ಬೀದಿ ನಾಯಿಯನ್ನೂ ಬಿಡದ ಕಾಮಾಂಧರು, ಸಾಮೂಹಿಕ ಅತ್ಯಾಚಾರ, ಬೈಕ್ ಗೆ ಕಟ್ಟಿ ಎಳೆದು ಹತ್ಯೆ!
ಕಾಮಾಂಧರ ಕ್ರೌರ್ಯಕ್ಕೆ ಹೆಣ್ಣು ಮಕ್ಕಳಷ್ಟೇ ಅಲ್ಲ ಅಮಾಯಕ ಮೂಕ ಪ್ರಾಣಿಗಳೂ ಕೂಡ ಬಲಿಯಾಗುತ್ತಿದ್ದು, ಉತ್ತರ ಪ್ರದೇಶದಲ್ಲಿ ಇಬ್ಬರು ಕಾಮಾಂಧರ ಕ್ರೌರ್ಯಕ್ಕೆ ಹೆಣ್ಣು ನಾಯಿಯೊಂದು ಬಲಿಯಾಗಿದೆ.

Published On :
ಘಾಜಿಯಾಬಾದ್: ಕಾಮಾಂಧರ ಕ್ರೌರ್ಯಕ್ಕೆ ಹೆಣ್ಣು ಮಕ್ಕಳಷ್ಟೇ ಅಲ್ಲ ಅಮಾಯಕ ಮೂಕ ಪ್ರಾಣಿಗಳೂ ಕೂಡ ಬಲಿಯಾಗುತ್ತಿದ್ದು, ಉತ್ತರ ಪ್ರದೇಶದಲ್ಲಿ ಇಬ್ಬರು ಕಾಮಾಂಧರ ಕ್ರೌರ್ಯಕ್ಕೆ ಹೆಣ್ಣು ನಾಯಿಯೊಂದು ಬಲಿಯಾಗಿದೆ.
ಉತ್ತರ ಪ್ರದೇಶದ ಘಾಜಿಯಾಬಾದ್ ನಲ್ಲಿ ಇಬ್ಬರು ಕಾಮುಕರು ಬೀದಿ ನಾಯಿ ಮೇಲೆ ಸಾಮೂಹಿಕ ಅತ್ಯಾಚಾರ ಮಾಡಿದ್ದಷ್ಟೇ ಅಲ್ಲದೆ ನಾಯಿಯನ್ನು ತಮ್ಮ ಸ್ಕೂಟರಿಗೆ ಕಟ್ಟಿ ಎಳೆದು ತಂದಿದ್ದರಿಂದ ನಾಯಿ ಸಾವನ್ನಪ್ಪಿದೆ. ನಾಯಿ ಹತ್ಯೆ ಸಂಬಂಧ ಘಾಜಿಯಾಬಾದ್ ಪೊಲೀಸರು ಈಗಾಗಲೇ ಓರ್ವ ಆರೋಪಿಯನ್ನು ಬಂಧಿಸಿದ್ದು, ಬಂಧಿತನನ್ನು ಮಹಮದ್ ನಫೀಸ್ ಎಂದು ಗುರಿತಿಸಲಾಗಿದೆ.
