ಮುಜಾಫರ್ ಪುರ್ ಪ್ರಕರಣ : ಮಂಜು ವರ್ಮ, ಆಕೆಯ ಪತಿ ವಿರುದ್ಧ ಎಫ್ ಐಆರ್ ದಾಖಲು
ಮುಜಾಫರ್ ಪುರ್ ವಸತಿ ನಿಲಯಗಳಲ್ಲಿನ ಅತ್ಯಾಚಾರ ಪ್ರಕರಣಕ್ಕೆ ಸಂಬಂಧಿಸಿದಂತೆ ಬಿಹಾರದ ಮಾಜಿ ಸಮಾಜ ಕಲ್ಯಾಣ ಇಲಾಖೆ ಸಚಿವೆ ಮಂಜು ವರ್ಮ ಹಾಗೂ ಆಕೆಯ ಪತಿ ಚಂದ್ರಕಾಂತ್ ವರ್ಮಾ ವಿರುದ್ಧ ಶಸ್ತ್ರಾಸ್ತ್ರ ಕಾಯ್ದೆಯಡಿ ಎಫ್ ಐ ಆರ್ ದಾಖಲಿಸಲಾಗಿದೆ.

ಪಾಟ್ನಾ: ಮುಜಾಫರ್ ಪುರ್ ವಸತಿ ನಿಲಯಗಳಲ್ಲಿನ ಅತ್ಯಾಚಾರ ಪ್ರಕರಣಕ್ಕೆ ಸಂಬಂಧಿಸಿದಂತೆ ಬಿಹಾರದ ಮಾಜಿ ಸಮಾಜ ಕಲ್ಯಾಣ ಇಲಾಖೆ ಸಚಿವೆ ಮಂಜು ವರ್ಮ ಹಾಗೂ ಆಕೆಯ ಪತಿ ಚಂದ್ರಕಾಂತ್ ವರ್ಮಾ ವಿರುದ್ಧ ಶಸ್ತ್ರಾಸ್ತ್ರ ಕಾಯ್ದೆಯಡಿ ಎಫ್ ಐ ಆರ್ ದಾಖಲಿಸಲಾಗಿದೆ.
ಮಂಜು ಅವರ ಪಾಟ್ನಾದಲ್ಲಿನ ನಿವಾಸ ಸೇರಿದಂತೆ 12 ಕಡೆಗಳಲ್ಲಿ ಈ ಹಿಂದೆ ದಾಳಿ ನಡೆಸಿದ ಸಿಬಿಐ 50 ಕ್ಯಾಟ್ರಿಡ್ಜ್ ಗಳನ್ನು ವಶಪಡಿಸಿಕೊಂಡಿತ್ತು.
ಮುಜಾಫರ್ ಪುರ್ ವಸತಿ ನಿಲಯದ ಪ್ರಮುಖ ಆರೋಪಿ ಬ್ರಜೇಶ್ ಠಾಕೂರ್ ಅವರೊಂದಿಗೆ ಸಂರ್ಪಕ ಹೊಂದಿದ್ದ ಆರೋಪದ ಮೇರೆಗೆ ಮಾಜಿ ಬಿಹಾರ ಸಮಾಜ ಕಲ್ಯಾಣ ಸಚಿವ ದಾಮೊದರ್ ರಾವತ್ ಅವರನ್ನು ಸಿಬಿಐ ವಿಚಾರಣೆ ನಡೆಸಿದೆ.
ಈ ಪ್ರಕರಣದಲ್ಲಿ ಮಂಜು ವರ್ಮಾ ಅವರ ಪತಿ ಬಗ್ಗೆ ಆರೋಪಗಳು ಕೇಳಿಬಂದ ಹಿನ್ನೆಲೆಯಲ್ಲಿ ಆಗಸ್ಟ್ 9 ರಂದು ಮಂಜು ವರ್ಮಾ ಅವರಿಂದ ಮುಖ್ಯಮಂತ್ರಿ ನಿತಿಶ್ ಕುಮಾರ್ ರಾಜೀನಾಮೆ ಪಡೆದಿದ್ದರು.
ಮಂಜು ವರ್ಮಾ ಅವರ ಪತಿ ಚಂದ್ರಕಾಂತ್ ಆಗ್ಗಾಗೇ ಬಾಲಕಿಯರ ವಸತಿ ನಿಲಯಕ್ಕೆ ಹೋಗಿ ಬರುತ್ತಾರೆ ಎಂಬ ಆರೋಪ ಕೇಳಿಬಂದಿತ್ತು. ಆದಾಗ್ಯೂ, ದಂಪತಿ ಆರೋಪವನ್ನು ತಳ್ಳಿಹಾಕಿದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


