ಕೇರಳ ಪ್ರವಾಹ; ಸಾವಿನ ಸಂಖ್ಯೆ 483ಕ್ಕೆ ಏರಿಕೆ: ಸಿಎಂ ಪಿಣರಾಯ್ ವಿಜಯನ್
ಮಹಾಮಳೆಯಿಂದ ಜಲಾವೃತವಾಗಿದ್ದ ಕೇರಳದಲ್ಲಿ ಇದುವರೆಗೆ 483 ಮಂದಿ ಪ್ರಾಣ ಕಳೆದುಕೊಂಡಿದ್ದಾರೆ ಮತ್ತು ...

Published On :
ತಿರುವನಂತಪುರಂ: ಮಹಾಮಳೆಯಿಂದ ಜಲಾವೃತವಾಗಿದ್ದ ಕೇರಳದಲ್ಲಿ ಇದುವರೆಗೆ 483 ಮಂದಿ ಪ್ರಾಣ ಕಳೆದುಕೊಂಡಿದ್ದಾರೆ ಮತ್ತು 15 ಮಂದಿ ಇನ್ನೂ ನಾಪತ್ತೆಯಾಗಿದ್ದಾರೆ ಎಂದು ಕೇರಳ ಮುಖ್ಯಮಂತ್ರಿ ಪಿಣರಾಯ್ ವಿಜಯನ್ ಅವರು ಗುರುವಾರ ವಿಧಾನಸಭೆಗೆ ತಿಳಿಸಿದ್ದಾರೆ.
ಪ್ರವಾಹ ಕುರಿತು ಚರ್ಚಿಸಲು ಕರೆಯಲಾಗಿರುವ ಒಂದು ದಿನದ ವಿಶೇಷ ಅಧಿವೇಶನದಲ್ಲಿ ಮಾತನಾಡಿದ ಸಿಎಂ ವಿಜಯನ್ ಅವರು, ಶತಮಾನದ ಅತ್ಯಂತ ಭೀಕರ ಪ್ರವಾಹ ಇದಾಗಿದ್ದು, 14.5 ಲಕ್ಷ ಜನರ ನಿರಾಶ್ರಿತ ಕೇಂದ್ರಗಳಲ್ಲಿದ್ದಾರೆ ಎಂದರು.
ಒಟ್ಟು 57 ಸಾವಿರ ಹೆಕ್ಟೆರ್ ಕೃಷಿ ಭೂಮಿಯಲ್ಲಿ ಬೆಳೆ ಹಾನಿಯಾಗಿದೆ. ನಮ್ಮ ರಾಜ್ಯದ ವಾರ್ಷಿಕ ಹಣಹೂಡಿಕೆಗಿಂತ ಹೆಚ್ಚು ನಷ್ಟವಾಗಿದೆ ಎಂದರು.
ಪ್ರವಾಹದಿಂದಾದ ಹಾನಿಯ ಕುರಿತು ಅಂತಿಮ ಮೌಲ್ಯಮಾಪನದ ನಂತರ ಕೇರಳ ಸರ್ಕಾರ ಕೇಂದ್ರದಿಂದ ಹೆಚ್ಚಿನ ನೆರವಿನ ನಿರೀಕ್ಷೆಯಲ್ಲಿದೆ ಎಂದು ಸಿಎಂ ತಿಳಿಸಿದರು.
ಕೇರಳ ಪ್ರವಾಹಕ್ಕೆ ವಿಶ್ವದ ವಿವಧ ಸಂಸ್ಥೆಗಳು ನೆರವು ನೀಡಲು ಮುಂದೆ ಬಂದಿವೆ. ವಿಶ್ವ ಬ್ಯಾಂಕ್ ತಂಡ ಸಹ ಸರ್ಕಾರದ ಮುಖ್ಯ ಕಾರ್ಯದರ್ಶಿಯೊಂದಿಗೆ ಚರ್ಚಿಸಿದೆ. ನಮ್ಮ ರಾಜ್ಯದ ಹಿತಾಸಕ್ತಿಗಳಿಗೆ ಅನುಗುಣವಾಗಿದ್ದರೆ, ಯಾವುದೇ ಭಾಗದಿಂದಲೂ ಸಹಾಯವನ್ನು ಸ್ವೀಕರಿಸುವುದು ರಾಜ್ಯದ ನಿಯಮಗವಾಗಿದೆ ಎಂದು ಪಿಣರಾಯ್ ವಿಜಯನ್ ಹೇಳಿದರು.
ಮುಖ್ಯಮಂತ್ರಿಗಳ ಪರಿಹಾರ ನಿಧಿಗೆ ಇದುವರೆಗೆ ಒಟ್ಟು 730 ಕೋಟಿ ರುಪಾಯಿ ದೇಣಿಗೆ ಬಂದಿದೆ. ಆಭರಣಗಳು ಮತ್ತು ಭೂಮಿ ರೂಪದಲ್ಲಿಯೂ ದೇಣಿಗೆ ನೀಡಲಾಗುತ್ತಿದೆ. ಹೊಸ ಕೇರಳ ನಿರ್ಮಾಣಕ್ಕೆ ಎಲ್ಲಾ ರೀತಿಯ ಪ್ರಯತ್ನಗಳನ್ನು ನಡೆಸಲಾಗುವುದು ಎಂದು ಸಿಎಂ ತಿಳಿಸಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Pinarayi Vijayanಪಿಣರಾಯ್ ವಿಜಯನ್Kerala floodsಕೇರಳ ಪ್ರವಾಹDeath toll rises to 483ಸಾವಿನ ಸಂಖ್ಯೆ 483ಕ್ಕೆ ಏರಿಕೆ
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


