ದೇಶ

ತಾಯಿಯೊಂದಿಗೆ ಜಗಳ: ಜೀವನ ಬೇಡವೆಂದು ಪೋಸ್ಟ್ ಹಾಕಿದ್ದ ಯುವತಿಗೆ ಬಂತು 'ಮೆಮೋ ಸೂಸೈಡ್ ಚಾಲೆಂಜ್'

ಕ್ಷುಲ್ಲಕ ಕಾರಣಕ್ಕೆ ತಾಯಿಯೊಂದಿಗೆ ಜಗಳ ಮಾಡಿಕೊಂಡು, ಜೀವನವೇ ಬೇಡವೆಂದು ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಹಾಕಿದ್ದ ಯುವತಿಗೆ ಅಪಾಯಕಾರಿ ಮೆಮೋ ಸೂಸೈಡ್ ಚಾಲೆಂಜ್ ಬಂದಿರುವ ಘಟನೆ ಪಶ್ಚಿಮ ಬಂಗಾಳದಲ್ಲಿ ನಡೆದಿದೆ...

ತಾಯಿಯೊಂದಿಗೆ ಜಗಳ: ಜೀವನ ಬೇಡವೆಂದು ಪೋಸ್ಟ್ ಹಾಕಿದ್ದ ಯುವತಿಗೆ ಬಂತು 'ಮೆಮೋ ಸೂಸೈಡ್ ಚಾಲೆಂಜ್'
ಮೆಮೋ ಸೂಸೈಡ್ ಚಾಲೆಂಜ್
Published On :
ಜಲ್ಪೈಗುರಿ: ಕ್ಷುಲ್ಲಕ ಕಾರಣಕ್ಕೆ ತಾಯಿಯೊಂದಿಗೆ ಜಗಳ ಮಾಡಿಕೊಂಡು, ಜೀವನವೇ ಬೇಡವೆಂದು ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಹಾಕಿದ್ದ ಯುವತಿಗೆ ಅಪಾಯಕಾರಿ ಮೆಮೋ ಸೂಸೈಡ್ ಚಾಲೆಂಜ್ ಬಂದಿರುವ ಘಟನೆ ಪಶ್ಚಿಮ ಬಂಗಾಳದಲ್ಲಿ ನಡೆದಿದೆ. 
ಮೆಮೋ ಸೂಸೈಡ್ ಗೇಮ್ ಆಡುವಂತೆ ಅನಾಮಧೇಯ ವ್ಯಕ್ತಿಗಳು ಆಕೆಯನ್ನು ಆಹ್ವಾನಿಸುತ್ತಿರುವುದಾಗಿ ಯುವತಿ ಹೇಳಿದ್ದು, ಈ ಕುರಿತು ಪೊಲೀಸರಿಗೆ ದೂರು ದಾಖಲಿಸಿದ್ದಾಳೆ. 
ತಾಯಿಯೊಂದಿಗೆ ಜಗಳ ಮಾಡಿದ್ದ ನಾನು ಬೇಸರಗೊಂಡು ಜೀವ ತೆಗೆದುಕೊಳ್ಳಬೇಕೆನ್ನಿಸುತ್ತಿದೆ ಎಂದು ಪೋಸ್ಟ್ ಹಾಕಿದ್ದೆ. ಇದಾದ ಬಳಿಕ ಅನಾಮಧೇಯ ವ್ಯಕ್ತಿಯಿಂದ ಮೆಮೋ ಗೇಮ್ ಚಾಲೆಂಜ್ ಆಡುವಂತೆ ಆಹ್ವಾನ ಬಂದಿತ್ತು. ವ್ಯಕ್ತಿಯ ಗುರ್ತಿಕೆ ತಿಳಿದುಕೊಳ್ಳಲು ಯತ್ನಿಸಿದ್ದೆ. ಆದರೆ, ಅದು ಸಾಧ್ಯವಾಗಲಿಲ್ಲ. ಇದರಿಂದ ಆತಂಕಗೊಂಡು ನನ್ನ ಸಹೋದರಿಗೆ ಈ ವಿಚಾರ ತಿಳಿಸಿದೆ. ಈ ವೇಳೆ ಆತ ಆಟವನ್ನು ಆಡದಂತೆ ಎಚ್ಚರಿಸಿ ಪೊಲೀಸರಿಗೆ ದೂರು ನೀಡುವಂತೆ ತಿಳಿಸಿದ ಎಂದು ಯುವತಿ ಹೇಳಿದ್ದಾಳೆ. ಪ್ರಸ್ತುತ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ತನಿಖೆ ಆರಂಭಿಸಿದ್ದಾರೆ. 

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.