ದೇಶ

ಕಾಂಗ್ರೆಸ್ ನಾಯಕರ ದೂರದೃಷ್ಟಿ ಕೊರತೆಯಿಂದಾಗಿ ಕರ್ತಾರ್ಪುರ ಪಾಕಿಸ್ತಾನದಲ್ಲಿದೆ: ಪ್ರಧಾನಿ ಮೋದಿ

ಕಾಂಗ್ರೆಸ್ ನಾಯಕರಿದೆ ದೂರದೃಷ್ಟಿಯ ಕೊರತೆ ಇದ್ದ ಕಾರಣ ಇಂದು ಕರ್ತಾರ್ಪು ಸಾಹಿಬ್ ಗುರುದ್ವಾರ ಪಾಕಿಸ್ತಾನದಲ್ಲಿದೆ ಎಂದು ಪ್ರಧಾನಮಂತ್ರಿ ನರೇಂದ್ರ ಮೋದಿಯವರು ಮಂಗಳವಾರ ಹೇಳಿದ್ದಾರೆ...

ಕಾಂಗ್ರೆಸ್ ನಾಯಕರ ದೂರದೃಷ್ಟಿ ಕೊರತೆಯಿಂದಾಗಿ ಕರ್ತಾರ್ಪುರ ಪಾಕಿಸ್ತಾನದಲ್ಲಿದೆ: ಪ್ರಧಾನಿ ಮೋದಿ
ಪ್ರಧಾನಮಂತ್ರಿ ನರೇಂದ್ರ ಮೋದಿ
Published On :
ಹನುಮಾನ್ಗರ್ಹ್ (ರಾಜಸ್ತಾನ): ಕಾಂಗ್ರೆಸ್ ನಾಯಕರಿದೆ ದೂರದೃಷ್ಟಿಯ ಕೊರತೆ ಇದ್ದ ಕಾರಣ ಇಂದು ಕರ್ತಾರ್ಪು ಸಾಹಿಬ್ ಗುರುದ್ವಾರ ಪಾಕಿಸ್ತಾನದಲ್ಲಿದೆ ಎಂದು ಪ್ರಧಾನಮಂತ್ರಿ ನರೇಂದ್ರ ಮೋದಿಯವರು ಮಂಗಳವಾರ ಹೇಳಿದ್ದಾರೆ.
ರಾಜಸ್ಥಾನದ ಹನುಮಾನ್ಗರ್ಹ್ ನಲ್ಲಿ ಚುನಾವಣಾ ರ್ಯಾಲಿ ಉದ್ದೇಶಿಸಿ ಮಾತನಾಡಿರುವ ಪ್ರಧಾನಿ ಮೋದಿಯವರು ಕಾಂಗ್ರೆಸ್ ವಿರುದ್ದ ತೀವ್ರವಾಗಿ ಕಿಡಿಕಾರಿದ್ದಾರೆ. 
ಕಾಂಗ್ರೆಸ್ ನಾಯಕರಿಗೆ ಸೂಕ್ಷ್ಮತೆ ಇಲ್ಲದಿರುವುದು ಹಾಗೂ ದೂರ ದೃಷ್ಟಿಯ ಕೊರತೆ ಇದ್ದ ಕಾರಣ ಕರ್ತಾರ್ಪುರ ಪಾಕಿಸ್ತಾನದ ಪಾಲಾಗಿದೆ ಎಂದು ಹೇಳಿದ್ದಾರೆ. 
ಗುರು ನಾನಕ್ ದೇವ್ ಅವರ ಪ್ರಾಮುಖ್ಯತೆ ಬಗ್ಗೆ ಕಾಂಗ್ರೆಸ್'ಗೆ ಯಾವುದೇ ರೀತಿಯ ಕಲ್ಪನೆಗಳೂ ಕೂಡ ಇರಲಿಲ್ಲ. ಹೀಗಾಗಿಯೇ ಕರ್ತಾರ್ಪುರ ಪಾಕಿಸ್ತಾನದಲ್ಲಿದೆ ಎಂದು ತಿಳಿಸಿದ್ದಾರೆ. 
ಕರ್ತಾರ್ಪುರ ಕಾರಿಡಾರ್ ಯೋಜನೆಗೆ ಶಂಕು ಸ್ಥಾಪನಾ ಕಾರ್ಯಕ್ರಮಕ್ಕಾಗಿ ಭಾರತವನ್ನು ಪ್ರತಿನಿಧಿಸಲು ಪಾಕಿಸ್ತಾನಕ್ಕೆ ತೆರಳಿದ್ದ ಕೇಂದ್ರ ಸಚಿವ ಹರ್ದೀಪ್ ಸಿಂಗ್ ಪುರಿಯವರು ಈ ಹಿಂದೆ ಹೇಳಿಕೆಯೊಂದನ್ನು ನೀಡಿದ್ದರು. ಹಲವು ವರ್ಷಗಳ ಹಿಂದೆಯೇ ಕರ್ತಾರ್ಪುರ ಕಾರಿಡಾರ್ ಯೋಜನೆ ಆಗಬೇಕಿತ್ತು. ಗಡಿ ರೇಖೆ ಹಾಕಿದ್ದ ವ್ಯಕ್ತಿ ಮೂಲಭೂತ ತಪ್ಪು ಮಾಡಿದ್ದ ಎಂದು ಹೇಳಿದ್ದರು. 

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.