ಸಂವಹನ ಉಪಗ್ರಹ ಜಿಸ್ಯಾಟ್ -7ಎ ಉಡಾವಣೆಗೆ ಕ್ಷಣಗಣನೆ ಆರಂಭ
ದೇಶದ 35ನೇ ಸಂವಹನ ಉಪಗ್ರಹ ಉಡಾವಣೆಗೆ ಕ್ಷಣಗಣನೆ ಆರಂಭವಾಗಿದ್ದು, ಬುಧವಾರ ಸಂಜೆ 4.10ಕ್ಕೆ ಶ್ರೀಹರಿಕೋಟದ ಸತೀಶ್...

Published On :
ನವದೆಹಲಿ: ದೇಶದ 35ನೇ ಸಂವಹನ ಉಪಗ್ರಹ ಉಡಾವಣೆಗೆ ಕ್ಷಣಗಣನೆ ಆರಂಭವಾಗಿದ್ದು, ಬುಧವಾರ ಸಂಜೆ 4.10ಕ್ಕೆ ಶ್ರೀಹರಿಕೋಟದ ಸತೀಶ್ ಧವನ್ ಬಾಹ್ಯಕಾಶ ಕೇಂದ್ರದಿಂದ ಜಿಸ್ಯಾಟ್ -7ಎ ಉಡಾವಣೆಯಾಗಲಿದೆ ಎಂದು ಮಂಗಳವಾರ ಭಾರತೀಯ ಬಾಹ್ಯಕಾಶ ಸಂಶೋಧನಾ ಸಂಸ್ಥೆ(ಇಸ್ರೋ) ತಿಳಿಸಿದೆ.
ಇಸ್ರೋ ಅಭಿವೃದ್ಧಿಪಡಿಸಿದ 2,250 ಕೆ.ಜಿ ತೂಕದ ಈ ಉಪಗ್ರಹವನ್ನು ಜಿಎಸ್ ಎಲ್ ವಿ-ಎಫ್ 11 ರಾಕೆಟ್ ಮೂಲಕ ಭೂಸ್ಥಿರ ಕಕ್ಷೆಗೆ ಸೇರಿಸಲಾಗುವುದು ಎಂದು ಇಸ್ರೋ ಹೇಳಿದೆ.
ಈ ಉಪಗ್ರಹ ೮ ವರ್ಷಗಳ ಕಾಲ ಕಾರ್ಯನಿರ್ವಹಿಸಲಿದೆ, ಭಾರತೀಯ ಭೂ ಪ್ರದೇಶದಲ್ಲಿ ಗ್ರಾಹಕರಿಗೆ ಕ್ಯು-ಬ್ಯಾಂಡ್ ಸೇವೆಯನ್ನು ಕಲ್ಪಿಸುವಲ್ಲಿ ನೆರವಾಗಲಿದೆ ಎಂದು ಇಸ್ರೋ ತಿಳಿಸಿದೆ.
ಜಿಸ್ಯಾಟ್ -7ಎ ಉಪಗ್ರಹ, ಕೆ-ಯು ಬ್ಯಾಂಡ್ ನಲ್ಲಿ ಸಂಪರ್ಕ ಒದಗಿಸಲಿದ್ದು, ಇದು ರೇಡಾರ್ ಸ್ಟೇಷನ್ಸ್ ಗಳ, ಏರ್ ಬೊರ್ನ್ ವಾರ್ನಿಂಗ್ ಅಂಡ್ ಕಂಟ್ರೋಲ್ ಏರ್ ಕ್ರಾಫ್ಟ್ ಮತ್ತು ವಾಯುನೆಲೆಗಳ ಮಧ್ಯೆ ಸುಧಾರಿತ ಸಂಪರ್ಕ ಜಾಲ ಒದಗಿಸಲು ಸೇನೆಗೆ ನೆರವಾಗಲಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


