ಲೋಕಸಭಾ ಚುನಾವಣೆ: ಕೋಮುವಾದಿಯೇತರ ಪಕ್ಷಗಳ ಮೈತ್ರಿ ಅಗತ್ಯ-ಅಮರ್ತ್ಯಸೇನ್
2019 ರ ಲೋಕಸಭಾ ಚುನಾವಣೆಗಾಗಿ ಕೋಮುವಾದಿಯೇತರ ರಾಜಕೀಯ ಪಕ್ಷಗಳು ಮೈತ್ರಿ ಮಾಡಿಕೊಳ್ಳಬೇಕು. ಪ್ರಜಾಪ್ರಭುತ್ವ ಅಪಾಯದ ಸ್ಥಿತಿಯಲ್ಲಿದ್ದು, ಎಡಪಕ್ಷಗಳು ಮೈತ್ರಿ ಸೇರಲು ಹಿಂಜರಿಯಬಾರದು ಎಂದು ನೊಬೆಲ್ ಸಾಹಿತ್ಯ ಪ್ರಶಸ್ತಿ ಪುರಸ್ಕೃತ ಅಮರ್ತ್ಯ ಸೇನ್ ಹೇಳಿದ್ದಾರೆ.

ಕೋಲ್ಕತ್ತಾ : 2019 ರ ಲೋಕಸಭಾ ಚುನಾವಣೆಗಾಗಿ ಕೋಮುವಾದಿಯೇತರ ರಾಜಕೀಯ ಪಕ್ಷಗಳು ಮೈತ್ರಿ ಮಾಡಿಕೊಳ್ಳಬೇಕು. ಪ್ರಜಾಪ್ರಭುತ್ವ ಅಪಾಯದ ಸ್ಥಿತಿಯಲ್ಲಿದ್ದು, ಎಡಪಕ್ಷಗಳು ಮೈತ್ರಿ ಸೇರಲು ಹಿಂಜರಿಯಬಾರದು ಎಂದು ನೊಬೆಲ್ ಸಾಹಿತ್ಯ ಪ್ರಶಸ್ತಿ ಪುರಸ್ಕೃತ ಅಮರ್ತ್ಯ ಸೇನ್ ಹೇಳಿದ್ದಾರೆ.
ನಿರಂಕುಶ ಪ್ರವೃತ್ತಿ ವಿರುದ್ಧ ನಾವು ವಿರೋಧ ವ್ಯಕ್ತಪಡಿಸಿಬೇಕು, ಸರ್ವಾಧಿಕಾರ ಪ್ರವೃತಿ ವಿರುದ್ಧ ಹೋರಾಟ ನಡೆಸಬೇಕಾಗಿದೆ. ಇಂತಹ ವಿಚಾರಗಳನ್ನು ಟೀಕಿಸಲು ಕೋಮುವಾದಿಯೇತರ ಶಕ್ತಿಗಳು ಒಂದಾಗಬೇಕಿದೆ. ಆದರೆ, ಕೋಮುವಾದಿ ವಿರುದ್ಧ ಹೋರಾಟದ ಸಂದರ್ಭದಲ್ಲಿ ನಾವು ಒಂದಾಗಿ ಕೈ ಜೋಡಿಸುತ್ತಿಲ್ಲ. ಇದು ದೊಡ್ಡ ಬೆದರಿಕೆಯಾಗಿದೆ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.
2014ರ ಚುನಾವಣೆಯಲ್ಲಿ ಶೇ 55 ರಷ್ಟು ಸ್ಥಾನಗಳನ್ನು ಪಡೆದಿದ್ದ ಬಿಜೆಪಿ ಒಟ್ಟಾರೇ, ಶೇ. 31 ರಷ್ಟು ಮತಗಳನ್ನು ಮಾತ್ರ ಪಡೆದಿತ್ತು . ರಾಜಕೀಯ ದುರುದ್ದೇಶದಿಂದ ಅಧಿಕಾರಕ್ಕೆ ಬಂದಿತ್ತು ಎಂದು ಅಮರ್ತ್ಯ ಸೇನ್ ಕಟುವಾಗಿ ಟೀಕಿಸಿದ್ದಾರೆ.
ದೇಶದಲ್ಲಿನ ಪ್ರಜಾಪ್ರಭುತ್ವ ಅಪಾಯದ ಸ್ಥಿತಿಯಲ್ಲಿದೆ. ಆದರೆ, ಜನರಿಂದ ಮಾತ್ರ ರಕ್ಷಿಸಲು ಸಾಧ್ಯವಿದೆ. ಒಂದು ವೇಳೆ ಹೀಗೆ ಹೇಳಿದ್ದರೆ ಕೆಲ ವ್ಯಕ್ತಿಗಳಿಂದ ಥಳಿತಕ್ಕೊಳಗಾಗಬೇಕಿದೆ. ಆದರೆ, ಈಗಲೂ ಕೂಡಾ ಅದನ್ನು ತಿದ್ದುಪಡಿಮಾಡಬಹುದಾಗಿದೆ. ಅದು ಮುಳುಗುವ ದೋಣಿಯಂತಲ್ಲ ನಾವೆಲ್ಲರೂ ತ್ಯಜಿಸಬೇಕಾಗಿದೆ ಎಂದು ಅವರು ಕಳವಳ ವ್ಯಕ್ತಪಡಿಸಿದರು.
ಬಹುಪಕ್ಷಗಳ ಪದ್ಧತಿಯಿಲ್ಲದೆ ಪ್ರಜಾಪ್ರಭುತ್ವ ಕಾರ್ಯನಿರ್ವಹಣೆ ಅಸಾಧ್ಯವಾದದ್ದು, ಏಕಪಕ್ಷೀಯ ವ್ಯವಸ್ಥೆಯಲ್ಲಿ ಇರುವಂತಹ ಸರ್ವಾಧಿಕಾರಿ ವ್ಯವಸ್ಥೆಯನ್ನು ಹಲವು ವರ್ಷಗಳಿಂದ ನಾವು ನೋಡಿದ್ದೇವೆ ಎಂದು ಅಮರ್ತ್ಯ ಸೇನ್ ಹೇಳಿದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


