ದೇಶ

ಮಧ್ಯಪ್ರದೇಶ: ನೂತನ ಅಸೆಂಬ್ಲಿಯಲ್ಲಿ 187 ಶಾಸಕರು ಕೋಟ್ಯಾಧೀಶರು, 94 ಮಂದಿ ಕ್ರಿಮಿನಲ್ ಹಿನ್ನೆಲೆಯವರು

ಮಧ್ಯಪ್ರದೇಶದ ನೂತನ ಅಸೆಂಬ್ಲಿಯಲ್ಲಿ 187 ಮಂದಿ ಕೋಟ್ಯಾಧೀಶರಿದ್ದು, 94 ಮಂದಿ ಕ್ರಿಮಿನಲ್ ಹಿನ್ನೆಲೆವುಳ್ಳವರಾಗಿದ್ದಾರೆ ಎಂದು ಎಡಿಆರ್ - ಅಸೋಸಿಯೇಷನ್ ಪಾರ್ ಡೆಮಾಕ್ರಟಿಕ್ ರಿಪಾರ್ಮ್ಸ್ ಸಂಸ್ಥೆ ಬಹಿರಂಗಪಡಿಸಿದೆ.

ಮಧ್ಯಪ್ರದೇಶ: ನೂತನ ಅಸೆಂಬ್ಲಿಯಲ್ಲಿ 187 ಶಾಸಕರು ಕೋಟ್ಯಾಧೀಶರು, 94 ಮಂದಿ ಕ್ರಿಮಿನಲ್ ಹಿನ್ನೆಲೆಯವರು
ಮಧ್ಯಪ್ರದೇಶ ಅಸೆಂಬ್ಲಿ
Published On :

ನವದೆಹಲಿ: ಮಧ್ಯಪ್ರದೇಶದ ನೂತನ ಅಸೆಂಬ್ಲಿಯಲ್ಲಿ 187 ಮಂದಿ ಕೋಟ್ಯಾಧೀಶರಿದ್ದು,  94 ಮಂದಿ ಕ್ರಿಮಿನಲ್  ಹಿನ್ನೆಲೆವುಳ್ಳವರಾಗಿದ್ದಾರೆ ಎಂದು ಎಡಿಆರ್ - ಅಸೋಸಿಯೇಷನ್ ಪಾರ್ ಡೆಮಾಕ್ರಟಿಕ್ ರಿಪಾರ್ಮ್ಸ್ ಸಂಸ್ಥೆ ಬಹಿರಂಗಪಡಿಸಿದೆ.

 ಬಿಜೆಪಿಯ 109 ಶಾಸಕರ ಪೈಕಿ 91 ಹಾಗೂ  ಕಾಂಗ್ರೆಸ್ ಪಕ್ಷದ 114 ಶಾಸಕರ ಪೈಕಿ 90 , ಹಾಗೂ ಬಿಎಸ್ಪಿ ಹಾಗೂ ಎಸ್ಪಿಯಿಂದ ತಲಾ 1 ಹಾಗೂ ನಾಲ್ಕು ಪಕ್ಷೇತರ ಅಭ್ಯರ್ಥಿಗಳು 1 ಕೋಟಿಗೂ ಹೆಚ್ಚಿನ ಮೊತ್ತದ ಆಸ್ತಿಯನ್ನು ಘೋಷಿಸಿಕೊಂಡಿದ್ದಾರೆ.

ಮತ್ತೊಂದೆಡೆ ವಿಜಯ್ ರಾಘವ್ ಗಡ ಕ್ಷೇತ್ರದ  ಬಿಜೆಪಿ ಶಾಸಕ ಸಂಜಯ್ ಸತ್ಯೇಂದ್ರ ಪಠಕ್  ಆಸ್ತಿ   ಮೊತ್ತ 226 ಕೋಟಿ ಎಂದು ಘೋಷಿಸಿಕೊಂಡಿದ್ದಾರೆ.  ಪಂದಾನಾ ಕ್ಷೇತ್ರದ ಮತ್ತೊಬ್ಬ ಶಾಸಕ ರಾಮ್ ದಾಂಗೊರ್  ಆಸ್ತಿಯ ಒಟ್ಟಾರೇ ಮೊತ್ತ 50. 749 ರೂ ಆಗಿದ್ದು, ಅತ್ಯಂತ ಕಡಿಮೆ ಆಸ್ತಿ ಹೊಂದಿದವರಾಗಿದ್ದಾರೆ.

230 ಸದಸ್ಯ ಬಲದ ಅಸೆಂಬ್ಲಿಯಲ್ಲಿ 94 ಶಾಸಕರ ಮೇಲೆ ಕ್ರಿಮಿನಲ್ ಕೇಸ್ ಗಳಿವೆ. 47 ಶಾಸಕರ ಮೇಲೆ ಕೊಲೆಯತ್ನ,  ಮಹಿಳೆಯರ ಮೇಲೆ ದೌರ್ಜನ್ಯದಂತಹ ಕ್ರಿಮಿನಲ್ ಕೇಸ್ ಗಳು ದಾಖಲಾಗಿವೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.