ದೇಶ

ಹೆಂಡತಿ ದೇಹ ಪ್ರಿಡ್ಜ್ ನಲ್ಲಿ, ಹೆಣ್ಣುಮಕ್ಕಳಿಬ್ಬರು ಸೂಟ್ ಕೇಸ್ ನಲ್ಲಿ: ನಾಲ್ವರನ್ನು ಕೊಂದು ತಂದೆ ಆತ್ಮಹತ್ಯೆ!

ಒಂದೇ ಕುಟುಂಬದ ಐವರು ಮನೆಯೊಳಗೆ ಶವಗಳಾಗಿ ಪತ್ತೆಯಾಗಿರುವ ಘಟನೆ ಧೂಮ್‌ಗಂಜ್‌ ನಡೆದಿದೆ....

ಹೆಂಡತಿ ದೇಹ ಪ್ರಿಡ್ಜ್ ನಲ್ಲಿ, ಹೆಣ್ಣುಮಕ್ಕಳಿಬ್ಬರು ಸೂಟ್ ಕೇಸ್ ನಲ್ಲಿ: ನಾಲ್ವರನ್ನು ಕೊಂದು ತಂದೆ ಆತ್ಮಹತ್ಯೆ!
ಒಂದೇ ಕುಟುಂಬದ ಐವರ ಸಾವು
Published On :
ಅಲಹಾಬಾದ್: ಒಂದೇ ಕುಟುಂಬದ ಐವರು ಮನೆಯೊಳಗೆ ಶವಗಳಾಗಿ ಪತ್ತೆಯಾಗಿರುವ ಘಟನೆ ಧೂಮ್‌ಗಂಜ್‌ ನಡೆದಿದೆ.
ಪತ್ನಿಯ ಶವ ಫ್ರಿಡ್ಜ್‌ನಲ್ಲಿ, ಹೆಣ್ಣು ಮಕ್ಕಳಿಬ್ಬರ ಶವ ಸೂಟ್‌ಕೇಸ್‌ನಲ್ಲಿ, ಮತ್ತೊಬ್ಬ ಮಗಳ ದೇಹ ಕೋಣೆಯೊಂದರಲ್ಲಿದ್ದು ತಂದೆ ಮತ್ತೊಂದು ಕೊಣೆಯಲ್ಲಿ ಆತ್ಮಹತ್ಯೆಗೆ ಶರಣಾಗಿರುವ ಭೀಕರ ಘಟನೆ ನಡೆದಿದೆ,
ಬಾಗಿಲು ಒಡೆದು ಮನೆಯೊಳಗೆ ಪ್ರವೇಶಿಸಿದಾಗ ಭಯಾನಕ  ದೃಶ್ಯ ನೋಡಿ ಪೊಲೀಸ್‌ ಅಧಿಕಾರಿಗಳೇ ಬೆಚ್ಚಿ ಬಿದ್ದಿದ್ದಾರೆ.
ಹೆಂಡತಿ ಹಾಗೂ ಮೀನರು ಅಪ್ರಾಪ್ತ ಹೆಣ್ಣು ಮಕ್ಕಳನ್ನು ಕೊಂದು ಕೊನೆಗೆ ತಾನು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಹೇಳಲಾಗಿದೆ,.
ಅಲಹಾಬಾದ್‌ನ ಹಿರಿಯ ಎಸ್‌ಪಿ ನಿತಿನ್‌ ತಿವಾರಿ ಅವರು ಸ್ಥಳಕ್ಕಾಗಮಿಸಿ ಪರಿಶೀಲನೆ ನಡೆಸಿದ್ದು ಪತಿಯೇ ನಾಲ್ವರನ್ನು ಹತ್ಯೆಗೈದು ಆತ್ಮಹತ್ಯೆಗೈದಿರುವ ಬಗ್ಗೆ ಪ್ರಾಥಮಿಕ ತನಿಖೆಯಲ್ಲಿ ತಿಳಿದು ಬಂದಿದೆ ಎಂದು ಹೇಳಿದ್ದಾರೆ. 

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.