ದೇಶ

ಪ್ರಜೆಗಳಿಗೆ ದೇಶದ ಸಂಪನ್ಮೂಲಗಳ ಮೇಲೆ ಹಕ್ಕಿದೆ, ಭಾರತವೇನು ಧರ್ಮಛತ್ರ ಅಲ್ಲ: ಅಕ್ರಮ ವಲಸಿಗರ ಕುರಿತು ಅಮಿತ್ ಶಾ

ಅಕ್ರಮ ವಲಸಿಗರ ಕುರಿತು ತಮ್ಮ ಪಕ್ಷದ ನಿಲುವನ್ನು ಸ್ಪಷ್ಟಪಡಿಸಿರುವ ಬಿಜೆಪಿ ರಾಷ್ಟ್ರಾಧ್ಯಕ್ಷ ಅಮಿತ್ ಶಾ, ಭಾರತೀಯರಿಗೆ ದೇಶದ ಸಂಪನ್ಮೂಲಗಳ ಮೇಲೆ ಹಕ್ಕಿದೆ, ಅಕ್ರಮ ವಲಸಿಗರು ನೆಲೆಯೂರಲು ಇದೇನು

ಪ್ರಜೆಗಳಿಗೆ ದೇಶದ ಸಂಪನ್ಮೂಲಗಳ ಮೇಲೆ ಹಕ್ಕಿದೆ, ಭಾರತವೇನು ಧರ್ಮಛತ್ರ ಅಲ್ಲ: ಅಕ್ರಮ ವಲಸಿಗರ ಕುರಿತು  ಅಮಿತ್ ಶಾ
ಪ್ರಜೆಗಳಿಗೆ ದೇಶದ ಸಂಪನ್ಮೂಲಗಳ ಮೇಲೆ ಹಕ್ಕಿದೆ, ಭಾರತವೇನು ಧರ್ಮಛತ್ರ ಅಲ್ಲ: ಅಕ್ರಮ ವಲಸಿಗರ ಕುರಿತು ಅಮಿತ್ ಶಾ
Published On :
ನವದೆಹಲಿ: ಅಕ್ರಮ ವಲಸಿಗರ ಕುರಿತು ತಮ್ಮ ಪಕ್ಷದ ನಿಲುವನ್ನು ಸ್ಪಷ್ಟಪಡಿಸಿರುವ ಬಿಜೆಪಿ ರಾಷ್ಟ್ರಾಧ್ಯಕ್ಷ ಅಮಿತ್ ಶಾ, ಭಾರತೀಯರಿಗೆ ದೇಶದ ಸಂಪನ್ಮೂಲಗಳ ಮೇಲೆ ಹಕ್ಕಿದೆ, ಅಕ್ರಮ ವಲಸಿಗರು ನೆಲೆಯೂರಲು ಇದೇನು ಧರ್ಮಶಾಲೆಯಲ್ಲ ಎಂದು ಹೇಳಿದ್ದಾರೆ. 
ಅಕ್ರಮ ವಲಸೆ ದೇಶಕ್ಕೆ ಅಪಾಯಕಾರಿ ಎಂದು ಹೇಳಿರುವ ಅಮಿತ್ ಶಾ, ಎನ್ಆರ್ ಸಿ ಈ ಅಪಾಯವನ್ನು ಬಗೆಹರಿಸಲು ಇರುವ ಮಾರ್ಗವಾಗಿದ್ದು, ಎನ್ ಆರ್ ಸಿಯೊಂದಿಗೆ ಬಿಜೆಪಿಗೆ ಸಂಬಂಧ ಕಲ್ಪಿಸಬಾರದು ಎಂದು ಹೇಳಿದ್ದಾರೆ.    
ಬಿಜೆಪಿಗೆ ತಳುಕುಹಾಕಿ ಎನ್ ಆರ್ ಸಿಯನ್ನು ನೋಡಬಾರದು, ಎನ್ ಆರ್ ಸಿ ದೇಶದ ಅಕ್ರಮ ವಲಸೆಯ ಸಮಸ್ಯೆಯನ್ನು ಬಗೆಹರಿಸುವ ಮಾರ್ಗವಾಗಿ, ಯಾರು ಬೇಕಾದರೂ ಇಲ್ಲಿ ಬಂದು ನೆಲೆಯೂರುವುದಕ್ಕೆ ಹೇಗೆ ಸಾಧ್ಯ? ಒಂದು ದೇಶ ಈ ರೀತಿ ನಡೆಯುವುದಕ್ಕೆ ಸಾಧ್ಯವಿಲ್ಲ.  ಆ ದೇಶದ ಪ್ರಜೆಗಳಿಗೆ ಆ ದೇಶದ ಸಂಪನ್ಮೂಲಗಳ ಮೇಲೆ ಹಕ್ಕಿದೆ. ಯಾರು ಬೇಕಾದರೂ ಬಂದು ನೆಲೆಯೂರುವುದಕ್ಕೆ ಭಾರತವೇನು ಧರ್ಮಛತ್ರ ಅಲ್ಲ ಎಂದು ಅಮಿತ್ ಶಾ ತೀಕ್ಷ್ಣವಾಗಿ ಅಕ್ರಮ ವಲಸಿಗರ ಕುರಿತು ಪ್ರತಿಕ್ರಿಯೆ ನೀಡಿದ್ದಾರೆ. 
ಇದೇ ವೇಳೆ ಅಕ್ರಮ ವಲಸಿಗರನ್ನು ಓಟ್ ಬ್ಯಾಂಕ್ ನ್ನಾಗಿ ಮಾಡಿಕೊಂಡಿರುವ ಪಕ್ಷಗಳ ವಿರುದ್ಧವೂ ಅಮಿತ್ ಶಾ ವಾಗ್ದಾಳಿ ನಡೆಸಿದ್ದು, 70 ವರ್ಷಗಳಿಂದ ಅಕ್ರಮ ವಲಸಿಗರನ್ನು ಓಟ್ ಬ್ಯಾಂಕ್ ನ್ನಾಗಿ ಮಾಡಿಕೊಳ್ಳಲಾಗಿದೆ. ಆದರೆ ಬಿಜೆಪಿ ದೇಶದ ಹಿತಾಸಕ್ತಿಯ ದೃಷ್ಟಿಯಿಂದ ಅಕ್ರಮ ವಲಸಿಗರ ವಿರುದ್ಧ ಕಠಿಣ ಕ್ರಮ ಕೈಗೊಳ್ಳುತ್ತಿದೆ ಎಂದು ಹೇಳಿದ್ದಾರೆ. 

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.