದ್' ಎಂಬ ಘೋಷಣೆ ಕೇಳಿ ಬಂತು. ಇದರಿಂದ ಕೊಂಚ ವಿಚಲಿತರಾದವರಂತೆ ಕಂಡು ಬಂದ ಶಾಸಕ ಚೌಧರಿ ಅನಂತರ ಅಲ್ಲಿಂದ ಸದ್ದಿಲ್ಲದೆ ನಿರ್ಗಮಿಸಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


