ಈಗ ಮಯನ್ಮಾರ್ ಬಗ್ಗೆ ಟ್ವೀಟ್ ಮಾಡಿ ವಿವಾದಕ್ಕೆ ಗುರಿಯಾದ ಟ್ವಿಟರ್ ಸಿಇಒ
ಇತ್ತೀಚೆಗಷ್ಟೇ ಹಿಂದೂಗಳ ಭಾವನೆಗಳಿಗೆ ಧಕ್ಕೆ ಉಂಟುಮಾಡುವ ಪೋಸ್ಟರ್ ನ್ನು ಹಿಡಿದು ವಿವಾದಕ್ಕೆ ಗುರಿಯಾಗಿದ್ದ ಟ್ವಿಟರ್ ಸಿಇಒ ಜಾಕ್ ಡೋರ್ಸೆ ಈಗ ಮತ್ತೊಮ್ಮೆ ಇಂಥಹದ್ದೇ ಕಾರಣಕ್ಕೆ ಸುದ್ದಿಯಲ್ಲಿದ್ದಾರೆ.

Published On :
ಇತ್ತೀಚೆಗಷ್ಟೇ ಹಿಂದೂಗಳ ಭಾವನೆಗಳಿಗೆ ಧಕ್ಕೆ ಉಂಟುಮಾಡುವ ಪೋಸ್ಟರ್ ನ್ನು ಹಿಡಿದು ವಿವಾದಕ್ಕೆ ಗುರಿಯಾಗಿದ್ದ ಟ್ವಿಟರ್ ಸಿಇಒ ಜಾಕ್ ಡೋರ್ಸೆ ಈಗ ಮತ್ತೊಮ್ಮೆ ಇಂಥಹದ್ದೇ ಕಾರಣಕ್ಕೆ ಸುದ್ದಿಯಲ್ಲಿದ್ದಾರೆ.
ಮಯನ್ಮಾರ್ ನಲ್ಲಿ ಮಾನವ ಹಕ್ಕುಗಳ ಉಲ್ಲಂಘನೆಯ ಆರೋಪಗಳ ಹೊರತಾಗಿಯೂ ಟ್ವಿಟರ್ ಸಿಇಒ ಮಯನ್ಮಾರ್ ನ್ನು ಪ್ರವಾಸಿ ತಾಣವನ್ನಾಗಿ ಪ್ರಮೋಟ್ ಮಾಡಿದ್ದಾರೆ. ಇತ್ತೀಚೆಗಷ್ಟೇ ತಾವು ಮಯನ್ಮಾರ್ ಗೆ ತೆರಳಿದ್ದ ಅನುಭವವನ್ನು ಹಂಚಿಕೊಂಡಿರುವ ಜಾಕ್ ಡೊರ್ಸೆ, ಇಲ್ಲಿನ ಜನ ಸಂತಸದಿಂದ ಇದ್ದಾರೆ, ಆಹಾರ ಅತ್ಯುತ್ತಮವಾಗಿದೆ ಎಂದು ಹೇಳಿದ್ದು ಜನತೆಗೆ ಮಯನ್ಮಾರ್ ಗೆ ಭೇಟಿ ನೀಡಲು ಉತ್ತೇಜನ ನೀಡಿದ್ದಾರೆ.
ಟ್ವಿಟರ್ ಸಿಇಒ ಟ್ವೀಟ್ ಗೆ ಭಾರಿ ವಿರೋಧವ್ಯಕ್ತವಾಗಿದ್ದು, ಮುಸ್ಲಿಮ್ ರೋಹಿಂಗ್ಯನ್ನರ ಸಂಕಷ್ಟವನ್ನು ನಿರ್ಲಕ್ಷಿಸುತ್ತಿರುವುದಾಗಿ ತೀವ್ರ ಅಸಮಾಧಾನ ವ್ಯಕ್ತವಾಗಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


