ಅನ್ಯಾಯ, ಸುಳ್ಳಿಗೆ ಸಿಕ್ಕ ಪ್ರತಿಫಲ: ಪಂಚರಾಜ್ಯ ಚುನಾವಣೆಯಲ್ಲಿ ಬಿಜೆಪಿ ಸೋಲಿನ ಬಗ್ಗೆ ಶಿವಸೇನೆ ವ್ಯಂಗ್ಯ
ಇತ್ತೀಚೆಗೆ ನಡೆದ ಪಂಚ ರಾಜ್ಯಗಳ ಚುನಾವಣಾ ಫಲಿತಾಂಶ ಹೊರಬಿದ್ದಿದ್ದು, ಬಿಜೆಪಿ ಸೋಲಿನ ಬಗ್ಗೆ ಶಿವಸೇನೆ ವ್ಯಂಗ್ಯವಾಡಿದೆ. ಅನ್ಯಾಯ ಮತ್ತು ಸುಳ್ಳಿನ ಸೋಲು ಇದು ...

Published On :
ಮುಂಬಯಿ: ಇತ್ತೀಚೆಗೆ ನಡೆದ ಪಂಚ ರಾಜ್ಯಗಳ ಚುನಾವಣಾ ಫಲಿತಾಂಶ ಹೊರಬಿದ್ದಿದ್ದು, ಬಿಜೆಪಿ ಸೋಲಿನ ಬಗ್ಗೆ ಶಿವಸೇನೆ ವ್ಯಂಗ್ಯವಾಡಿದೆ. ಅನ್ಯಾಯ ಮತ್ತು ಸುಳ್ಳಿನ ಸೋಲು ಇದು ಎಂದು ಬಣ್ಣಿಸಿದೆ,
ಕಾಂಗ್ರೆಸ್ ಮುಕ್ತ ಭಾರತ ನಿರ್ಮಾಣ ಮಾಡುವುದಾಗಿ ಪ್ರಧಾನಿ ನರೇಂದ್ರ ಮೋದಿ, ಬಿಜೆಪಿ ಅಧ್ಯಕ್ಷ ಅಮಿತ್ ಶಾ ಹಾಗೂ ಬಿಜೆಪಿ ಕಾರ್ಯಕರ್ತರು ಗಂಟಲು ಹರಿದು ಕೂಗಿಕೊಂಡರು. ಪ್ರತಿದಿನ ದೇಶದ ಅತ್ಯಂತ ಹಳೇಯ ಪಕ್ಷಕ್ಕೆ ಸಂತಾಪ ಸೂಚಿಸಿದ್ದರು.
ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಬಿಜೆಪಿಯನ್ನು ಬಗ್ಗು ಬಡಿದಿದ್ದಾರೆ. ಬಿಜೆಪಿಯ ಈ ಸೋಲು ಅನ್ಯಾಯ ಮತ್ತು ಸುಳ್ಳಿಗೆ ಸಿಕ್ಕ ಪ್ರತಿಫಲ, ಗರ್ವ ಹಾಗೂ ಅಹಂಕಾರ ನುಚ್ಚುನೂರಾಗಿದೆ ಎಂದು ಪಕ್ಷದ ಮುಖವಾಣಿ ಸಾಮ್ನಾದಲ್ಲಿ ಬರೆದಿದೆ.
ಸೋಲನ್ನು ವಿಧೇಯವಾಗಿ ನಾವು ಒಪ್ಪಿಕೊಳ್ಳುವುದು ನಮ್ಮ ಸಂಸ್ಕೃತಿ, ಆದರೆ 2014 ರ ಲೋಕಸಭೆ ಚುನಾವಣೆ ನಂತರ ಈ ಸಂಸ್ಕೃತಿ ಬದಲಾಯಿತು, ರಾಜಸ್ತಾನ. ಮಧ್ಯಪ್ರದೇಶ ಮತ್ತು ಚತ್ತೀಸಗಡದಲ್ಲಿ ಸ್ಥಾನ ಕಳೆದುಕೊಂಡಿದೆ ಎಂದು ತಿಳಿಸಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
ಶಿವಸೇನೆbjpಬಿಜೆಪಿShiv SenaAmit Shahಅಮಿತ್ ಶಾdefeatಸೋಲುಫಲಿತಾಂಶವಿಧಾನ ಸಭೆ ಚುನಾವಣೆAssembly election results
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


