ದೇಶ

ಗೌತಮ್ ನವಲಖಾರನ್ನು ಗೃಹ ಬಂಧನದಲ್ಲಿರಿಸಿ: ದೆಹಲಿ ಹೈಕೋರ್ಟ್

ಭಯೋತ್ಪಾದನೆ ಆರೋಪದ ಮೇಲೆ ಬಂಧನಕ್ಕೊಳಗಾಗಿರುವ ಮಾನವಹಕ್ಕುಗಳ ಹೋರಾಟಗಾರ ಹಾಗೂ ಮಾವೋವಾದಿಗಳ...

ಗೌತಮ್ ನವಲಖಾರನ್ನು ಗೃಹ ಬಂಧನದಲ್ಲಿರಿಸಿ: ದೆಹಲಿ ಹೈಕೋರ್ಟ್
ಗೌತಮ್ ನವಲಾಖ
Published On :
ನವದೆಹಲಿ: ಭಯೋತ್ಪಾದನೆ ಆರೋಪದ ಮೇಲೆ ಬಂಧನಕ್ಕೊಳಗಾಗಿರುವ ಮಾನವಹಕ್ಕುಗಳ ಹೋರಾಟಗಾರ ಹಾಗೂ ಮಾವೋವಾದಿಗಳ ಬಗ್ಗೆ ಸಹಾನುಭೂತಿ ಹೊಂದಿರುವ ಗೌತಮ್ ನವಲಖಾ ಅವರನ್ನು ದೆಹಲಿಯಿಂದ ಹೊರಗೆ ಕರೆದೊಯ್ಯದಂತೆ ಮತ್ತು ಗೃಹ ಬಂಧನದಲ್ಲಿರಿಸುವಂತೆ ಮಹಾರಾಷ್ಟ್ರ ಪೊಲೀಸರಿಗೆ ದೆಹಲಿ ಹೈಕೋರ್ಟ್ ಆದೇಶಿಸಿದೆ.
ಇಂದು ದೆಹಲಿ ಪೊಲೀಸರು ಹಾಗೂ ಪುಣೆ ಪೊಲೀಸರು ಜಂಟಿಯಾಗಿ ಗೌತಮ್ ನವಲಖಾ ಅವರನ್ನು ಬಂಧಿಸಿ ದೆಹಲಿಯ ಮ್ಯಾಜಿಸ್ಟ್ರೇಟ್ ಕೋರ್ಟ್ ಮುಂದೆ ಹಾಜರುಪಡಿಸಿದರು. ವಿಚಾರಣೆ ನಡೆಸಿದ ಮ್ಯಾಜಿಸ್ಟ್ರೇಟ್ ಕೋರ್ಟ್, ಗೌತಮ್ ನವಲಖಾ ಅವರನ್ನು ಪುಣೆಯ ಸ್ಥಳೀಯ ಕೋರ್ಟ್ ಗೆ ಕರೆದೊಯ್ಯಲು ಅನುಮತಿ ನೀಡಿತ್ತು.
ಈ ಮಧ್ಯೆ, ನವಲಖಾ ಪರ ವಕೀಲರು ಸಲ್ಲಿಸಿದ್ದ ಹೇಬಿಯಸ್ ಕಾರ್ಪಸ್ ಅರ್ಜಿಯ ವಿಚಾರಣೆ ನಡೆಸಿದ  ದೆಹಲಿ ಹೈಕೋರ್ಟ್, ಮುಂದಿನ ಆದೇಶದವರೆಗೆ ಗೌತಮ್ ನವಲಖಾ ಅವರನ್ನು ದೆಹಲಿಯಿಂದ ಹೊರಗೆ ಕರೆದೊಯ್ಯದಂತೆ ಮತ್ತು ಅವರನ್ನು ಅವರ ನಿವಾಸದಲ್ಲಿಯೇ ಗೃಹ ಬಂಧನದಲ್ಲಿರಿಸುವಂತೆ ಆದೇಶಿಸಿ, ವಿಚಾರಣೆಯನ್ನು ಬುಧವಾರಕ್ಕೆ ಮುಂದೂಡಿದೆ.
ಪೊಲೀಸರು ಇಂದು ದೇಶಾದ್ಯಂತ ಮಾವೋವಾದಿಗಳ ಬಗ್ಗೆ ಸಹಾನುಭೂತಿ ಹೊಂದಿರುವ ಹಲವು ಹೋರಾಟಗಾರರ ಮನೆ ಮೇಲೆ ದಾಳಿ ನಡೆಸಿ, ಅವರನ್ನು ಬಂಧಿಸಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.