ಈತ ಘಾಜಿಯಾಬಾದ್ ನ ಶಾಹೀದ್ ನಗರದ ಸ್ಟ್ರೀಟ್ ನಂಬರ್ 6ರ ನಿವಾಸಿಯಾಗಿದ್ದು, ಈತನ ಸ್ನೇಹಿತ ಮತ್ತು ಮತ್ತೋರ್ವ ಆರೋಪಿ ಮುಹಮದ್ ತಾಸಿಮ್ ಎಂಬಾತನೊಂದಿಗೆ ಸೇರಿ ಹೆಣ್ಣು ನಾಯಿ ಮೇಲೆ ಸಾಮೂಹಿಕ ಅತ್ಯಾಚಾರ ಮಾಡಿದ್ದಾನೆ. ಈ ಬಗ್ಗೆ ಈತನೇ ಪೊಲೀಸರೊಂದಿಗೆ ತಪ್ಪೊಪ್ಪಿಗೆ ಹೇಳಿಕೆ ನೀಡಿದ್ದು, ತನ್ನ ಸ್ನೇಹಿತನೊಂದಿಗೆ ಸೇರಿ ಈ ನಾಯಿ ಮೇಲೆ ಹಲವು ಬಾರಿ ಅತ್ಯಾಚಾರ ಮಾಡಿದ್ದೇನೆ. ಬಳಿಕ ನಾಯಿಯನ್ನು ಸ್ಕೂಟರಿಗೆ ಕಟ್ಟಿ ಕರೆತರುವಾಗ ಅದು ಸಾವನ್ನಪ್ಪಿದೆ ಎಂದು ಹೇಳಿಕೊಂಡಿದ್ದಾನೆ.

'ಮನೆಯ ಬಳಿ ಈ ನಾಯಿ ಹಲವರನ್ನು ಕಚ್ಚಿ ಗಾಯಗೊಳಿಸಿತ್ತು. ಹೀಗಾಗಿ ಅದನ್ನು ದೂರ ಕೊಂಡೊಯ್ಜು ಬಿಡಬೇಕು ಎಂದು ಕೊಂಡಿದ್ದೆವು. ಆದರೆ ಅದಕ್ಕೆ ತಕ್ಕ ಪಾಠ ಕಲಿಸಬೇಕು ಎಂದು ಹೇಳಿ ಈ ಕೃತ್ಯ ಮಾಡಿದೆವು ಎಂದು ಹೇಳಿದ್ದಾನೆ. ಇನ್ನು ಮಹಮದ್ ನಫೀಸ್ ನಾಯಿಯನ್ನು ಸ್ಕೂಟರಿಗೆ ಕಟ್ಟೆ ಎಳೆದುತರುತ್ತಿದ್ದಾಗ ನಾಯಿ ಬೊಗಳಿ ಬೊಗಳಿ ಸುಸ್ತಾಗಿ ನೆಲಕ್ಕೊರಗಿದೆ. ಇದನ್ನು ಕಂಡ ಸ್ಥಳೀಯರು ಬೈಕ್ ನಿಲ್ಲಿಸಿದ್ದಾರೆ. ಕೂಡಲೇ ನಾಯಿಯನ್ನು ಸಮೀಪದ ಪಶು ವೈದ್ಯಕೀಯ ಆಸ್ಪತ್ರೆಗೆ ತೆಗೆದುಕೊಂಡು ಹೋದಾಗ ವೈದ್ಯರು ನಾಯಿಗೆ ಪ್ರಥಮ ಚಿಕಿತ್ಸೆ ನೀಡಿದ್ದಾರೆಯಾದರೂ ನಾಯಿ ಬದುಕುಳಿದಿಲ್ಲ. ಅಂತೆಯೇ ವೈದ್ಯರು ನಾಯಿಯನ್ನು ಹಲವು ಕಿಲೋ ಮೀಟರ್ ದೂರದಿಂದ ಎಳೆದು ತಂದಿದ್ದು, ನಾಯಿ 20 ದಿನಗಳ ಹಿಂದಷ್ಟೇ ಐದಾರು ಮರಿಗಳಿಗೆ ಜನ್ಮ ನೀಡಿದೆ ಎಂದು ಮಾಹಿತಿ ನೀಡಿದ್ದಾರೆ.
ಪ್ರಸ್ತುತ ಪ್ರಕರಣಕ್ಕೆ ಸಂಬಂಧಿಸಿದಂತೆ ಮಹಮದ್ ನಫೀಸ್ ನನ್ನು ಬಂಧಿಸಲಾಗಿದ್ದು, ಮತ್ತೋರ್ವ ಆರೋಪಿ ಮುಹಮದ್ ತಾಸಿಮ್ ಬಂಧನಕ್ಕೆ ಪೊಲೀಸರು ಬಲೆ ಬೀಸಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


