ದೇಶ

ಅಯೋಧ್ಯ ವಿವಾದ : ಸುಪ್ರೀಂಕೋರ್ಟ್ ನಿಂದ 'ಅನುಕೂಲಕರ' ತೀರ್ಪಿನ ಭರವಸೆ- ಮೌರ್ಯ

ರಾಮಜನ್ಮಭೂಮಿ ವಿವಾದಕ್ಕೆ ಸಂಬಂಧಿಸಿದ ವಿಚಾರಣೆ ಸುಪ್ರೀಂಕೋರ್ಟ್ ನಲ್ಲಿ ವಿಳಂಬವಾಗುತ್ತಿದ್ದು, ಉತ್ತರ ಪ್ರದೇಶ ಉಪಮುಖ್ಯಮಂತ್ರಿ ಕೇಶವ್ ಪ್ರಸಾದ್ ಮೌರ್ಯ ಅನುಕೂಲಕರ ತೀರ್ಪಿನ ಭರವಸೆ ವ್ಯಕ್ತಪಡಿಸಿದ್ದಾರೆ.

ಅಯೋಧ್ಯ ವಿವಾದ : ಸುಪ್ರೀಂಕೋರ್ಟ್ ನಿಂದ  'ಅನುಕೂಲಕರ' ತೀರ್ಪಿನ ಭರವಸೆ- ಮೌರ್ಯ
ಕೇಶವ ಪ್ರಸಾದ್ ಮೌರ್ಯ
Published On :

ಲಖನೌ:ರಾಮಜನ್ಮಭೂಮಿ ವಿವಾದಕ್ಕೆ ಸಂಬಂಧಿಸಿದ ವಿಚಾರಣೆ ಸುಪ್ರೀಂಕೋರ್ಟ್ ನಲ್ಲಿ ವಿಳಂಬವಾಗುತ್ತಿದ್ದು, ಉತ್ತರ ಪ್ರದೇಶ ಉಪಮುಖ್ಯಮಂತ್ರಿ ಕೇಶವ್ ಪ್ರಸಾದ್ ಮೌರ್ಯ  ಅನುಕೂಲಕರ ತೀರ್ಪಿನ ಭರವಸೆ  ವ್ಯಕ್ತಪಡಿಸಿದ್ದಾರೆ.

ವಿವಾದ ಇತ್ಯಾರ್ಥಕ್ಕೆ ಎರಡು ಮಾರ್ಗೋಪಾಯಗಳನ್ನು ಅವರು ನೀಡಿದ್ದು,  ಪಾಲುದಾರರ ನಡುವಿನ ಮಾತುಕತೆ ಪ್ರಕ್ರಿಯೆ ಆರಂಭಿಸುವಂತೆ ಅಥವಾ ಸಂಸತ್ತಿನಲ್ಲಿ  ಕಾನೂನು ಜಾರಿಗೊಳಿಸಬೇಕಾಗುತ್ತದೆ ಎಂದು ಹೇಳಿದ್ದಾರೆ.

ಸುಪ್ರೀಂಕೋರ್ಟ್ ನಿಂದ ಅನುಕೂಲಕರ ತೀರ್ಪು ಹೊರಬರುವ ವಿಶ್ವಾಸವಿದೆ , ಜನರು ಕೂಡಾ ಅಂತಹುದೇ ವಿಶ್ವಾಸದಲ್ಲಿದ್ದಾರೆ ಎಂದು ಅವರು ಸುದ್ದಿಸಂಸ್ಥೆಯೊಂದಕ್ಕೆ ತಿಳಿಸಿದ್ದಾರೆ.

ರಾಮ ಮಂದಿರದ ನಿರ್ಮಾಣಕ್ಕೆ ಸಂಬಂಧಿಸಿದ ಎಲ್ಲಾ ಅಡೆತಡೆಗಳನ್ನು ತೆಗೆದುಹಾಕುವ ಬಗ್ಗೆ  ಎಂದು ನನಗೆ ಖಚಿತವಿದೆ "ಎಂದು ಮೌರ್ಯ ಹೇಳಿದರು.

ಮೊಘಲ್ ಚಕ್ರವರ್ತಿ ಬಾಬರ್ ನಿಂದ   1528 ರಲ್ಲಿ ಬಾಬ್ರಿ ಮಸೀದಿ ಕಟಲ್ಪಟ್ಟಿದೆ. ರಾಮಮಂದಿರವನ್ನು ಧ್ವಂಸಗೊಳಿಸಿ ಮಸೀದಿ ನಿರ್ಮಾಣ ಮಾಡಲಾಗಿದೆ ಎಂದು ಆರೋಪಿಸಿ ಡಿಸೆಂಬರ್ 6, 1996ರಲ್ಲಿ ಹಿಂದೂ ಕಾರ್ಯಕರ್ತರು ಮಸೀದಿಯನ್ನು ಧ್ವಂಸಗೊಳಿಸಿದರು. ಆಗಿನಿಂದಲೂ ಸುಪ್ರೀಂಕೋರ್ಟ್ ನಲ್ಲಿ ಅನೇಕ ಬಾರಿ ವಿಚಾರಣೆ ನಡೆಯುತ್ತಲೇ ಇದೆ. ಇನ್ನೂ ತೀರ್ಪು ಹೊರಬಂದಿಲ್ಲ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.