ಮುಖ್ಯಮಂತ್ರಿಯನ್ನೇ ಸೋಲಿಸಿದ ಮಿಜೋರಾಂ ಮತದಾರರು!
ತೀವ್ರ ಕುತೂಹಲ ಕೆರಳಿಸಿದ್ದ ಪಂಚ ರಾಜ್ಯ ಚುನಾವಣಾ ಫಲಿತಾಂಶ ಪ್ರಕಟವಾಗುತ್ತಿದ್ದು, ಅತ್ತ ಮಿಜೋರಾಂ ನಲ್ಲಿ ಹಾಲಿ ಸಿಎಂ ಹಾಗೂ ಕಾಂಗ್ರೆಸ್ ಅಭ್ಯರ್ಥಿ ಲಾಲ್ ಥನ್ವಾಲಾ ಅವರು ಸೋಲು ಕಂಡಿದ್ದಾರೆ.

Published On :
ಐಜಾಲ್: ತೀವ್ರ ಕುತೂಹಲ ಕೆರಳಿಸಿದ್ದ ಪಂಚ ರಾಜ್ಯ ಚುನಾವಣಾ ಫಲಿತಾಂಶ ಪ್ರಕಟವಾಗುತ್ತಿದ್ದು, ಅತ್ತ ಮಿಜೋರಾಂ ನಲ್ಲಿ ಹಾಲಿ ಸಿಎಂ ಹಾಗೂ ಕಾಂಗ್ರೆಸ್ ಅಭ್ಯರ್ಥಿ ಲಾಲ್ ಥನ್ವಾಲಾ ಅವರು ಸೋಲು ಕಂಡಿದ್ದಾರೆ.
ಮಿಜೋರಾಂನ ತಮ್ಮ ಸ್ವಕ್ಷೇತ್ರ ದಕ್ಷಿಣ ಚಾಂಪೈನಲ್ಲೇ ಮುಖ್ಯಮಂತ್ರಿ ಲಾಲ್ ಥನ್ವಾಲಾ ಸೋಲು ಕಂಡಿದ್ದು, ಮಿಜೋ ನ್ಯಾಷನಲ್ ಫ್ರಂಟ್ ಅಭ್ಯರ್ಥಿ ಟಿಜೆ ಲಾಲ್ನಂಟ್ಲುಂಗಾ ಜಯಭೇರಿ ಭಾರಿಸಿದ್ದಾರೆ. ಟಿಜೆ ಲಾಲ್ನಂಟ್ಲುಂಗಾ ಅವರು ಸಿಎಂ ಲಾಲ್ ಥನ್ವಾಲಾ ಅವರನ್ನು 856 ಮತಗಳ ಅಂತರದಲ್ಲಿ ಮಣಿಸಿದ್ದಾರೆ.
ಇನ್ನು ಹಾಲಿ ಚುನಾವಣೆಯಲ್ಲಿ ಎಂಎನ್ಎಫ್ ಪಕ್ಷ ಸ್ಪಷ್ಟ ಬಹುಮತ ಪಡೆದಿದ್ದು, ಒಟ್ಟು 40 ಕ್ಷೇತ್ರಗಳ ಪೈಕಿ ಎಂಎನ್ಎಫ್ 29 ಕ್ಷೇತ್ಪಗಳಲ್ಲಿ ಮುನ್ನಡೆ ಕಾಯ್ದುಕೊಂಡಿದೆ. ಆ ಮೂಲಕ ಮಿಜೋರಾಂನಲ್ಲಿ ಎಂಎನ್ಎಫ್ ಸರ್ಕಾರ ರಚನೆ ಮಾಡುವುದು ಖಚಿತವಾಗಿದ್ದು, ಪ್ರತಿಸ್ಪರ್ಧಿಗಳಾದ ಕಾಂಗ್ರೆಸ್ ಪಕ್ಷ 5ರಲ್ಲಿ ಮತ್ತು ಬಿಜೆಪಿ 1 ಸ್ಥಾನದಲ್ಲಿ ಮುನ್ನಡೆ ಸಾಧಿಸಿದೆ, ಇತರರು 5 ಸ್ಥಾನಗಳಲ್ಲಿ ಮುನ್ನಡೆ ಕಾಯ್ದೊಕೊಂಡಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
AizawlPoll Resultsಐಜಾಲ್ಮಿಜೋರಾಂ ಚುನಾವಣೆ 2018Mizoram Elections 2018CM Lal ThanhawlaMNFTJ Lalnuntluangaಸಿಎಂ ಲಾಲ್ ಥನ್ಹಾವ್ಲಾಎಮ್ಎನ್ಎಫ್ಟಿಜೆ ಲಾಲ್ನಂಟ್ಲುಂಗಾ
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


