ಆರ್ ಬಿಐ ನೂತನ ಗವರ್ನರ್ ಸಾಮರ್ಥ್ಯ ಪ್ರಶ್ನಿಸಿದ ಬಿಜೆಪಿ ನಾಯಕ!
ಭಾರತೀಯ ರಿಸರ್ವ್ ಬ್ಯಾಂಕಿನ ನೂತನ ಗವರ್ನರ್ ಆಗಿರುವ ಶಶಿಕಾಂತ್ ದಾಸ್ ಅವರ ಸಾಮರ್ಥ್ಯವನ್ನು ಬಿಜೆಪಿ ನಾಯಕ ಜಯ್ ನಾರಾಯಣ್ ವ್ಯಾಸ ಪ್ರಶ್ನಿಸಿದ್ದಾರೆ.

ಅಹ್ಮದಾಬಾದ್ : ಭಾರತೀಯ ರಿಸರ್ವ್ ಬ್ಯಾಂಕಿನ ನೂತನ ಗವರ್ನರ್ ಆಗಿ ನೇಮಕವಾಗಿರುವ ಶಶಿಕಾಂತ್ ದಾಸ್ ಅವರ ಸಾಮರ್ಥ್ಯವನ್ನು ಬಿಜೆಪಿ ನಾಯಕ ಜಯ್ ನಾರಾಯಣ್ ವ್ಯಾಸ ಪ್ರಶ್ನಿಸಿದ್ದಾರೆ.
ಐಎಎಸ್ ಅಧಿಕಾರಿ ಬಗ್ಗೆಗೌರವವಿದೆ. ಆದರೆ , ಅವರು ಕೆಲವೊಂದು ಸಂಗತಿಗಳ ಬಗ್ಗೆ ಬೆಳಕು ಚೆಲ್ಲಿರಬಹುದು ಆದರೆ, ಈ ಹಿಂದೆ ಇದ್ದ ಗವರ್ನರ್ ನಂತೆ ಶಕ್ತಿಕಾಂತ್ ದಾಸ್ ಅವರನ್ನು ಅಂತಾರಾಷ್ಟ್ರೀಯ ಸಮುದಾಯ ಒಪ್ಪಿಕೊಳ್ಳಲಿದೆಯೇ , ಇಲ್ಲ ಎಂದು ಅವರು ಹೇಳಿದ್ದಾರೆ.
ಆರ್ ಬಿಐ ನಿರ್ವಹಣೆ ಮಾಡಬೇಕಾದರೆ ದೇಶಿಯ ಹಾಗೂ ಅಂತಾರಾಷ್ಟ್ರೀಯ ಆರ್ಥಿಕತೆ ಬಗ್ಗೆ ಮುಕ್ತ ಜ್ಞಾನವಿರಬೇಕಾಗುತ್ತದೆ ಎಂದು ಜಯ್ ನಾರಾಯಣ್ ಹೇಳಿದ್ದಾರೆ.
ಉರ್ಜಿತ್ ಪಟೇಲ್ ಆರ್ ಬಿಐ ಗವರ್ನರ್ ಹುದ್ದೆಗೆ ರಾಜೀನಾಮೆ ನೀಡದ ಬಳಿಕ ಮಾಜಿ ಆರ್ಥಿಕ ವ್ಯವಹಾರ ಕಾರ್ಯದರ್ಶಿ ಹಾಗೂ 15 ನೇ ಹಣಕಾಸು ಆಯೋಗದ ಸದಸ್ಯ ಶಕ್ತಿಕಾಂತ್ ದಾಸ್ ಅವರನ್ನು ಕೇಂದ್ರಬ್ಯಾಂಕಿನ ಗವರ್ನರ್ ಆಗಿ ಸರ್ಕಾರ ನಿಯೋಜಿಸಿದೆ.
ಇತಿಹಾಸದಲ್ಲಿ ಮಾಸ್ಟರ್ ಡಿಗ್ರಿ ಹೊಂದಿರುವ ಶಕ್ತಿಕಾಂತ್ ದಾಸ್ ನಿವೃತ್ತಿ ಸಂದರ್ಭದಲ್ಲಿ ದೊಡ್ಡ ಹುದ್ದೆ ದೊರಕಿದೆ. ಅಂತಹವರು ಆರ್ ಬಿಐಗೆ ಮಾರ್ಗದರ್ಶಕರಾಗಿ ಮೀಸಲು ಅಂತಹ ವಿವಾದಗಳಿಗೆ ಉತ್ತರಿಸಬಲ್ಲರೇ ಎಂದು ಜಯ್ ನಾರಾಯಣ್ ವ್ಯಾಸ ಪ್ರಶ್ನಿಸಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


