ದೇಶ

ಪೆಟ್ರೋಲ್ ದರ ಕೋಲ್ಕತಾದಲ್ಲಿ 1ರೂ., ನೊಯ್ಡಾದಲ್ಲಿ 17 ಪೈಸೆ ಏರಿಕೆ, ಬೆಂಗಳೂರಿನಲ್ಲಿ ದರ ಇಳಿಕೆ!

ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಚಾತೈಲ ಬೆಲೆ ಏರಿಳಿತದಿಂದಾಗಿ ದೇಶಾದ್ಯಂತ ಇಂಧನ ಬೆಲೆಯಲ್ಲಿ ಏರಿಳಿತ ಕಂಡುಬಂದಿದೆ.

ಪೆಟ್ರೋಲ್ ದರ ಕೋಲ್ಕತಾದಲ್ಲಿ 1ರೂ., ನೊಯ್ಡಾದಲ್ಲಿ 17 ಪೈಸೆ ಏರಿಕೆ, ಬೆಂಗಳೂರಿನಲ್ಲಿ ದರ ಇಳಿಕೆ!
ಸಂಗ್ರಹ ಚಿತ್ರ
Published On :
ನವದೆಹಲಿ: ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಚಾತೈಲ ಬೆಲೆ ಏರಿಳಿತದಿಂದಾಗಿ ದೇಶಾದ್ಯಂತ ಇಂಧನ ಬೆಲೆಯಲ್ಲಿ ಏರಿಳಿತ ಕಂಡುಬಂದಿದೆ.
ಹೌದು.. ಕಳೆದ 20 ದಿನಗಳಿಂದ ಸತತವಾಗಿ ಇಳಿಕೆಯತ್ತ ಮುಖ ಮಾಡಿದ್ದ ತೈಲೋತ್ಪನ್ನಗಳ ದರ ಇದೀಗ  ಒಂದೇ ದಿನದಲ್ಲಿ ಏರಿಳಿತ ಕಂಡುಬಂದಿದೆ. ಪೆಟ್ರೋಲ್ ಮತ್ತು ಡೀಸೆಲ್ ದರ ಇಂದು ಕೆಲವೆಡೆ ಇಳಿಕೆಯಾಗಿದ್ದರೆ, ಮತ್ತೆ ಕೆಲವೆಡೆ ಏರಿಕೆಯಾಗಿದೆ.
ಬುಧವಾರ ಬೆಂಗಳೂರಿನಲ್ಲಿ ತೈಲೋತ್ಪನ್ನಗಳ ಬೆಲೆ ಇಳಿಕೆಯಾಗಿದ್ದು, ಲೀಟರ್‌ ಪೆಟ್ರೋಲ್‌ ಗೆ 10 ಪೈಸೆ ಇಳಿಕೆಯಾಗುವ ಮೂಲಕ 70.75 ರೂ.ಗಳಿಗೆ ಇಳಿಕೆಯಾಗಿದೆ.  ಇನ್ನು ಡೀಸೆಲ್‌ ಬೆಲೆಯಲ್ಲೂ 15 ಪೈಸೆ ಇಳಿಕೆಯಾಗಿ 65 ರೂ.ಗೆ ಮಾರಾಟವಾಗುತ್ತಿದೆ.
ರಾಷ್ಟ್ರ ರಾಜಧಾನಿ ನವದೆಹಲಿಯಲ್ಲಿ ಲೀಟರ್‌ ಪೆಟ್ರೋಲ್‌ಗೆ 70.20 ರೂ.ಗಳಷ್ಟಿದ್ದರೆ, ಡೀಸೆಲ್‌ಗೆ 21 ಪೈಸೆ ಕಡಿಮೆಯಾಗಿ 64.66 ರೂ.ಗಳಿಗೆ ಮಾರಾಟವಾಗುತ್ತಿದೆ. ವಾಣಿಜ್ಯ ರಾಜಧಾನಿ ಮುಂಬೈನಲ್ಲಿ ಲೀ. ಪೆಟ್ರೋಲ್‌ 75.80 ರೂ.ಗೆ ಮಾರಾಟವಾಗುತ್ತಿದ್ದು, ಡೀಸೆಲ್‌ ಲೀ.ಗೆ 67.66 ರೂ.ಗಳಷ್ಟಿದೆ. ಚೆನ್ನೈನಲ್ಲಿ ಪೆಟ್ರೋಲ್‌ ಲೀ.ಗೆ 72.82 ರೂ.ಗಳಿದ್ದರೆ, ಲೀಟರ್‌ ಡೀಸೆಲ್‌ 68.26 ರೂ.ಗಳಿಗೆ ಮಾರಾಟವಾಗುತ್ತಿದೆ. ನಿನ್ನೆಗೆ ಹೋಲಿಸಿದರೆ ಮೂರು ನಗರಗಳಲ್ಲಿ ಇಂದು ಇಂಧನ ಬೆಲೆಯಲ್ಲಿ ಯಾವುದೇ ಬದಲಾವಣೆಯಾಗಿಲ್ಲ.
ಕೋಲ್ಕತಾ, ನೊಯ್ಡಾದಲ್ಲಿ  ಒಂದು ರೂ. ಬೆಲೆ ಏರಿಕೆ
ಇನ್ನೋ ಕೋಲ್ಕತಾ ದಲ್ಲಿ ಮಾತ್ರ ಬೆಲೆ ಏರಿಕೆಯಾಗಿದ್ದು, ಲೀ. ಪೆಟ್ರೋಲ್‌ಗೆ 1 ರೂಪಾಯಿ ಏರಿಕೆಯಾಗಿ 73.28 ರೂ.ಗೆ ಗಳಷ್ಟಿದ್ದರೆ, ಡೀಸೆಲ್‌ ಕೂಡ ಏರಿಕೆ ಕಂಡು 67.40 ರೂ.ಗಳಿಗೆ ಮಾರಾಟವಾಗುತ್ತಿದೆ. ನೋಯಿಡಾದಲ್ಲಿ ಲೀ. ಪೆಟ್ರೋಲ್‌ಗೆ 17 ಪೈಸೆ ಏರಿಕೆಯಾಗಿ 70.36 ರೂ.ಗಳಷ್ಟಿದ್ದರೆ, ಡೀಸೆಲ್‌ 15 ಪೈಸೆ ಏರಿಕೆಯಾಗಿ 64.21 ರೂ.ಗಳಷ್ಟಿದೆ.
ಷೇರುಮಾರುಕಟ್ಟೆ ತಲ್ಲಣ ಮತ್ತು ಡಾಲರ್ ಎದುರು ರೂಪಾಯಿ ಮೌಲ್ಯ ಕುಸಿತ ಪೆಟ್ರೋಲ್ ದರ ಏರಿಕೆಗೆ ಕಾರಣ ಎನ್ನಲಾಗುತ್ತಿದ್ದು, ಡಾಲರ್ ಎದುರು ರೂಪಾಯಿ ಮೌಲ್ಯ ಕುಸಿದ ಹಿನ್ನೆಲೆಯಲ್ಲಿ ಕಚ್ಚಾ ತೈಲದ ಬೆಲೆಯಲ್ಲಿ ವ್ಯತ್ಯಾಸ ಉಂಟಾಗಿದೆ ಎಂದು ಆರ್ಥಿಕ ತಜ್ಞರು ಅಭಿಪ್ರಾಯ ಪಟ್ಟಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.