ಪಾರದರ್ಶಕ ಚುನಾವಣೆಗಾಗಿ ಇವಿಎಂ ಬದಲು ಬ್ಯಾಲಟ್ ಪೇಪರ್ ನೀಡಿ: ಕಾಂಗ್ರೆಸ್ ಬೇಡಿಕೆ
ಇವಿಎಂ ಯಂತ್ರಕ್ಕೆ ಬದಲು ಬ್ಯಾಲಟ್ ಪೇಪರ್ ನೀಡುವಂತೆ ಕೇಂದ್ರ ಚುನಾವಣಾ ಆಯೋಗಕ್ಕೆ ಕಾಂಗ್ರೆಸ್ ಬೇಡಿಕೆ ಇಟ್ಟಿದೆ....

Published On :
ನವದೆಹಲಿ: ಇವಿಎಂ ಯಂತ್ರಕ್ಕೆ ಬದಲು ಬ್ಯಾಲಟ್ ಪೇಪರ್ ನೀಡುವಂತೆ ಕೇಂದ್ರ ಚುನಾವಣಾ ಆಯೋಗಕ್ಕೆ ಕಾಂಗ್ರೆಸ್ ಬೇಡಿಕೆ ಇಟ್ಟಿದೆ.
ಈ ಸಂಬಂಧ ಪತ್ರ ಬರೆದಿರುವ ಕಾಂಗ್ರೆಸ್, ದೇಶದಲ್ಲಿ ಪಾರದರ್ಶಕ ಚುನಾವಣೆಗಾಗಿ ಬ್ಯಾಲಟ್ ಪೇಪರ್ ಮತ್ತೆ ತರುವಂತೆ ಕಾಂಗ್ರೆಸ್ ಒತ್ತಾಯಿಸಿದೆ, ದೋಷಪೂರಿತ ಇವಿಎಂಗಳಿಂದಾಗಿ ಪ್ರಜಾಪ್ರಭುತಕ್ಕೆ ಧಕ್ಕೆಯಾಗುತ್ತಿದೆ ಎಂದು ಹೇಳಿದೆ.
ಇವಿಎಂ ವಿರುದ್ಧ ಕೇವಲ ಕಾಂಗ್ರೆಸ್ ಮಾತ್ರವಲ್ಲ, ಟಿಎಂಸಿ, ಜೆಡಿಎಸ್, ಎನ್ ಸಿಪಿ, ಎಸ್ ಪಿ, ಸಿಪಿಐ-ಎಂ ಸೇರಿದಂತೆ ಹಲವು ಪ್ರಾದೇಶಿಕ ಪಕ್ಷಗಳು ಬ್ಯಾಲಟ್ ಪೇಪರ್ ಪರ ಒಲವು ತೋರಿವೆ, ಎನ್ ಡಿಎ ಮೈತ್ರಿ ಪಕ್ಷ ಶಿವ ಸೇನೆ ಕೂಡ ಇವಿಎಂ ಯಂತ್ರದ ವಿರುದ್ಧ ಧ್ವನಿ ಎತ್ತಿದೆ.
ಇಂದು ಕೇಂದ್ರ ಚುನಾವಣಾ ಆಯೋಗದ ಜೊತೆ ನಡೆಯಲಿರುವ ಸಭೆಯಲ್ಲಿ ಈ ಎಲ್ಲಾ ಪಕ್ಷಗಳು ಇವಿಎಂ ಯಂತ್ರದ ಬಗ್ಗೆ ಪ್ರಶ್ನೆ ಎತ್ತಲಿವೆ ಎಂದು ತಿಳಿದು ಬಂದಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
ಲೋಕಸಭೆ ಚುನಾವಣೆEVMಇವಿಎಂಬ್ಯಾಲಟ್ ಪೇಪರ್Lok Sabha electionಕಾಂಗ್ರೆಸ್ ಚುನಾವಣಾ ಆಯೋಗCongress. Election Commission
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


