ದೇಶ

ರಫೇಲ್ ಆರೋಪಗಳು ಕಾಲ್ಪನಿಕ ಬರವಣಿಗೆ: ಅರುಣ್ ಜೇಟ್ಲಿ

ರಾಫೇಲ್ ಯುದ್ಧ ವಿಮಾನ ಖರೀದಿಗೆ ಸಂಬಂಧಿಸಿದಂತೆ ಪ್ರತಿಪಕ್ಷಗಳು ಮಾಡಿದ್ದ ಆರೋಪಗಳೆಲ್ಲ ಕಾಲ್ಪನಿಕ ಬರವಣಿಗೆ ಎಂದು

ರಫೇಲ್ ಆರೋಪಗಳು ಕಾಲ್ಪನಿಕ ಬರವಣಿಗೆ: ಅರುಣ್ ಜೇಟ್ಲಿ
ಅರುಣ್ ಜೇಟ್ಲಿ
Published On :
ನವದೆಹಲಿ: ರಾಫೇಲ್ ಯುದ್ಧ ವಿಮಾನ ಖರೀದಿಗೆ ಸಂಬಂಧಿಸಿದಂತೆ ಪ್ರತಿಪಕ್ಷಗಳು ಮಾಡಿದ್ದ ಆರೋಪಗಳೆಲ್ಲ ಕಾಲ್ಪನಿಕ ಬರವಣಿಗೆ ಎಂದು ಕೇಂದ್ರ ಹಣಕಾಸು ಸಚಿವ ಅರುಣ್ ಜೇಟ್ಲಿ ಅವರು ಶುಕ್ರವಾರ ಹೇಳಿದ್ದಾರೆ.
ರಾಫೇಲ್ ಹಗರಣವನ್ನು ಸಿಬಿಐ ತನಿಖೆಗೆ ವಹಿಸಬೇಕು ಎಂದು ಕೋರಿ ಸಲ್ಲಿಸಿದ್ದ ಎಲ್ಲಾ ಅರ್ಜಿಗಳನ್ನು ಸುಪ್ರೀಂ ಕೋರ್ಟ್ ವಜಾಗೊಳಿಸಿದ ನಂತರ ಸುದ್ದಿಗೋಷ್ಠಿ ಉದ್ದೇಶಿಸಿ  ಮಾತನಾಡಿದ ಜೇಟ್ಲಿ, ರಾಫೇಲ್​ ಯುದ್ಧ ವಿಮಾನ ಖರೀದಿಗೆ ಅಡ್ಡಿಪಡಿಸುತ್ತಿದ್ದವರು ಈಗ ಎಲ್ಲವನ್ನೂ ಕಳೆದುಕೊಂಡಂತಾಗಿದೆ. ಕೇಂದ್ರ ಸರ್ಕಾರ ನೀಡಿದ್ದ ಅಂಕಿ ಅಂಶ ಸತ್ಯವಾಗಿದ್ದು, ರಾಹುಲ್​ ಗಾಂಧಿ ಒದಗಿಸಿದ್ದ ಅಂಕಿ ಅಂಶ ಸುಳ್ಳು ಎಂದು ಸಾಬೀತಾಗಿದೆ ಎಂದರು.
ಸತ್ಯಕ್ಕೆ ಕೇವಲ ಒಂದೇ ರೂಪವಿರುತ್ತದೆ. ಆದರೆ, ಸುಳ್ಳಿಗೆ ಹಲವು ಮುಖಗಳಿರುತ್ತವೆ. ಅದಕ್ಕಾಗಿಯೇ ರಾಹುಲ್ ಗಾಂಧಿ​ ವಿಭಿನ್ನ ಅಂಕಿ ಅಂಶಗಳನ್ನು ನೀಡಿದ್ದರು ಎಂದು ವಾಗ್ದಾಳಿ ನಡೆಸಿದರು.
ಸುಪ್ರೀಂ ಕೋರ್ಟ್​ ತೀರ್ಪು ನೀಡಿದ ನಂತರವೂ ಕಾಂಗ್ರೆಸ್​ ಪಕ್ಷ ರಫೇಲ್​ ಹಗರಣಕ್ಕೆ ಜಂಟಿ ಸಂಸದೀಯ ಸಮಿತಿ ರಚಿಸಿ ತನಿಖೆ ಮಾಡಬೇಕು ಎಂದು ಹೇಳಿದ್ದು, ಇದಕ್ಕೆ ಪ್ರತಿಕ್ರಿಯಿಸಿದ ಜೇಟ್ಲಿ, ಕಿವುಡರಿಗೆ ಎಂದಿಗೂ ಉತ್ತರ ಕೇಳಿಸುವುದಿಲ್ಲ ಎಂದರು. 
ರಫೇಲ್‌ ಡೀಲ್‌ನಲ್ಲಿ ದೇಶದ ಭದ್ರತೆ ಹಾಗೂ ಆರ್ಥಿಕ ಹಿತ ಎರಡನ್ನೂ ಕಾಪಾಡಲಾಗಿದೆ. ಸತ್ಯ ಹಾಗೂ ಅಸತ್ಯದ ವಿರುದ್ಧ ನಡೆದ ಕಾದಾಟದಲ್ಲಿ ಎಂದಿನಂತೆಯೇ ಸತ್ಯಕ್ಕೇ ಜಯವಾಗಿದೆ ಎಂದರು.
ದೇಶದ ರಕ್ಷಣೆಯ ವಿಚಾರದಲ್ಲಿ ಎಂದಿಗೂ ರಾಜಿ ಮಾಡಿಕೊಳ್ಳುವ ಪ್ರಶ್ನೆಯೇ ಇಲ್ಲ. 2012ರಲ್ಲಿ ಯುಪಿಎ ಅವಧಿಯಲ್ಲಿ ನಡೆದಿದ್ದ ಯುದ್ಧ ವಿಮಾನಕ್ಕಿಂತ ಸಾಕಷ್ಟು ಪಟ್ಟು ಉತ್ತಮ ಗುಣಮಟ್ಟದ ಏರ್‌ಕ್ರಾಫ್ಟ್‌ ಖರೀದಿಗೆ ಒಪ್ಪಂದ ಮಾಡಿಕೊಳ್ಳಲಾಗಿದೆ ಎಂದು ಜೇಟ್ಲಿ ತಿಳಿಸಿದರು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.